Navaratri: ನವರಾತ್ರಿಯಲ್ಲಿ ಉಪವಾಸ ಮಾಡೋ ಪ್ಲಾನ್ ಏನಾದ್ರೂ ಉಂಟಾ ?! ಹಾಗಿದ್ರೆ ತಪ್ಪದೇ ಇವನ್ನು ಫಾಲೋ ಮಾಡಿ !

Lifestyle Navaratri festival 2023 follow these steps for Navaratri fasting

Navaratri fasting: ನವರಾತ್ರಿ (Navaratri) ಹಬ್ಬವನ್ನು ಸ್ವಚ್ಛತೆ ಮತ್ತು ಪರಿಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗಿದೆ. ನವರಾತ್ರಿಯ ಉಪವಾಸದಲ್ಲಿ(Navaratri fasting) ನಿಯಮಗಳು ಮತ್ತು ಸಂಯಮಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿ ಉಪವಾಸದಲ್ಲಿ ನಿಯಮಗಳನ್ನು ಪಾಲಿಸುವುದು ತುಂಬ ಅವಶ್ಯಕ. ನವರಾತ್ರಿಯಲ್ಲಿ 9 ದಿನಗಳ ಕಾಲ ದೇವಿಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ದುರ್ಗಾದೇವಿಯನ್ನು ಪೂಜಿಸಿ ಉಪವಾಸ ವ್ರತ ಮಾಡುವುದರಿಂದ ಭಕ್ತರ ಇಷ್ಟಾರ್ಥಗಳು ಬೇಗ ನೆರವೇರುತ್ತದೆ ಎಂದು ಹೇಳಲಾಗುತ್ತದೆ. ನವರಾತ್ರಿಯಲ್ಲಿ ಉಪವಾಸ ಮಾಡೋ ಪ್ಲಾನ್ ಏನಾದ್ರೂ ಉಂಟಾ ?! ಹಾಗಿದ್ರೆ ತಪ್ಪದೇ ಇವನ್ನು ಫಾಲೋ ಮಾಡಿ !

ನವರಾತ್ರಿ ಸಮಯದಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸುವುದು, ಉಪವಾಸ ಆಚರಿಸುವ ಸಮಯದಲ್ಲಿ ಆರೋಗ್ಯಕರ ಆಹಾರಶೈಲಿಯನ್ನು ಅನುಸರಿಸುವುದು ಅತ್ಯಂತ ಅಗತ್ಯ. ಯಾವುದನ್ನಾದರೂ ತಿನ್ನುತ್ತಿದ್ದರೆ ಹೊಟ್ಟೆ ಕೆಟ್ಟು ವ್ರಚಾಚರಣೆಗೆ ಭಂಗ ಉಂಟಾಗಬಹುದು. ಹೀಗಾಗಿ, ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ಉಪವಾಸ ಮಾಡುವ ಸಮಯದಲ್ಲಿ ಕೇವಲ ರುಚಿಯ ಬಗ್ಗೆ ಗಮನ ಹರಿಸಿದರೆ ಆರೋಗ್ಯದ ಸಮಸ್ಯೆ (Problem) ಉಂಟಾಗುವುದು. ದುರ್ಗಾ ದೇವಿಯನ್ನು ಆರಾಧಿಸುವ ಈ ಸಮಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕಾದುದು ಅತಿ ಅಗತ್ಯ. ಹಾಗಾಗಿ ನಿಮ್ಮ ದೇಹಕ್ಕೆ ಹೊಂದುವ ಆಹಾರಗಳನ್ನು ಮಾತ್ರವೇ ಸ್ವೀಕರಿಸಿ. ಹಣ್ಣುಗಳು (Fruits), ಮಖಾನ, ಕೆಂಪು ಅಕ್ಕಿಗಳ (Red Rice) ವಿವಿಧ ತಿನಿಸುಗಳನ್ನು ಮಾಡಿ ಸವಿಯಬಹುದು.

