Liquor Store: ಮದ್ಯಪ್ರಿಯರಿಗೆ ಶಾಕ್- ರಾಜ್ಯಾದ್ಯಂತ ಹೊಸ ಬಾರ್ ತೆರೆಯುವುದನ್ನು ವಿರೋಧಿಸಿ ಬೀದಿಗಿಳಿದ ನಾರಿಯರು

Karnataka news women's protest against opening New liquor stores in Karnataka

Liquor Store: ರಾಜ್ಯದಲ್ಲಿ ಹೊಸದಾಗಿ ಒಂದು ಸಾವಿರ ಮದ್ಯದಂಗಡಿ (Liquor Store) ತೆರಯಲು ಅಬಕಾರಿ ಇಲಾಖೆ (Department of Excise) ಭರದ ತಯಾರಿ ನಡೆಸುತ್ತಿದೆ. ಇದರ ನಡುವೆಯೇ ಮಹಿಳೆಯರಿಂದ ಸರ್ಕಾರದ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ (RB Timmapur) ಬಾಗಲಕೋಟೆಯಲ್ಲಿ ಮದ್ಯಪಾನ ನಿಷೇಧ (Alcohol Ban) ಹೇರುವಂತೆ ಮಹಿಳೆಯರು ಬೀದಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ.“ಬೀರು ಬೇಡ ನೀರು ಬೇಕು” “ಸಾರಾಯಿ ಬೇಡ ಶಿಕ್ಷಣ ಬೇಕು” ಎಂದು ಘೋಷಣೆ ಕೂಗಿದ್ದು, ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಕಳೆದ ಎರಡು ದಿನದಿಂದ ಮಹಿಳೆಯರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದಾರೆ. ಹೊಸ ಮದ್ಯದ ಅಂಗಡಿಗಳನ್ನು ತೆರೆಯವ ಸರ್ಕಾರದ ಕ್ರಮವನ್ನು ವಿರೋಧಿಸಿ, ನಗರದಲ್ಲಿ ಗಾಂಧಿ ಜಯಂತಿ ಆಚರಣೆ ವೇಳೆ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ರಾಯಚೂರು ನಗರದ ಮಹಾತ್ಮ ಗಾಂಧಿ ಸ್ಟೇಡಿಯಂ ಬಳಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಮಹಿಳೆಯರು ಸಾರಾಯಿ ಬಂದ್ ಮಾಡಿಸುವಂತೆ ಪ್ರತಿಭಟನೆ ಮಾಡಿದ್ದು, ಮದ್ಯನಿಷೇಧ ಆಂದೋಲನ ಪ್ರಗತಿಪರ ಸಂಘಟನೆ ಒಕ್ಕೂಟ ಧರಣಿ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

 

ಇದನ್ನು ಓದಿ: Beauty Tips: ಸುಂದರವಾಗಿ ಕಾಣಲು ಬ್ಯೂಟಿ ಪಾರ್ಲರ್ ಗೆ ಹೋಗಬೇಕೆಂದಿಲ್ಲ – ಮನೆಯಲ್ಲೇ ಕೂತು ಹೀಗ್ ಮಾಡಿ, ಕ್ಷಣಾರ್ಧದಲ್ಲಿ ಹಾಲಿನಂತ ಮೃದು ತ್ವಚೆ ಪಡೆಯಿರಿ !

Leave A Reply

Your email address will not be published.