Dharmasthala: ಮತ್ತೊಂದು ಅಸಹಜ ಸಾವು ಶಂಕೆ ! ಕಬ್ಬಿಣದ ಕಡಾಯಿಯಲ್ಲಿತ್ತು ಶವ – ರೈಸ್ ಆಯಿಲ್ ಫ್ಲೋರ್ ಮಿಲ್ಸ್ ಕಾರ್ಮಿಕ ಕೃಷ್ಣಪ್ಪ ಸಫಲ್ಯ ಅನುಮಾನಾಸ್ಪದ ಸಾವು !

Latest news Dharmasthala Suspicious death of rice oil flour mill worker Krishnappa Saphalya

Dharmasthala: ಧರ್ಮಸ್ಥಳದಲ್ಲಿ ಮತ್ತೊಂದು ಅನುಮಾನಾಸ್ಪದ ಸಾವು ಸಂಭವಿಸಿದೆ. ಘಟನೆಯ ವಿವರಣೆಯನ್ನು ನೋಡಿದಾಗ ಅದು ಅತ್ಮಹತ್ಯೆ ಅನ್ನಿಸದೇ, ಅದು ಕೊಲೆಯಾಗಿರುವ ಸ್ಪಷ್ಟ ಸಾಧ್ಯತೆಗಳಿವೆ. 60 ವರ್ಷ ಪ್ರಾಯದ ಕೃಷ್ಣಪ್ಪ ಸಫಲ್ಯ ಎಂಬವರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಕುರಿತು ಅವರ ಪುತ್ರ ವಿನಯ್ ಕುಮಾರ್ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಇದೀಗ ದೂರು ದಾಖಲಾಗಿದೆ. ಕಬ್ಬಿಣದ ಕಡಾಯಿಯಲ್ಲಿ ಕವಚಿ ಬಿದ್ದ ಹಾಗೆ ಕಬ್ಬಿಣದ ತೊಟ್ಟಿಯಲ್ಲಿ ಶವ ಕಂಡು ಬಂದಿದೆ. ಆ ಕಡಾಯಿಯಲ್ಲಿ ನೀರಿದ್ದು ಅದರಲ್ಲಿ ಶವ ತೇಲುತ್ತಿತ್ತು. ಅಲ್ಲದೆ ಶವ ಇದ್ದ ಕಡಾಯಿಯ ಬಾಯಿಯನ್ನು ಅರ್ಧ ಭಾಗ ಮುಚ್ಚಲಾಗಿತ್ತು.

ಆತ್ಮಹತ್ಯೆಯ ಅಥವಾ ಕೊಲೆಯಾ ?! ಘಟನೆಯ ಪೂರ್ತಿ ವಿವರ:
ಕೃಷ್ಣಪ್ಪ ಸಫಲ್ಯರು ಧರ್ಮಸ್ಥಳ ದೇವಸ್ಥಾನದ ಶ್ರೀ ಚಂದ್ರನಾಥ ರೈಸ್ ಆಯಿಲ್ ಫ್ಲೋರ್ ಮಿಲ್ಸ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಸೆ.3 ರಂದು ಬೆಳಿಗ್ಗೆ ರೈಸ್ ಮಿಲ್ಲಿಗೆ ಹೋದವರು ಮತ್ತೆ ಮಧ್ಯಾಹ್ನ ಅವರು ಮನೆಗೆ ಮರಳಿ ಬಂದಿರಲಿಲ್ಲ. ಮತ್ತೆ ಅವರನ್ನ ಯಾರೂ ಜೀವಂತ ನೋಡಿರಲಿಲ್ಲ. ಅದೇ ದಿನ ಸಂಜೆ ಧರ್ಮಸ್ಥಳ ದೇವಸ್ಥಾನದ ಜಮಾ ಉಗ್ರಾಣದ ಮ್ಯಾನೇಜರ್ ಶ್ರೀಧರ ಹೆಗ್ಡೆ ಎಂಬವರು ಬಂದು ಕೃಷ್ಣಪ್ಪ ಸಫಲ್ಯರವರು ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿಸಿಟ್ಟಿರುವ ದೊಡ್ಡ ಗಾತ್ರದ ಸ್ಟೀಲ್ ಪಾತ್ರೆಯ ಒಳಗೆ ನೀರಿನಲ್ಲಿ ಕವುಚಿ ತೇಲಿಕೊಂಡು ಮೃತಪಟ್ಟಿರುವ ರೀತಿಯಲ್ಲಿ ಇದ್ದಾರೆ ಎಂದು ಸಪಲ್ಯ ಅವರ ಮನೆಗೆ ಬಂದು ತಿಳಿಸಿದ್ದಾರೆ ಎನ್ನಲಾಗಿದೆ. ಆಗ ಸಪಲ್ಯ ಅವರ ಸಾವಿನ ಸತ್ಯ ಬಹಿರಂಗ ಆಗಿದೆ.

