Heart Attack Symtoms: ಹೃದಯಾಘಾತಕ್ಕೆ ಎದೆನೋವು ಮಾತ್ರ ಲಕ್ಷಣವಲ್ಲ , ಇವು ಸಹ ಪ್ರಮುಖ ಲಕ್ಷಣವಂತೆ! ಜನರೇ ನಿರ್ಲಕ್ಷಿಸದಿರಿ

Heart Attack Symtoms Chest pain is not the only cause of heart attack, it is the main symptom

Heart Attack Symtoms: ಹೃದಯದಲ್ಲಿ ಲಬ್ ಡಬ್ ಅನ್ನೋದು ನಿಂತರೆ ಮತ್ತೇ ಎಲ್ಲಾ ಶೂನ್ಯ. ಯಾಕೆಂದರೆ ಹೃದಯವು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಆದರೆ ಇತ್ತೀಚೆನ ದಿನಗಳಲ್ಲಿ ಹೃದಯಾಘಾತ ಚಿಕ್ಕವರಿಂದ ದೊಡ್ಡವರವರೆಗೂ ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ನಮ್ಮ ಜೀವನ ಶೈಲಿಯೂ ಒಂದು ರೀತಿಯಲ್ಲಿ ಕಾರಣ ಆಗಿದೆ. ಆದ್ದರಿಂದ ಹೃದಯಾಘಾತ ಬಗೆಗಿನ ಮುನ್ನೆಚ್ಚರಿಗೆ ವಹಿಸುವುದು ಅಗತ್ಯ.
ಮೊದಲು ಹೃದಯಾಘಾತವಾದಾಗ ಗಮನಿಸಬೇಕಾದ ಲಕ್ಷಣ (Heart Attack Symtoms) ಯಾವುದೆಂದು ತಿಳಿಯೋಣ.

ಸಾಮಾನ್ಯವಾಗಿ ಈ ಹೃದಯಾಘಾತದ ಲಕ್ಷಣವೆಂದರೆ ಎದೆನೋವು. ಇದನ್ನು ಹೊರತುಪಡಿಸಿ ಇನ್ನೂ ಕೆಲವು ಲಕ್ಷಣಗಳನ್ನು ಈ ಹೃದಯಾಘಾತ ಹೊಂದಿದೆ. ಆ ಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡರೇ ಖಂಡಿತಾ ನಿರ್ಲಕ್ಷಿಸಬೇಡಿ.

ಉಸಿರಾಟದ ತೊಂದರೆ:
ದಮ್ಮು, ಅಸ್ತಮಾ ಇರುವವರಿಗೆ ಉಸಿರಾಟದ ತೊಂದರೆ ಇರುವುದು ಸಾಮಾನ್ಯ ಆದರೆ ಹೃದಯಾಘಾತ ಸಂಭವಿಸುವಾಗ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು.

ವಾಂತಿ:
ಪಿತ್ತಕ್ಕೆ ವಾಂತಿಯಾಗುವುದು ಸಾಮಾನ್ಯ. ಆದರೆ ಹೃದಯಾಘಾತದಲ್ಲಿ ಇದ್ದಕ್ಕಿದ್ದಂತೆ ವಾಂತಿ, ತಲೆ ಸುತ್ತುವುದು ಸಂಭವಿಸುವುದು. ಇಂತಹ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ನಿರ್ಲಕ್ಷಿಸಬೇಡಿ.

ಮೈ ಬೆವರುವುದು:
ಸಾಮಾನ್ಯವಾಗಿ ಬಿಸಿಲಿಗೆ ಹೋದಾಗ ಮೈ ಬೆವರುತ್ತದೆ. ಆದರೆ ಹೃದಯಾಘಾತ ಸಂಭವಿಸುವಾಗಲೂ ಮೈ ಬೆವರುತ್ತದೆ ಹೀಗಾಗಿ ಎಚ್ಚರವಹಿಸುವುದು ಅಗತ್ಯ.

ಒಂದು ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದರೆ, ಅವರನ್ನು ಬೆನ್ನು ನೆಲಕ್ಕೆ ತಾಗುವಂತೆ ಮಲಗಿಸಿ. ಎದೆಬಡಿತವನ್ನು ಆಲಿಸಿ. ಮೂಗಿನ ಬಳಿ ಬೆರಳು ಇಟ್ಟು ಉಸಿರಾಟವನ್ನು ಪರೀಕ್ಷಿಸಿ, ಎದೆ ಭಾಗವನ್ನು ಒತ್ತಿ, ಅವರ ಬಾಯಿಗೆ ಬಾಯಿಟ್ಟು ಊದಿ, ಗಾಳಿಯಾಡುವಂತೆ ನೋಡಿಕೊಳ್ಳಿ. ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಸೂಕ್ತ.

 

ಇದನ್ನು ಓದಿ: Aadhar Card: ಆಧಾರ್ ಗೆ ಹೊಸ ಮೊಬೈಲ್ ನಂಬರ್ ಅಪ್ಲೋಡ್ ಮಾಡ್ಬೇಕೆ ?! ಹಾಗಿದ್ರೆ ಹೀಗ್ ಮಾಡಿ, ಕುಳಿತಲ್ಲೇ ಅಪ್ಡೇಟ್ ಕೊಡಿ

Leave A Reply

Your email address will not be published.