Hijab Issue: ಮೆಟ್ರೋದಲ್ಲಿ ಹಿಜಾಬ್‌ ಧರಿಸಿಲ್ಲವೆಂದು ಪೊಲೀಸರಿಂದ ಮಾರಣಾಂತಿಕ ಹಲ್ಲೆ, ಬಾಲಕಿ ಕೋಮಾದಲ್ಲಿ!!!

Hijab issue in iran morality police assult on school girl for violating hijab rules

Hijab Issue: ಇರಾನ್ ಮೆಟ್ರೋದಲ್ಲಿ ಹಿಜಾಬ್ ನಿಯಮ(Hijab Issue)ಉಲ್ಲಂಘಿಸಿದ್ದಕ್ಕೆ ಬಾಲಕಿ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಕೆ ಕೋಮಾಗೆ ಜಾರಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.ಟೆಹ್ರಾನ್ ಮೆಟ್ರೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆಗೆ ಘರ್ಷಣೆ ನಡೆದಿದ್ದು ಅರ್ಮಿತಾ ಗರವಾಂಡ್ ಎಂಬ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ ಎಂದು ತಿಳಿದುಬಂದಿದೆ. ಟೆಹ್ರಾನ್ ಸುರಂಗ ಮಾರ್ಗದಲ್ಲಿ ಇರಾನ್(Iran) ಮೆಟ್ರೋದಲ್ಲಿ ಹಿಜಾಬ್(Hijab) ನಿಯಮ ಉಲ್ಲಂಘಿಸಿದ ಹಿನ್ನೆಲೆ ಬಾಲಕಿ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಆಕೆ ಕೋಮಾಗೆ ಜಾರಿದ್ದಾಳೆ ಎನ್ನಲಾಗಿದೆ.

ಇರಾನ್ ಅಧಿಕಾರಿ ಪ್ರಕಾರ, ಕಡ್ಡಾಯ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸುವ ಮಹಿಳೆಯರಿಗೆ ಸಿಸಿಟಿವಿ ಮೂಲಕ ಶಿಕ್ಷೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಇರಾನ್ನ ಸಾರ್ವಜನಿಕ ಸ್ಥಳಗಳು ಮತ್ತು ಬೀದಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಇದನ್ನು ಗುರುತಿಸಿದ ಬಳಿಕ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಲಾಗುತ್ತದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇರಾನ್ ಮಹಿಳೆಯರ ಕುರಿತಂತೆ ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದು, ಮಹಿಳೆಯರು ಹಿಜಾಬ್ ಧರಿಸಲು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಲಾಗಿದೆ. ಕಡ್ಡಾಯ ಡ್ರೆಸ್ಕೋಡ್ ಭಾಗವಾಗಿ ಇರಾನ್ನಲ್ಲಿ ಹಿಜಾಬ್ ಅನ್ನು ಅಳವಡಿಸಲಾಗಿದೆ. ಆದರೆ ಹೆಚ್ಚಿನ ಮಹಿಳೆಯರು ಈ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎನ್ನಲಾಗಿದೆ. ಹೀಗಾಗಿ, ಇರಾನ್ ಸರ್ಕಾರ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲು ತೀರ್ಮಾನ ಕೈಗೊಂಡಿದೆ.

ಟೆಹ್ರಾನ್ ಮೆಟ್ರೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆಗೆ ಘರ್ಷಣೆ ನಡೆದಿದ್ದು ಅರ್ಮಿತಾ ಗರವಾಂಡ್ ಎಂಬ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ. ಆದರೆ ಇರಾನ್ ಸರ್ಕಾರ ಇದನ್ನು ಸುಳ್ಳು ಎಂದು ಹೇಳಿಕೊಂಡಿದೆ.ಯುವತಿ ಕಡಿಮೆ ರಕ್ತದೊತ್ತಡದಿಂದ ಆಕೆ ಮೂರ್ಛೆ ಹೋಗಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ. ಹೀಗಾಗಿ, ಬಾಲಕಿಗೆ ಬಿಗಿ ಭದ್ರತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಯಾರ ಭೇಟಿಗೂ ಅವಕಾಶ ನೀಡುತ್ತಿಲ್ಲ. ಆಕೆಯ ಕುತ್ತಿಗೆ ಹಾಗೂ ತಲೆಗೆ ಬ್ಯಾಂಡೇಜ್ ಹಾಕಲಾಗಿದ್ದು, ಟೆಹ್ರಾನ್ ನಿವಾಸಿಯಾಗಿದ್ದರು ಕೂಡ ಪಶ್ಚಿಮ ಇರಾನ್ನ ಕೆರ್ಮಾನ್ಶಾನಿಂದ ಬಂದವರು ಎನ್ನಲಾಗಿದೆ.

ಇದನ್ನೂ ಓದಿ: Good News For Workers: ಈ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ- ವಾರದಲ್ಲಿನ್ನು 3 ದಿನ ರಜೆ, 3 ದಿನ ಮಾತ್ರ ಕೆಲಸ ?! ಈ ದಿನದಿಂದಲೇ ಜಾರಿ

Leave A Reply

Your email address will not be published.