Lion in Beach: ಕಡಲ ತಡಿಯಲ್ಲಿ ವೀಕೆಂಡ್ ಕಳೆದ ಕಾಡಿನ ರಾಜ !! ಸಿಂಹದ ಗಾಂಭೀರ್ಯಕ್ಕೆ ಮನಸೋತ ಜನ !

Intresting news Lion in beach a photo of wild lion enjoyed a long weekend photo viral

Lion In Beach: ಇತ್ತೀಚೆಗೆ ಜುನಾಗಢದ ಕಡಲತೀರದಲ್ಲಿ ಏಷ್ಯನ್ ಸಿಂಹವೊಂದು (Lion In Beach) ಅಲೆಗಳನ್ನು ಆನಂದಿಸುತ್ತಿರುವುದನ್ನು ಜನರು ಕಂಡಿದ್ದಾರೆ. ಈ ವೇಳೆ ಸಿಂಹದ ಗಾಂಭೀರ್ಯಕ್ಕೆ ಜನರು ಮನಸೋತು ಅದರ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಸದಾ ಕಾಡಿನಲ್ಲಿರುವ ರಾಜ ಕಡಲತೀರದಲ್ಲಿ ಅಲೆಗಳ ನೋಡುತಾ, ಪ್ರಕೃತಿ ಸೌಂದರ್ಯ ವೀಕ್ಷಣೆ ಮಾಡುತ್ತಾ, ಹಾಯಾಗಿ ನಡೆದಾಡುವುದು ನೋಡಲು ಜನರಿಗೆ ಭಾರೀ ಸಂತಸ ತಂದಿದೆ. ಸದ್ಯ
ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪೋಸ್ಟ್‌ಗೆ ಕಾಮೆಂಟ್‌ಗಳ ಮಹಾಪೂರವೇ ಹರಿದು ಬಂದಿದೆ. ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ.

ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಈ ಸಿಂಹದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜುನಾಗಢ್ ಪಕ್ಕದಲ್ಲಿರುವ ಅರಬ್ಬಿ ಸಮುದ್ರದ ಬಳಿ ಈ ಸಿಂಹ ಕಾಣಿಸಿಕೊಂಡಿದೆ ಎಂದು ಅವರು ಬರೆದಿದ್ದಾರೆ. ಅಲ್ಲಿ ಆ ಸಿಂಹ ಸುಂದರವಾದ ಅಲೆಗಳನ್ನು ಆನಂದಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.

https://x.com/ParveenKaswan/status/1708315252587384936?s=20

ಇದನ್ನೂ ಓದಿ: Basil Plant : ತುಳಸಿ ಗಿಡದ ಪಕ್ಕ ಇದನ್ನು ಇಟ್ಟು ಪೂಜಿಸಿ, ಧನಲಕ್ಷಿಯನ್ನು ಒಳಗೆ ಕರೆಯಿರಿ !!

Leave A Reply

Your email address will not be published.