Hyderabad: ಹೋಮ್ವರ್ಕ್ ಮಾಡಿಲ್ಲ ಎಂದ ವಿದ್ಯಾರ್ಥಿ- ಟೀಚರ್ ಹೊಡೆದ ಏಟಿಗೆ ಜೀವವೇ ಹೋಯ್ತು !! ಯಪ್ಪಾ.. ಹೊಡೆದಿದ್ದಾದ್ರೂ ಹೇಗೆ?
Hyderabad news student dies after being hit by teacher latest news
Hyderabad: ಹೋಮ್ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಇಲ್ಲೊಬ್ಬರು ಶಿಕ್ಷಕರು ವಿದ್ಯಾರ್ಥಿಗೆ ಹೊಡೆದಿದ್ದು, ಟೀಚರ್ ಹೊಡೆದ ಏಟಿಗೆ ವಿದ್ಯಾರ್ಥಿಯ ಪ್ರಾಣವೇ (death) ಹೋಗಿರುವ ಘಟನೆ ಹೈದರಾಬಾದ್ನ (Hyderabad) ರಾಮನಾಥಪುರದ ವಿವೇಕನಗರ ಎಂಬಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಮೃತ ಬಾಲಕನನ್ನು ಹೇಮಂತ್ ಎಂದು ಹೇಳಲಾಗಿದ್ದು, ಈತನಿಗೆ ಕೇವಲ ಐದು ವರ್ಷವಾಗಿತ್ತು. ಕಿಂಡರ್ಗಾರ್ಟನ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈ ಬಾಲಕನಿಗೆ ಹೋಮ್ವರ್ಕ್ ಮಾಡಿಕೊಂಡು ಬರಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕರು ಸ್ಲೇಟ್ನಿಂದ ತಲೆಗೇ ಹೊಡೆದಿದ್ದಾರೆ.
ಘಟನೆ ಪರಿಣಾಮವಾಗಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಈತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ಬಾಲಕನಿಗೆ ನೀಡಿದ್ದ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವಿಗೀಡಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಮಗನನ್ನು ಕಳೆದುಕೊಂಡ ವಿದ್ಯಾರ್ಥಿಯ ಕುಟುಂಬಸ್ಥರು ಕಂಬನಿ ಮಿಡಿದಿದ್ದು, ಆಕ್ರೋಶದಿಂದ ಸೋಮವಾರ ಶಾಲೆಯ ಮುಂದೆ ಶವ ಇರಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Lion in Beach: ಕಡಲ ತಡಿಯಲ್ಲಿ ವೀಕೆಂಡ್ ಕಳೆದ ಕಾಡಿನ ರಾಜ !! ಸಿಂಹದ ಗಾಂಭೀರ್ಯಕ್ಕೆ ಮನಸೋತ ಜನ !