Harrassement Case: ಸಾಲದ ಕಂತು ಕಟ್ಟದ ಮಹಿಳೆಗೆ ದಿಗ್ಭಂಧನ ಹಾಕಿದ ಫೈನಾನ್ಸ್‌ ಸಂಸ್ಥೆ! ನೊಂದ ರೈತ ಮಹಿಳೆ ಮಾಡಿದ್ದೇನು?

Chikkamagaluru harrassment case woman death after harrassment by finance staff

Harrassement Case: ಸಾಲದ ಕಂತು ಕಟ್ಟಿಲ್ಲವೆಂದರೆ ಸಾಲ ಮಾಡಿದವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುವಂತಹ ಕೆಲವೊಂದು ಕೃತ್ಯಗಳು ಅಲ್ಲಲ್ಲಿ ನಡೆಯುತ್ತಿರುವ ಕುರಿತು ವರದಿಯಾಗುವುದನ್ನು ನೀವು ಕಂಡಿರಬಹುದು. ಇದೀಗ ಅಂತಹುದೇ ಒಂದು ಕೃತ್ಯಕ್ಕೆ ನೊಂದ ಮಹಿಳೆಯೊರ್ವರು ತನ್ನ ಪ್ರಾಣವನ್ನೇ ಕಳೆದುಕೊಂಡಿರುವಂತಹ ಘಟನೆಯೊಂದು ನಡೆದಿದೆ.

ಚಿಕ್ಕಮಗಳೂರಿನ ಕಡೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಮೈಕ್ರೋ ಫೈನಾನ್ಸ್‌ ಸಂಸ್ಥೆಯ ಸಿಬ್ಬಂದಿ ಕಿರುಕುಳಕ್ಕೆ ನೊಂದ ಮಹಿಳೆ ದೇವೀರಮ್ಮ (64) ಪ್ರಾಣ ಕಳೆದುಕೊಂಡಿದ್ದಾರೆ.

ಮಳೆ ಇಲ್ಲದ ಕಾರಣ ಸಾಲ ತೀರಿಸಲು ಸಾಧ್ಯವಾಗದ ಕಾರಣ ಪ್ರತಿ ದಿನ ಫೋನ್‌ ಮಾಡಿ, ಮನೆಗೆ ಭೇಟಿ ನೀಡಿ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಕೊನೆಗೆ ಮಹಿಳೆಯನ್ನು ಫೈನಾನ್ಸ್‌ಗೆ ಬಂದು ಮಾತನಾಡಿ ಎಂದು ಹೇಳಲಾಗಿತ್ತು. ಅಲ್ಲಿಗೆ ಹೋಗಿ ಸಮಸ್ಯೆ ವಿವರಿಸಿ, ಸ್ವಲ್ಪ ಸಮಯಾವಕಾಶ ಕೇಳುವುದು ಎಂದು ದೇವೀರಮ್ಮ ನಿರ್ಧರಿಸಿದ್ದರು. ಆದರೆ ಒಮ್ಮೆ ಫೈನಾನ್ಸ್‌ಗೆ ಬಂದ ಮಹಿಳೆಗೆ ವಿಪರೀತ ಕಿರುಕುಳ(Harrassement Case) ನೀಡಲಾಗಿದೆ. ಹೊರಗೆ ಹೋಗಲು ಬಿಟ್ಟಿಲ್ಲ. ಕೊನೆಗೆ ಸಂಜೆಯ ಹೊತ್ತಿಗೆ ಕಚೇರಿಯಿಂದ ಹೊರಕ್ಕೆ ಬಿಡಲಾಯಿತು.

ಕೊನೆಗೆ ಅಪಮಾನಿತರಾಗಿ ಮನೆಗೆ ಬಂದ ದೇವೀರಮ್ಮ ಮನನೊಂದು ನೇಣು ಬಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ಕಡೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Girl Child: ಹೆಣ್ಣುಮಗುವನ್ನು ಹೆತ್ತ ಪೋಷಕರಿಗೆ ಗುಡ್‌ನ್ಯೂಸ್‌; ಸಿಗಲಿದೆ 2 ಲಕ್ಷದವರೆಗೆ ಪ್ರೋತ್ಸಾಹ ಧನ- ಸಿಎಂ ಘೋಷಣೆ!!!

Leave A Reply

Your email address will not be published.