Own Flat Purchase: ಸ್ವಂತ ಮನೆ ಕಟ್ಟಬೇಕೆಂದು ಆಸೆಯಲ್ಲಿದ್ದೀರಾ ?! ಹಾಗಿದ್ರೆ ಕೇಂದ್ರದಿಂದ ಬಂತು ನೋಡಿ ಗುಡ್ ನ್ಯೂಸ್ !

Intresting news Own Flat Purchase Good news for those who want to build their own house

Own Flat Purchase : ಈಗಾಗಲೇ ಕೆಲವರು ಮನೆ ಕಟ್ಟಿರುತ್ತಾರೆ ಅಥವಾ ಖರೀದಿಸಿರುತ್ತಾರೆ. ಆದರೆ ಇನ್ನು ಕೆಲವರು ಮನೆ (home) ಖರೀದಿಸಲು ಯೋಜನೆ ರೂಪಿಸಿರುತ್ತಾರೆ. ಪುಟ್ಟದಾದರೂ ಸರಿ ಸ್ವಂತ ಮನೆಯನ್ನು (Own Flat Purchase) ಹೊಂದಿರಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ, ಇಂದಿನ ದಿನದಲ್ಲಿ ಮನೆ ಖರೀದಿಸೋದು ಭಾರೀ ಕಷ್ಟ. ನೀವು ಸ್ವಂತ ಮನೆ ಕಟ್ಟಬೇಕೆಂದು ಆಸೆಯಲ್ಲಿದ್ದೀರಾ ?! ಹಾಗಿದ್ರೆ ಕೇಂದ್ರದಿಂದ ಬಂತು ನೋಡಿ ಗುಡ್ ನ್ಯೂಸ್ !

ಕೇಂದ್ರ ಸರ್ಕಾರ ಇದೀಗ ಸ್ವಂತ ಮನೆ ಹೊಂದುವ ಮಧ್ಯಮ ವರ್ಗದವರಿಗೆ ಹೊಸ ಯೋಜನೆಯನ್ನು ಘೋಷಣೆ ಮಾಡಿದೆ. ಕೇಂದ್ರವು ಹೊಸ ಯೋಜನೆಯನ್ನು ಪ್ರಾರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಸಚಿವ ಹರ್ದೀಪ್ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ “ನಾವು ಹೊಸ ಹೋಮ್ ಸಬ್ಸಿಡಿ ಯೋಜನೆಯ ವಿವರಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದೇವೆ. ಪ್ರಧಾನಿ ಹೇಳಿದಂತೆ ಇದೊಂದು ದೊಡ್ಡ ಯೋಜನೆ. ಇದು ಒಂದಲ್ಲ ಒಂದು ರೂಪದಲ್ಲಿ ಬಡ್ಡಿ ಸಹಾಯಧನವನ್ನು ಒದಗಿಸುತ್ತದೆ. ಯೋಜನೆಯ ಅಂತಿಮ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು” ಎಂದು ಹೇಳಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಸಣ್ಣ ಪಟ್ಟಣಗಳ ವಸತಿಗಾಗಿ ಸಬ್ಸಿಡಿ ಸಾಲಗಳನ್ನು ಒದಗಿಸಲು ಭಾರತವು 600 ಬಿಲಿಯನ್ ರೂಪಾಯಿಗಳನ್ನು (7.2 ಬಿಲಿಯನ್ ಡಾಲರ್) ಖರ್ಚು ಮಾಡಲು ಯೋಜಿಸುತ್ತಿದೆ. ಈ ವರ್ಷದ ಕೊನೆಯಲ್ಲಿ ನಿರ್ಣಾಯಕ ರಾಜ್ಯ ಚುನಾವಣೆಗಳು ಮತ್ತು 2024 ರ ಮಧ್ಯದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಬ್ಯಾಂಕುಗಳು ಎರಡು ತಿಂಗಳೊಳಗೆ ಈ ಯೋಜನೆಯನ್ನು ಜಾರಿಗೆ ತರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

 

ಇದನ್ನು ಓದಿ: Congress government: ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ದೊಡ್ಡ ಆಘಾತ- ‘ನಾನು ಕಾಂಗ್ರೆಸ್ ಶಾಸಕಿಯಲ್ಲ’ ಎಂದು ಶಾಕಿಂಗ್ ಹೇಳಿಕೆ ನೀಡಿದ ಶಾಸಕಿ !!

Leave A Reply

Your email address will not be published.