Financial Rules Change: ಇಂದಿನಿಂದ ಈ 10 ಪ್ರಮುಖ ನಿಯಮಗಳಲ್ಲಿ ಆಗಲಿದೆ ಮಹತ್ವದ ಬದಲಾವಣೆ; ರೂಲ್ಸ್ ತಪ್ಪಿದ್ರೆ ಲಾಸ್‌ ತಪ್ಪಲ್ಲ !!

Financial Rules Change: ಅಕ್ಟೋಬರ್‌ 1ರಿಂದ ಹಣಕಾಸು ಸೇರಿ ಹಲವು ನಿಯಮಗಳಲ್ಲಿ ಭಾರಿ (Financial Rules Change) ಬದಲಾವಣೆಯಾಗಲಿವೆ. ಈ ತಿಂಗಳಲ್ಲಿ ಅನೇಕ ಹಣಕಾಸು ವಹಿವಾಟುಗಳಲ್ಲಿ ಬದಲಾಗಲಿದ್ದು, ಶೀಘ್ರದಲ್ಲಿ ನೀವು ಈ ಸರ್ಕಾರದ (Government Rule) ಕೆಲಸವನ್ನು ಪೂರ್ಣಗೊಳಿಸಬೇಕು. ಇಲ್ಲಿ ಒಂದಷ್ಟು ನಿಯಮಗಳು ಜನರಿಗೆ ಅನುಕೂಲವಾಗಿದ್ದರೆ, ಕೆಲವೊಂದು ನಿಯಮಗಳು ನಾಗರಿಕರ ಜೇಬಿಗೆ ಕತ್ತರಿಯಾಗಲಿದೆ.

ಹೌದು, ಅಕ್ಟೋಬರ್‌ 1ರಿಂದ ಈ ಕೆಳಗಿನ ನಿಯಮಗಳು ಬದಲಾಗಲಿವೆ:

1. ಉಚಿತವಾಗಿ ಎಲ್‌ಪಿಜಿ ಕನೆಕ್ಷನ್‌ ಸಿಗಲ್ಲ:
ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ ಸೌಲಭ್ಯವು ಕೊನೆಯಾಗಲಿದೆ. ಇದಕ್ಕೂ ಮೊದಲು ಪಿಎಂಯುವೈ ಯೋಜನೆ ಅಡಿಯಲ್ಲಿ ಉಚಿತವಾಗಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಸಂಪರ್ಕ ನೀಡುವುದನ್ನು ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಲಾಗಿತ್ತು. ಈಗ ಇದು ಅಂತ್ಯವಾಗಿದ್ದು, ಜನರ ಜೇಬಿಗೆ ಭಾರವಾಗಲಿದೆ.

2. ಡಿಎಲ್‌, ಆರ್‌ಸಿ ಬುಕ್‌ ಸಾಫ್ಟ್‌ ಕಾಪಿ ಇದ್ದರೆ ಸಾಕು:
ವಾಹನಗಳ ಆರ್‌ಸಿ ಬುಕ್‌ (Registration Certificate) ಹಾಗೂ ವಾಹನ ಚಾಲನಾ ಪರವಾನಗಿಯನ್ನು ಭಾನುವಾರದಿಂದ ಪರ್ಸ್‌ನಲ್ಲಿ ಇಟ್ಟುಕೊಂಡೇ ತಿರುಗಾಡಬೇಕೆಂದಿಲ್ಲ. ಮೋಟಾರು ವಾಹನಗಳ ನಿಯಮಗಳಿಗೆ (1989) ತಿದ್ದುಪಡಿ ತಂದಿರುವುದರಿಂದ ಡಿಎಲ್‌ ಹಾಗೂ ಆರ್‌ಸಿ ಬುಕ್‌ ಸಾಫ್ಟ್‌ ಕಾಪಿ ಇದ್ದರೆ ಸಾಕು. ಡಿಜಿ-ಲಾಕರ್‌ ಅಥವಾ ಎಂಪರಿವಾಹನ (mParivahan) ಪೋರ್ಟಲ್‌ಗಳಲ್ಲಿ ಡಿಎಲ್‌ ಹಾಗೂ ಆರ್‌ಸಿ ಬುಕ್‌ಅನ್ನು ಟ್ರಾಫಿಕ್‌ ಪೊಲೀಸರು ಸೇರಿ ಯಾವುದೇ ಅಧಿಕಾರಿಗಳಿಗೆ ತೋರಿಸಬಹುದಾಗಿದೆ.

