Baby Alive before Cremation: ಮಗು ಸತ್ತಿದೆ ಎಂದು ವೈದ್ಯರಿಂದ ಘೋಷಣೆ; ಅಂತ್ಯಕ್ರಿಯೆಗೆ 5 ನಿಮಿಷ ಇರುವಾಗ ಜೋರಾಗಿ ಅತ್ತ ನವಜಾತ ಶಿಶು!

india assam news newborn declared dead by doctors found alive before cremation

Baby Alive before Cremation: ಆಸ್ಪತ್ರೆಯೊಂದರಲ್ಲಿ ನವಜಾತ ಶಿಶು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದು, ಆದರೆ ಅಂತ್ಯಕ್ರಿಯೆಗೆ ಕೆಲವೇ ಕ್ಷಣಗಳ ಮೊದಲು ಜೀವಂತವಾಗಿ ಕಂಡು(Baby Alive before Cremation) ಬಂದ ಘಟನೆಯೊಂದು ಅಸ್ಸಾಂನ ಸಿಲ್ಚಾರ್‌ನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಆಸ್ಪತ್ರೆ ಆಡಳಿತ ಹಾಗೂ ವೈದ್ಯರ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ಆರು ತಿಂಗಳ ಗರ್ಭಿಣಿ ಹೆಂಡತಿಯನ್ನು ರತನ್‌ ದಾಸ್‌ (29)ಮಂಗಳವಾರ ಸಂಜೆ ಸಿಲ್ಚಾರ್‌ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಪರಿಶೀಲನೆಯ ನಂತರ ವೈದ್ಯರು ಗರ್ಭಾವಸ್ಥೆಯ ತೊಡಕುಗಳನ್ನು ಹೇಳಿದ್ದು, ಇಲ್ಲಿ ಮಗು ಅಥವಾ ತಾಯಿ ಇಬ್ಬರಲ್ಲಿ ಒಬ್ಬರನ್ನು ಉಳಿಸಬಹುದು ಎಂದು ಹೇಳಿದ್ದಾರೆ.

ಭಾರವಾದ ಮನಸ್ಸಿನಿಂದ ಹೆರಿಗೆಗೆ ಒಪ್ಪಿಗೆ ನೀಡಿದ ಗಂಡ, ನಂತರ ಸತ್ತ ಮಗುವಿಗೆ ಜನ್ಮ ನೀಡಿದರ ಕುರಿತು ತಿಳಿಸಲಾಯಿತು. ಆಸ್ಪತ್ರೆಯವರು ನೀಡಿದ ಮಗುವಿನ ಮರಣ ಪ್ರಮಾಣಪತ್ರದೊಂದಿಗೆ ಮಗುವನ್ನು ದಂಪತಿಗೆ ನೀಡಲಾಗಿತ್ತು ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಹಾಗಾಗಿ ಬುಧವಾರ ಬೆಳಗ್ಗೆ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಸಿದ್ಧತೆ ಮಾಡುತ್ತಿದ್ದಂತೆ, ಮಗುವಿಗೆ ಹಾಕಿದ ಬಟ್ಟೆಯನ್ನು ಬಿಚ್ಚಿದಾಗ, ಮಗು ಅಳುವುದು ಕೇಳಿ ಬಂದಿದೆ. ತಮ್ಮ ಮಗು ಜೀವಂತವಾಗಿದೆ ಎಂದು ಖುಷಿಪಟ್ಟ ದಂಪತಿ ತಕ್ಷಣವೇ ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ಧಾವಿಸಿದ್ದಾರೆ.

ಕೂಡಲೇ ಸಂಬಂಧಿಕರು, ಕುಟುಂಬದವರು, ಸ್ಥಳೀಯರು ಆಸ್ಪತ್ರೆಯ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆ ಎದುರು ಪ್ರತಿಭಟನೆ ಮಾಡಿದ್ದಾರೆ. ನವಜಾತ ಶಿಶುವನ್ನು ಎಂಟು ಗಂಟೆಗಳಿಗೂ ಹೆಚ್ಚು ಕಾಲ ಪ್ಯಾಕೆಟ್‌ನಲ್ಲಿ ಇಟ್ಟು, ಮಗು ಜೀವಂತವಾಗಿದೆಯೇ ಎಂದು ಪರಿಶೀಲನೆ ಮಾಡದೆ ಚಿಕಿತ್ಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Akrama Sakrama: ರೈತರಿಗೆ ಗುಡ್‌ನ್ಯೂಸ್; ಅಕ್ರಮ ಸಕ್ರಮ ಮಂಜೂರಾತಿ, ಅರ್ಜಿಗಳ ಶೀಘ್ರ ವಿಲೇವಾರಿಗೆ ಸಚಿವರ ಕಟ್ಟಪ್ಪಣೆ!!!

Leave A Reply

Your email address will not be published.