Heart Attack: ಕಾರು ಚಲಾಯಿಸುತ್ತಿರುವಾಗ ಹೃದಯಾಘಾತಕ್ಕೊಳಗಾದ RSS ಮುಖಂಡ ಸಾವು!

Karnataka news RSS leader dies of heart attack at Bagalkote latest news

Bagalkote: RSS ಜಿಲ್ಲಾ ಘಟಕದ ಮುಖಂಡ ಸಿದ್ದು ಚಿಕ್ಕದಾನಿ (45) ಎಂಬುವವರಿಗೆ ಕಾರಿನಲ್ಲೇ ಹೃದಯಾಘಾತವಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಬಾಗಲಕೋಟೆ( Bagalkote)ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಪಟ್ಟಣದಲ್ಲಿ ನಡೆದಿದೆ.

ತನ್ನ ಕಾರಿಗೆ ಡೀಸೆಲ್‌ ತುಂಬಿಸಲು ನಿನ್ನೆ ರಾತ್ರಿ ಮುಧೋಳ ತಾಲ್ಲೂಕಿನ ಲೋಕಾಪುರ ಪಟ್ಟಣದ ಪೆಟ್ರೋಲ್‌ ಪಂಪ್ ಗೆ ಬಂದಿದ್ದರು. ನಂತರ ವಾಪಸ್‌ ಹೊರಟು ಗಾಡಿ ಸ್ಟಾರ್ಟ್‌ ಮಾಡಿ ಸ್ವಲ್ಪ ಮುಂದೆ ಹೋಗಿದ್ದರಷ್ಟೇ. ಅಷ್ಟರಲ್ಲಾಗಲೇ ಅವರಿಗೆ ಹೃದಯಾಘಾತವಾಗಿದೆ.

ಪೆಟ್ರೋಲ್‌ ಪಂಪ್‌ ಆವರಣದಲ್ಲೇ ಅವರ ಕಾರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ ಬೆಳಗ್ಗಿನವರೆಗೂ ಯಾರಿಗೂ ಈ ವಿಷಯ ತಿಳಿದಿರಲಿಲ್ಲ.

ಬೆಳಗ್ಗಿನವರೆಗೂ ಅವರು ಕಾರಿನಲ್ಲೇ ಇದ್ದರು ಎನ್ನಲಾಗಿದೆ. ಬೆಳಿಗ್ಗೆ ಪಂಪ್‌ ಕಾರ್ಮಿಕರು ಕೆಲಸಕ್ಕೆ ಬಂದಾಗ ರಾತ್ರಿಯಿಂದ ನಿಂತಲ್ಲೇ ಇದ್ದ ಕಾರನ್ನು ಗಮನಿಸಿ, ಕಾರಿನ ಬಾಗಿಲು ತೆಗೆದಾಗ ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ. ನಂತರ ಅವರು ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಭೀಕರ ಅಪಘಾತ: ಟೆನ್ಷನ್ ನಲ್ಲಿ ಬ್ರೇಕ್ ಬದಲು ಕಾರಿನ ಆ್ಯಕ್ಸಿಲರೇಟರ್ ಒತ್ತಿದ ಪ್ರೊಫೆಸರ್!

Leave A Reply

Your email address will not be published.