ಕೊಲೆಯ ಸ್ಪಷ್ಟ ಅನುಮಾನ:

ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿಸಿಟ್ಟಿರುವ ದೊಡ್ಡ ಗಾತ್ರದ ಸ್ಟೀಲ್ ಪಾತ್ರೆಯ ಒಳಗೆ ನೀರಿನಲ್ಲಿ ಕವುಚಿ ತೇಲಿಕೊಂಡು ಮೃತಪಟ್ಟಿರುವ ರೀತಿಯಲ್ಲಿ ಇದ್ದಾರೆ ಎಂದು ತಿಳಿಸಿದ್ದು, ಹೋಗಿ ನೋಡಲಾಗಿ ಸ್ಟೀಲ್ ಪಾತ್ರೆಯ ಮೇಲ್ಭಾಗವನ್ನು ಅರ್ಧದಷ್ಟು ಸಿಮೆಂಟ್ ಶೀಟ್ ನ್ನು ಮುಚ್ಚಿತ್ತು. ಸದರಿ ಕೃಷ್ಣಪ್ಪ ಸಫಲ್ಯ (60) ರವರು ಸ್ಟೀಲ್ ದೊಡ್ಡ ಗಾತ್ರದ ಪಾತ್ರೆಯಲ್ಲಿ ತುಂಬಿಸಿಟ್ಟಿದ್ದ ನೀರಿಗೆ ಇಳಿದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಂತೆ ಕಂಡು ಬಂದಿದ್ದರು ಅನ್ನೋದು ಕೆಲವರ ಹೇಳಿಕೆ. ಆದರೆ ದೊಡ್ಡ ಓಪನ್ ಬಾಯಿ ಇರುವ ಸಣ್ಣ ನೀರಿನ ಡ್ರಮ್ಮಿಗೆ ಯಾರಾದ್ರೂ ಯಾಕೆ ಇಳೀತಾರೆ ಅನ್ನೋದೇ ದೊಡ್ಡ ಪ್ರಶ್ನೆ. ಒಬ್ಬರು ನೀರಿನ ಟಿಯಾಂಕಿಗೆ ಇಳಿಯೋದು ಟ್ಯಾಂಕ್ ಕ್ಲೀನ್ ಮಾಡಲು. ಹಾಗೆ ಸ್ಟೀಲಿನ ನೀರಿನ ಟ್ಯಾಂಕಿಗೆ ಇಳಿದು, ಅದಕ್ಕೆ ನೀರು ತುಂಬಿಸಿ ಅದರಲ್ಲಿ ಮುಳುಗೋದು ಹೇಗೆ ಸಾಧ್ಯ ? ಅಲ್ಲದೆ, ಅಲ್ಲಿ ಸತ್ತ ನಂತರ ಮತ್ತೆ ನೀರಿನ ಡ್ರಮ್ಮಿನ ಮುಚ್ಚಳವನ್ನು ಸಿಮೆಂಟ್ ಶೀಟ್ ಬಳಸಿ ಮುಚ್ಚಲು ಹೇಗೆ ಸಾಧ್ಯ ? ಅದು ಹೇಗೆ ಆತ್ಮಹತ್ಯೆ ಶಂಕೆ ಅಂತ ಪ್ರಚಾರ ಬಂತೋ ಗೊತ್ತಿಲ್ಲ, ಪೊಲೀಸರು ಕೊಲೆಯ ಆಯಾಮದಲ್ಲಿಯೇ ತನಿಖೆ ನಡೆಸಬೇಕಿದೆ. ಇದು ಸದ್ಯಕ್ಕೆ ಯಾವುದೇ ಆತ್ಮಹತ್ಯೆಯ ಥರ ಯಾವುದೇ ಕೋನದಲ್ಲೂ ಕಾಣಿಸುವುದಿಲ್ಲ. ಇದನ್ನು ಆತ್ಮಹತ್ಯೆ ಎಂದು ನಂಬಲು ಅಸಾಧ್ಯ.

