Congress government: ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ದೊಡ್ಡ ಆಘಾತ- ‘ನಾನು ಕಾಂಗ್ರೆಸ್ ಶಾಸಕಿಯಲ್ಲ’ ಎಂದು ಶಾಕಿಂಗ್ ಹೇಳಿಕೆ ನೀಡಿದ ಶಾಸಕಿ !!

Latest news political news congress government MLA said that I am not a Congress MLA

Congress government : ನಾನು ಪಕ್ಷೇತರವಾಗಿ ಸ್ಪರ್ಧಿಸಿ, ಗೆದ್ದವಳು. ಹೀಗಾಗಿ ನಾನು ಪಕ್ಷೇತರ ಶಾಸಕಿ. ಯಾರು ಸರ್ಕಾರ ರಚನೆ ಮಾಡಿದ್ರು ಕೂಡ ಅವರಿಗೆ ನಮ್ಮ ಬೆಂಬಲ ಇರುತ್ತದೆ. ಆದರೆ ನಾನು ಕಾಂಗ್ರೆಸ್ ಶಾಸಕಿ ಅಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ(Congress government)ಪರೋಕ್ಷ ವಾಗಿ ಹರಪನಹಳ್ಳಿ ಶಾಸಕಿ ಎಂ ಪಿ ಲತಾ(M P Latha) ಅವರು ಶಾಕ್ ನೀಡಿದ್ದಾರೆ.

ಹೌದು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿಯಾರುವ ಎಂ. ಪಿ ಲತಾ ಅವರು ಇತ್ತೀಚೆಗಷ್ಟೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೀಗ ನಾನು ಕಾಂಗ್ರೆಸ್ (Congress) ಸದಸ್ಯೆಯಲ್ಲ, ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ ಎಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿ (Harpanahalli) ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ (MP Latha Mallikarjun) ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಅಂದಹಾಗೆ ಒಂದು ಕಡೆ ಕಾಂಗ್ರೆಸ್ ಸರ್ಕಾರದಲ್ಲಿ ವೀರಶೈವ ಲಿಂಗಾಯಿತರನ್ನು ಕಡೆಗಣನೆ ಮಾಡಲಾಗುತ್ತದೆ ಎನ್ನುವ ಕೂಗು ಕೇಳಿ ಬರುತ್ತಿರೋ ಬೆನ್ನಲ್ಲೇ.. ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಸೇರ್ಪಡೆಯಾದ ಆ ಮಹಿಳಾ ವೀರಶೈವ ಲಿಂಗಾಯಿತ ಶಾಸಕಿ ನಾನು ಕಾಂಗ್ರೆಸ್ ಸೇರಿಲ್ಲ. ಕೇವಲ ಸರ್ಕಾರಕ್ಕೆ ಬೆಂಬಲ ನೀಡಿದ್ದೇನೆ ಎನ್ನುತ್ತಿದ್ದಾರೆ. ನಾನು ಪಕ್ಷೇತರಳು ಯಾರು ಸರ್ಕಾರ ರಚನೆ ಮಾಡಿದ್ರು ಅವರಿಗೆ ನಮ್ಮ ಬೆಂಬಲ ಇರುತ್ತದೆ ಎನ್ನುವ ಮೂಲಕ ಸರ್ಕಾರಕ್ಕೆ ಪರೋಕ್ಷ ವಾಗಿ ಶಾಕ್ ನೀಡಿದ್ದಾಳೆ.

ಹರಪನಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ ಸಮ್ಮುಖದಲ್ಲಿ ಶಾಸಕಿ ಲತಾ ಮಲ್ಲಿಕಾರ್ಜುನ ಈ ಹೇಳಿಕೆ ನೀಡಿದ್ದಾರೆ. ಇದೀಗ ಅಚ್ಚರಿಯ ಹೇಳಿಕೆ ನೀಡಿರುವ ಶಾಸಕಿ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಯಾರು ಈ ಎಂ ಪಿ ಲತಾ?
ರಾಜ್ಯದ ಪ್ರಭಾವಿ ರಾಜಕಾರಣಿಯಾಗಿದ್ದ ಎಂ ಪಿ ಪ್ರಕಾಶ್ ಅವರ ಮಗಳೆ ಈ ಎಂ ಪಿ ಲತಾ. ಎಂ.ಪಿ ಪ್ರಕಾಶ ಮೂರ್ನಾಲ್ಕು ಬಾರಿ ಮಂತ್ರಿಯಾಗಿದ್ದಷ್ಟೇ ಅಲ್ಲದೇ ಒಮ್ಮೆ ಉಪಮುಖ್ಯಮಂತ್ರಿಯಾಗಿದ್ರು. ಅವರ ಮಗ ಎಂ.ಪಿ.ರವೀಂದ್ರ ಕೂಡ ಶಾಸಕರಾಗೋ ಮೂಲಕ ಸೇವೆಯನ್ನು ಸಲ್ಲಿಸಿದ್ರು. ಇದೀಗ ಅವರಿಬ್ಬರು ಇಲ್ಲ. ಆದ್ರೇ ಮೊನ್ನೆ ನಡೆದ ಚುನಾವಣೆ ಎಂ.ಪಿ. ಪ್ರಕಾಶ ಮಗಳಾದ ಎಂ.ಪಿ. ಲತಾ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಲಿಲ್ಲ. ಆದ್ರೂ ಹಠ ಬಿಡದೇ ಪಕ್ಷೇತರರಾಗಿ ನಿಂತು ಸ್ಪರ್ಧೆ ಮಾಡಿದ ಲತಾ ಭರ್ಜರಿ ಗೆಲುವನ್ನು ಸಾಧಿಸಿದ್ರು. ಗೆದ್ದ ಮಾರನೇ ದಿನವೇ ಸಿದ್ದರಾಮಯ್ಯ ಬಳಿಗೆ ಹೋದ ಶಾಸಕಿ ಲತಾ ತಮ್ಮ ಬೆಂಬಲ ಕಾಂಗ್ರೆಸ್ಗೆ ಇದೆ. ಮತ್ತು ತಾವು ಮೊದಲಿಂದಲೂ ಕಾಂಗ್ರೆಸ್ನಲ್ಲಿಯೇ ಇರೋದು ಟಿಕೆಟ್ ಸಿಗದ ಹಿನ್ನೆಲೆ ಮಾತ್ರ ಪಕ್ಷೇತರರಾಗಿ ಕಣಕ್ಕಿಳಿದಿರೋದು ಎಂದೆಲ್ಲ ಹೇಳಿ ಕಾಂಗ್ರೆಸ್ ಸೇರಿಕೊಂಡರು. ಆದರೀಗ ಉಲ್ಟಾ ಹೊಡೆದಿರುವುದು ಕಾಂಗ್ರೆಸ್ ಗೆ ಭಾರೀ ದೊಡ್ಡ ಆಘಾತ ಉಂಟುಮಾಡಿದೆ.

 

ಇದನ್ನು ಓದಿ: Bar at Home: ಮದ್ಯಪ್ರಿಯರಿಗೊಂದು ಭರ್ಜರಿ ಸಿಹಿ ಸುದ್ದಿ! ಇನ್ನು ಮನೆಯಲ್ಲಿ ಬಾರ್‌ ತೆರೆಯಬಹುದು, ಏನಿದು ಹೊಸ ಸುದ್ದಿ ಅಂತೀರಾ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

Leave A Reply

Your email address will not be published.