Vande Bharat Train: ಹಳಿ ಮೇಲೆ ರಾಶಿ ರಾಶಿ ಕಲ್ಲು, ದೊಡ್ಡ ದೊಡ್ಡ ರಾಡ್ ಪತ್ತೆ – ಬಯಲಾಯ್ತು ‘ವಂದೇ ಭಾರತ್’ ರೈಲು ಅಪಘಾತಕ್ಕೆ ನಡೆದ ಭಾರೀ ದೊಡ್ಡ ಸಂಚು !

Shocking news Heaps of stones, big rod found on track of 'Vande Bharat' train

Vande Bharat Train: ರೈಲ್ವೆ ಹಳಿಯ (Railway Track) ಮೇಲೆ ದುಷ್ಕರ್ಮಿಗಳು ಕಲ್ಲು (Stones) ಹಾಗೂ ರಾಡ್‌ಗಳನ್ನಿಟ್ಟು (Rod) ಅಡಚಣೆಗೆ ಪ್ರಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ಪಡೆದ ವಂದೇ ಭಾರತ್ ರೈಲಿನ (Vande Bharat Express Train) ಪೈಲಟ್‌ಗಳು ರೈಲನ್ನು ತುರ್ತಾಗಿ ನಿಲ್ಲಿಸಿ (Emergency Stop) ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಈ ಘಟನೆ ಸೋಮವಾರ ಬೆಳಗ್ಗೆ 9:55ರ ವೇಳೆಗೆ ನಡೆದಿದ್ದು, ಉದಯಪುರದಿಂದ ಜೈಪುರಕ್ಕೆ ವಂದೇ ಭಾರತ್ ರೈಲು (Vande Bharat Train) ಚಲಿಸುತ್ತಿತ್ತು. ಈ ವೇಳೆ ಹಳಿಯ ಮೇಲೆ ರಾಶಿ ರಾಶಿ ಕಲ್ಲು, ದೊಡ್ಡ ದೊಡ್ಡ ರಾಡ್ ಪತ್ತೆಯಾಗಿದೆ‌. ಇದನ್ನು ಗಮನಿಸಿದ ಲೋಕೋಮೋಟಿವ್ ಪೈಲಟ್‌ಗಳು ತಕ್ಷಣವೇ ರೈಲನ್ನು ನಿಲ್ಲಿಸಿ ದೊಡ್ಡ ಅಪಘಾತವನ್ನು ತಡೆದಿದ್ದಾರೆ.

ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ವಂದೇ ಭಾರತ್ ರೈಲು ಅಪಘಾತಕ್ಕೆ ದುಷ್ಕರ್ಮಿಗಳು ಪ್ಲ್ಯಾನ್ ಮಾಡಿದ್ದರಾ ಎಂಬ ಸಂಶಯ‌ ಮೂಡಿದೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ. ಹಳಿಯ ಮೇಲೆ ಹಲವಾರು ಕಲ್ಲುಗಳು, ಕಬ್ಬಿಣದ ರಾಡ್‌ಗಳನ್ನು ಇಟ್ಟಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿದ ರೈಲು ಸಚಿವಾಲಯ “ರೈಲು ಸಂಖ್ಯೆ 20979 ವಂದೇ ಭಾರತ್ ಉದಯಪುರ-ಜೈಪುರ್ ಗಂಗಾರಾರ್-ಸೋನಿಯಾನ ವಿಭಾಗದಲ್ಲಿ KM ನಂ 158/18, 158/19 ನಲ್ಲಿ ನಿಂತಿತ್ತು. ಜೋಗಲ್ ಪ್ಲೇಟ್‌ನಲ್ಲಿ ಹೇಳಲಾದ ಕಿಮೀ ಮೇಲಿನ ಟ್ರ್ಯಾಕ್ ಮೇಲೆ ತಲಾ ಒಂದು ಅಡಿಯ ಎರಡು ರಾಡ್‌ಗಳನ್ನು ಇರಿಸಿದ್ದ ಕಾರಣ ನಿಇಂತಿತ್ತು. ಈ ಘಟನೆಯು ಸುಮಾರು 09:55 ಗಂಟೆಗೆ RPF/ಪೋಸ್ಟ್/ಭಿಲ್ವಾರಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸ್ಥಳವು ಚಿತ್ತೋರ್‌ಗಢ್ ಜಿಲ್ಲೆಯ SHO/ಗಂಗಾರರ್ ಅವರ ಅಧಿಕಾರ ವ್ಯಾಪ್ತಿಗೆ ಬರುತ್ತದೆ’’ ಎಂದು ತಿಳಿದುಬಂದಿದೆ.

 

https://x.com/IndianTechGuide/status/1708773860420857992?s=20

 

ಇದನ್ನು ಓದಿ: Good news for railway passengers : ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ – ಮತ್ತೊಂದು ಅತ್ಯದ್ಭುತ ವ್ಯವಸ್ಥೆ ಕಲ್ಪಿಸಲು ಮುಂದಾದ ಇಲಾಖೆ !

Leave A Reply

Your email address will not be published.