Gas Geyser: ಈ ಗೀಸರ್‌ನಲ್ಲಿ ವಿದ್ಯುತ್‌ ಬಳಸದೆ ಸಿಗುತ್ತೆ ಬಿಸಿ ಬಿಸಿ ನೀರು! ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ! ಚಳಿಗಾಲಕ್ಕೆ ಈ ಗೀಸರ್ ಬೆಸ್ಟ್ ಒಪ್ಶನ್!

Technology news gas geyser price detail without electricity this geyser provide hot water

Gas Geyser: ಬಿಸಿ ನೀರಿಗಾಗಿ ಗೀಸರ್ ಕೊಳ್ಳುವುದು ಅನಿವಾರ್ಯವಾಗಿದೆ. ಆದರೆ
ಸಾಮಾನ್ಯ ಗೀಸರ್ ಗಳು ಬಹಳಷ್ಟು ವಿದ್ಯುತ್ ಅನ್ನು ಬಳಸುತ್ತವೆ. ಇದರಿಂದ ವಿದ್ಯುತ್ ಬಿಲ್ ನದ್ದೇ ಚಿಂತೆ ಆಗುತ್ತೆ. ಇದರ ಹೊರತು
ಈ ಗೀಸರ್ ಬಳಸಿದರೆ ವಿದ್ಯುತ್ ಬಿಲ್ ಏರುವ ಚಿಂತೆ ಇರುವುದಿಲ್ಲ. ಹೌದು, ಇನ್ನೇನು ಚಳಿಗಾಲ ಆರಂಭವಾಗಿ ಬಿಡುತ್ತದೆ. ಚಳಿಗಾಲ ಸಮೀಪಿಸುತ್ತಿದ್ದಂತೆ, ಮನೆಗಳಲ್ಲಿ ಬಿಸಿನೀರಿನ ಅಗತ್ಯವೂ ಹೆಚ್ಚಾಗುತ್ತದೆ. ಈ ಅಗತ್ಯವನ್ನು ಪೂರೈಸಲು ಗೀಸರ್ ಅನ್ನು ಬಳಸಲಾಗುತ್ತದೆ. ಅದಕ್ಕಾಗಿ ಇದೀಗ ಮಾರುಕಟ್ಟೆಗೆ ಉತ್ತಮ ಗೀಸರ್ ನ್ನು ಪರಿಚಯಿಸಲಾಗಿದೆ. ಇದು ಶಕ್ತಿಯುತವಾಗಿ ಕಾರ್ಯನಿರ್ವಹಿಸುತ್ತದೆ ಮಾತ್ರವಲ್ಲ, ಇದಕ್ಕೆ ತಗಲುವ ವೆಚ್ಚ ಕೂಡಾ ಬಹಳ ಕಡಿಮೆ. ಬನ್ನಿ ಅಂತಹ ಗೀಸರ್(Gas Geyser) ಯಾವುದೆಂದು ನೋಡೋಣ.

ರಾಕೋಲ್ಡ್ LPG-PNG ಗ್ಯಾಸ್ ವಾಟರ್ ಹೀಟರ್ (Racold LPG-PNG Gas Water Heater):
LPG-PNG ಗ್ಯಾಸ್ ವಾಟರ್ ಹೀಟರ್ ರಾಕೋಲ್ಡ್ ಅತ್ಯಂತ ಜನಪ್ರಿಯ ಉತ್ಪನ್ನವಾಗಿದೆ. ಇದರ ಬೆಲೆಯನ್ನು ನೋಡುವಾಗ ದುಬಾರಿ ಎಂದು ಅನಿಸುತ್ತದೆ. ಆದರೆ ಇದು ಉತ್ತಮ ಕಂಪನಿಯಾಗಿರುವುದರಿಂದ ಅದನ್ನು ನೀವು ಖರೀದಿಸಬಹುದು. ಇದರ ಬೆಲೆ 8,990 ರೂ. ನಿಮಗಿಷ್ಟ ಬಂದ ಜಾಗದಲ್ಲಿ ಗೀಸರನ್ನು ಸುಲಭವಾಗಿ ಅಳವಡಿಸಬಹುದು.

ಹಿಂಡ್ ವೇರ್ ಅಟ್ಲಾಂಟಿಕ್ ಇವೆಟೊ (HINDWARE ATLANTIC EVETO):
ನೀವು PNG, ಗ್ಯಾಸ್ ಗೀಸರ್ ಖರೀದಿಸಲು ಬಯಸುವುದಾದರೆ ಇದು ಉತ್ತಮ ಆಯ್ಕೆಯಾಗಿರಲಿದೆ. ಇದರ ಬೆಲೆ ಕೇವಲ 8,990 ರೂ. ಈ ಗೀಸರ್‌ನಲ್ಲಿ ನೀವು ತಾಪಮಾನವನ್ನು ಹೊಂದಿಸುವ ಆಯ್ಕೆಯನ್ನು ಸಹ ಪಡೆಯುತ್ತೀರಿ. ಫ್ಲೇಮ್ ಫೇಲ್ಯೂರ್ ಪ್ರೊಟೆಕ್ಷನ್ ಅನ್ನು ಸಹ ಇದರಲ್ಲಿ ನೀಡಲಾಗಿದೆ.

ಶೈನ್ಸ್ಟಾರ್ ಗ್ಯಾಸ್ ಗೀಸರ್ 10L (Shinestar Gas Geyser 10L):
ಶೈನ್‌ಸ್ಟಾರ್ ಗ್ಯಾಸ್ ಗೀಸರ್ 10L ಬಹಳ ಜನಪ್ರಿಯ ಗೀಸರ್ ಆಗಿದೆ. ಇದಕ್ಕೆ ವಿದ್ಯುತ್ ನ ಅಗತ್ಯವಿಲ್ಲ. ಇದರ ಬೆಲೆಯೂ ಕೇವಲ 4189 ರೂ. ಇಂಡಿಯಾ ಮಾರ್ಟ್‌ನಿಂದ ಇದನ್ನು ಸುಲಭವಾಗಿ ಖರೀದಿಸಬಹುದು. ಇದು 5 ಸ್ಟಾರ್ ರೇಟಿಂಗ್‌ನೊಂದಿಗೆ ಬರುತ್ತದೆ. ಅಂದರೆ ನೀರು ಬಿಸಿ ಮಾಡಲು ಇದು ಬಳಸುವ ಗ್ಯಾಸ್ ಕೂಡಾ ಕಡಿಮೆ. ಇದು ಗಾತ್ರದಲ್ಲಿ ಸಾಕಷ್ಟು ಚಿಕ್ಕದಾಗಿದ್ದು, ಇದನ್ನು ಎಲ್ಲಿ ಬೇಕಾದರೂ ಅಳವಡಿಸಬಹುದಾಗಿದೆ.

ಇದನ್ನೂ ಓದಿ: ಕಿಸ್​ ಮಾಡುವುದರಿಂದ ಮೊಡವೆಗಳು ಬರುತ್ತಾ? ತಜ್ಞರು ಏನ್ ಹೇಳ್ತಾರೆ ಗೊತ್ತಾ ?

Leave A Reply

Your email address will not be published.