ಇನ್ನು ಪೋಲೀಸರ ನಿಯತ್ತಿನ ಕೆಲಸ ಬಾಕಿ:

ಪ್ರಕರಣದ ಕಂಪ್ಲೇಂಟ್ ದಾರ ಧರ್ಮಸ್ಥಳ ಗ್ರಾಮ, ಮೃತರ ಮಗ ವಿನಯ್ ಕುಮಾರ್ (33) ಎಂಬವರ ದೂರಿನಂತೆ, ತಂದೆ ಕೃಷ್ಣಪ್ಪ ಸಫಲ್ಯರವರು ಧರ್ಮಸ್ಥಳ ದೇವಸ್ಥಾನದ ಬಾಬ್ತು ಶ್ರೀ ಚಂದ್ರನಾಥ ರೈಸ್ ಆಯಿಲ್ ಫ್ಲೋರ್ ಮಿಲ್ಸ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಪ್ರತಿನಿತ್ಯ ಮದ್ಯ ಸೇವನೆ ಮಾಡುವ ಚಟ ಹೊಂದಿರುತ್ತಾರೆ ಎನ್ನಲಾಗಿದೆ.ಆದರೆ ಕುಡಿತದ ಅಭ್ಯಾಸ ಇರುವವರನ್ನು ಧರ್ಮಸ್ಥಳದಲ್ಲಿ ಕೆಲಸಕ್ಕೆ ಇಟ್ಟುಕೊಳ್ಳೋದಿಲ್ಲ ಅನ್ನೋದು ಎಲ್ಲರಿಗೂ ತಿಳಿದ ವಿಷ್ಯವೇ. ಹಾಗಾಗಿ ಅವರು ಕುಡಿದು ನೀರಿನ ಟ್ಯಾನಿಕ್ಗೆ ಬಿದ್ದಿರುವ ಸಾಧ್ಯತೆ ಕಮ್ಮಿ. ಹಾಗೊಮ್ಮೆ ಬಿದ್ದರೂ, ಟ್ಯಾಂಕ್ ನ ಮುಚ್ಚಳವನ್ನು ಅವರೇ ಮುಚ್ಚಿದರಾ ? ಹೀಗೆ, ಹಾಸ್ಯಾಸ್ಪದ ಕಥೆಗಳನ್ನು ಹರಿಬಿಡಲಾಗುತ್ತಿದೆ. ಈಗ ಮಗ ತನ್ನ ತಂದೆಯವರ ಮರಣದ ಸರಿಯಾದ ಕಾರಣ ತಿಳಿದು ಬಾರದಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬೇಕಿದೆ. ಇನ್ನು ಧರ್ಮಸ್ಥಳ ಪೋಲೀಸರ ಕೆಲಸ. ಇಲ್ಲಿನ ಪೊಲೀಸರು ಈ ಬಾರಿ ಬೆಲ್ಟ್ ಬಿಗಿದು ನಿಯತ್ತಾಗಿ ಈ ಸಾವಿನ ಮಿಸ್ಟರಿ ಹೊರ ತರಬೇಕಿದೆ.

ಇದನ್ನು ಓದಿ: Death News: ಪುಸ್ತಕಕ್ಕಾಗಿ ಬ್ಯಾಗಿಗೆ ಕೈ ಹಾಕಿ ಪ್ರಾಣ ಬಿಟ್ಟ ವಿದ್ಯಾರ್ಥಿ ?! ಕಾರಣವೇನು ಗೊತ್ತಾ?

Leave A Reply

Your email address will not be published.