ಉಪವಾಸದ ಸಮಯದಲ್ಲಿ ಕರಿದ (Fried) ತಿಂಡಿಗಳನ್ನು ತಿನ್ನಬೇಡಿ. ಅತಿಯಾದ ಸಕ್ಕರೆಯುಕ್ತ (Sugary) ಪದಾರ್ಥದಿಂದ ದೂರವಿರಿ. ಇದರಿಂದ ನಿಮ್ಮ ತೂಕ (Weight) ಹೆಚ್ಚಬಹುದು. ಅತಿಯಾಗಿ ತಿನ್ನಬೇಡಿ. ಉಪವಾಸ ಮಾಡದೇ ಇರುವ ಸಮಯದಲ್ಲೂ ಅತಿಯಾಗಿ ತಿನ್ನಬೇಡಿ. ಊಟದ ಮಧ್ಯದ ಸಮಯದಲ್ಲಿ ತೀವ್ರ ಹಸಿವಾಗುತ್ತಿದ್ದರೆ ಆ ಸಮಯದಲ್ಲಿ ಹಣ್ಣುಗಳು ಸೇರಿದಂತೆ ಸುಲಭವಾಗಿ ಪಚನವಾಗುವ ತಿನಿಸು ಸೇವಿಸಿ. ಹಾಗೂ ನಿಮ್ಮ ಆಹಾರವನ್ನು ವಿಭಜಿಸಿಕೊಂಡು ಮೂರು ಬಾರಿಯ ಬದಲು ಐದು ಬಾರಿ ಆಹಾರ ಸೇವನೆ ಮಾಡಿ. ಒಣ್ಣಹಣ್ಣುಗಳನ್ನು ಸೇವನೆ ಮಾಡುವುದು ಅತ್ಯಂತ ಒಳ್ಳೆಯದು. ಇದರಿಂದ ದೇಹದಲ್ಲಿ ಉತ್ಸಾಹ ಇರುತ್ತದೆ.

ಉಪವಾಸದ ಸಮಯದಲ್ಲಿ ಹೆಚ್ಚು ನೀರು ಸೇವನೆ ಅತ್ಯಗತ್ಯ. ಬಹಳಷ್ಟು ಮಹಿಳೆಯರು (Woman) ಹೆಚ್ಚು ನೀರು ಕುಡಿಯದೇ ಆರೋಗ್ಯದಲ್ಲಿ ಸಮಸ್ಯೆ ಉಂಟುಮಾಡಿಕೊಳ್ಳುತ್ತಾರೆ. ಮಜ್ಜಿಗೆ, ಎಳೆನೀರು, ಮಿಲ್ಕ್‌ ಶೇಕ್‌, ಜ್ಯೂಸ್‌ (Juice) ಗಳನ್ನೂ ಸೇವನೆ ಮಾಡಬಹುದು. ಹಬ್ಬದ ಸಂಭ್ರಮ, ಗಡಿಬಿಡಿಯಲ್ಲಿ ನಿದ್ರೆ ಸರಿಯಾಗಿ ಮಾಡಿಲ್ಲವೆಂದರೆ, ಆಸಿಡಿಟಿ, ಗ್ಯಾಸ್ಟ್ರಿಕ್‌, ವೀಕ್‌ ನೆಸ್‌, ತಲೆನೋವು (Headache) ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ.

ಸಂಸ್ಕರಿತ ಆಹಾರದಲ್ಲಿ ಸಿಕ್ಕಾಪಟ್ಟೆ ಪ್ರಿಸರ್ವೇಟಿವ್ಸ್‌ ಇರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಚಿಪ್ಸ್‌ ಮುಂತಾದ ಸಂಸ್ಕರಿತ ತಿನಿಸುಗಳಲ್ಲಿ ಉಪ್ಪು ಮತ್ತು ಕೊಬ್ಬಿನಂಶವಲ್ಲದೆ ಬೇರೆ ಏನೂ ಇರುವುದಿಲ್ಲ. ಇವುಗಳನ್ನು ಕಳಪೆ ಗುಣಮಟ್ಟದ ಎಣ್ಣೆಯಿಂದ ತಯಾರಿಸಲಾಗುತ್ತದೆ. ಇವುಗಳನ್ನು ಸೇವನೆ ಮಾಡುವುದರಿಂದ ದೇಹ ಹಗುರವಾಗಿ ಇರುವುದಿಲ್ಲ. ಅನಾರೋಗ್ಯ ಉಂಟಾಗುತ್ತದೆ. ದೈಹಿಕ ಅಸ್ವಸ್ಥತೆ ಕಂಡುಬರುತ್ತದೆ.

ಇದನ್ನೂ ಓದಿ:  Cricketer Adam Gilchrist : ಈ ಸಲ ಕ್ರಿಕೆಟ್ ವಿಶ್ವಕಪ್ ಗೆಲ್ಲೋದು ಯಾರು ಗೊತ್ತಾ ?! ಸ್ಪೋಟಕ ಭವಿಷ್ಯ ನುಡಿದ ಆಡಂ ಗಿಲ್‌ಕ್ರಿಸ್ಟ್‌ !

Leave A Reply

Your email address will not be published.