Rape on Student: ಶಾಲೆಯಲ್ಲಿ ಹೊಟ್ಟೆನೋವೆಂದು ಚೀರಾಡಿದ ಬಾಲಕಿ, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಯಲಾಯ್ತು ರಹಸ್ಯ ವಿಷಯ!! ಏನದು?

crime news rape on school student in ramanagara magadi latest news

Rape on Student: ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಸಂಬಂಧ ಗುರು ಶಿಷ್ಯರದ್ದು. ಸಮಾಜದಲ್ಲಿ ಗುರು ತನ್ನ ವಿದ್ಯಾರ್ಥಿಗಳನ್ನು ಎತ್ತರದ ಸ್ಥಾನಕ್ಕೆ ಏರಲು ಸಕಲ ಪ್ರಯತ್ನ ಮಾಡುತ್ತಾರೆ. ಆದರೆ ಇತ್ತೀಚೆಗೆ ಈ ಸಂಬಂಧಕ್ಕೂ ಕಳಂಕ ತರುವಂತಹ ಹಲವಾರು ಘಟನೆಗಳು ನಡೆದಿದೆ.

ಇದಕ್ಕೆ ಉದಾಹರಣೆ ಎಂಬಂತೆ, ಸಂಗೀತ ಶಿಕ್ಷಕನೋರ್ವ ತನ್ನಲ್ಲಿಗೆ ಸಂಗೀತ ಕಲಿಯಲು ಬರುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರ (Rape on Student)ಮಾಡಿರುವ ಘಟನೆಯೊಂದು ಮಾಗಡಿಯಲ್ಲಿ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

48 ವರ್ಷದ ಮಾಗಡಿ ಪಟ್ಟದ ಸಂಗೀತ ಶಿಕ್ಷಕನೋರ್ವ ಸಂಗೀತ ಕಲಿಸುವ ನೆಪದಲ್ಲಿ 17ವರ್ಷದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಾನೆ. ಆದರೆ ಈ ವಿಷಯ ಶಾಲೆಯಲ್ಲಿದ್ದಾಗ ಹೊರಗೆ ಬಂದಿದೆ. ಅದೇಗೆ ಅಂತೀರಾ? ವಿದ್ಯಾರ್ಥಿನಿಗೆ ಒಂದು ದಿನ ಶಾಲೆಯಲ್ಲಿ ವಿಪರೀತ ಹೊಟ್ಟೆನೋವು ಉಂಟಾಗಿ ಹೊಟ್ಟೆ ಹಿಡಿದುಕೊಂಡು ಒದ್ದಾಡಿದ್ದಾಳೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಪಾಸಣೆ ಸಂದರ್ಭ ವಿದ್ಯಾರ್ಥಿನಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Harrassement Case: ಸಾಲದ ಕಂತು ಕಟ್ಟದ ಮಹಿಳೆಗೆ ದಿಗ್ಭಂಧನ ಹಾಕಿದ ಫೈನಾನ್ಸ್‌ ಸಂಸ್ಥೆ! ನೊಂದ ರೈತ ಮಹಿಳೆ ಮಾಡಿದ್ದೇನು?

Leave A Reply

Your email address will not be published.