3. ರೂಟ್‌ ನ್ಯಾವಿಗೇಷನ್‌ಗಾಗಿ ವಾಹನ ಚಾಲಕರೂ ಮೊಬೈಲ್‌ ಬಳಸಬಹುದು:
ವಾಹನಗಳ ಚಾಲಕರು ಚಾಲನೆ ಮಾಡುವಾಗ ರೂಟ್‌ ನ್ಯಾವಿಗೇಷನ್‌ಗಾಗಿ (Route Navigation) ಮೊಬೈಲ್‌ ಬಳಸಬಹುದಾಗಿದೆ. ಮೋಟಾರು ವಾಹನಗಳ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ರೂಟ್‌ ನ್ಯಾವಿಗೇಷನ್‌ಗಾಗಿ ಮಾತ್ರ ಚಾಲನೆ ಮಾಡುವಾಗ ಮೊಬೈಲ್‌ ಬಳಸಬಹುದಾಗಿದೆ. ಮೊಬೈಲ್‌ ಬಳಕೆಯು ವಾಹನ ಚಾಲನೆಯ ಏಕಾಗ್ರತೆಗೆ ಧಕ್ಕೆ ತರುವ ರೀತಿ ಇರಬಾರದು ಎಂಬ ನಿಯಮ ಇದೆ.

4. ಒಂದು ದಾಖಲೆ ನೀಡಿ ಹಲವು ದಾಖಲೆ ಪಡೆಯಬಹುದು:
ಜನನ ಹಾಗೂ ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ (2023)ಯು ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ. ಕಾಯ್ದೆ ಜಾರಿಯಾದಾಗಿನಿಂದ ದೇಶದಲ್ಲಿ ಹಲವು ದಾಖಲೆ ಪಡೆಯಲು ಒಂದೇ ದಾಖಲೆ ನೀಡಬಹುದಾಗಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ, ವಾಹನ ಚಾಲನಾ ಪರವಾನಗಿ, ಮತಪಟ್ಟಿಯಲ್ಲಿ ಹೆಸರು ಸೇರಿಸುವುದು, ಆಧಾರ್‌, ವಿವಾಹ ನೋಂದಣಿ , ಸರ್ಕಾರಿ ಉದ್ಯೋಗ ಸೇರಿ ಯಾವುದೇ ದಾಖಲೆ ಪಡೆಯಲು ಜನನ ಪ್ರಮಾಣಪತ್ರವನ್ನು ಏಕ ದಾಖಲೆಯಾಗಿ ಬಳಸಬಹುದಾಗಿದೆ.

5. ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ನೆಟ್‌ವರ್ಕ್‌ ಆಯ್ಕೆ ಸ್ವಾತಂತ್ರ್ಯ:
ಕ್ರೆಡಿಟ್‌ ಕಾರ್ಡ್‌ ಹಾಗೂ ಡೆಬಿಟ್‌ ಕಾರ್ಡ್‌ ನಿಯಮಗಳಲ್ಲಿ ಆರ್‌ಬಿಐ ಮಹತ್ವದ ಬದಲಾವಣೆ ಮಾಡಿದ್ದು, ಅಕ್ಟೋಬರ್‌ 1ರಿಂದ ಜಾರಿಗೆ ಬರಲಿವೆ. ಹೊಸ ನಿಯಮಗಳ ಪ್ರಕಾರ, ಗ್ರಾಹಕರು ಇನ್ನು ಮುಂದೆ ವೆಚ್ಚದ ಮಿತಿ (Spending Limit), ಕಾರ್ಟ್‌ ನೆಟ್‌ವರ್ಕ್‌ಗಳನ್ನು (ರುಪೇ, ವೀಸಾ Etc.) ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಪಡೆಯಲಿದ್ದಾರೆ. ಇದುವರೆಗೆ ಬ್ಯಾಂಕ್‌ಗಳು ನೀಡಿದ ಮಿತಿ, ನೆಟ್‌ವರ್ಕ್‌ಗಳನ್ನೇ ಗ್ರಾಹಕರು ಪಡೆಯಬೇಕಾಗಿತ್ತು.

6. ಟಿಸಿಎಸ್‌ ನಿಯಮಗಳ ಬದಲಾವಣೆ:
ಇಂದಿನಿಂದ ಟಿಸಿಎಸ್‌ (Tax Collected At Source ಅಥವಾ ಮೂಲದಲ್ಲೇ ತೆರಿಗೆ ಕಡಿತ) ನಿಯಮಗಳಲ್ಲಿ ಭಾರಿ ಬದಲಾವಣೆ ಆಗಲಿದೆ. ವಿದೇಶಿ ಪ್ರಯಾಣದ ವೇಳೆ ನಿಗದಿತ ಮಿತಿಗಿಂತ ಹೆಚ್ಚು ಹಣ ವ್ಯಯಿಸಿದರೆ, ಮ್ಯೂಚುವಲ್‌ ಫಂಡ್‌ ಸೇರಿ ಹಲವೆಡೆ ಹೂಡಿಕೆ ಮಾಡಿದರೆ ಟಿಸಿಎಸ್‌ ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ, ವಿದೇಶ ಪ್ರವಾಸದ ವೇಳೆ 7 ಲಕ್ಷ ರೂ.ಗಿಂತ ಹೆಚ್ಚು ಹಣ ಖರ್ಚು ಮಾಡಿದರೆ ಶೇ.20ರವರೆಗೆ ಟಿಸಿಎಸ್‌ ಪಾವತಿಸಬೇಕಾಗುತ್ತದೆ.

7. ವಿದೇಶಿ ವಿನಿಮಯಕ್ಕೆ ಶೇ.5ರಷ್ಟು ತೆರಿಗೆ:
ಪ್ರವಾಸಕ್ಕೆ ತೆರಳುವಾಗ ಸೇರಿ ಹಲವು ಸಂದರ್ಭಗಳಲ್ಲಿ ವಿದೇಶಿ ವಿನಿಮಯ (ಆ ದೇಶದ ಕರೆನ್ಸಿ ಪಡೆಯುವುದು) ಮಾಡಿಕೊಳ್ಳಬೇಕಾಗುತ್ತದೆ. ಸುಮಾರು 7 ಲಕ್ಷ ರೂ. ವರ್ಗಾವಣೆ ಮಾಡಿದರೆ ಅದಕ್ಕೆ ಶೇ.5ರಷ್ಟು (ಸುಮಾರು 35 ಸಾವಿರ ರೂ.) ತೆರಿಗೆ ಪಾವತಿಸಬೇಕಾಗುತ್ತದೆ.

8. ಅಡುಗೆ ಎಣ್ಣೆ ಜತೆಗೆ ಸಾಸಿವೆ ಎಣ್ಣೆ ಮಿಶ್ರಣ ನಿಷೇಧ:
ಸಾಸಿವೆ ಎಣ್ಣೆಯನ್ನು ಬೇರೆ ಯಾವುದೇ ಅಡುಗೆ ಎಣ್ಣೆಯ ಜತೆ ಮಿಶ್ರಣ ಮಾಡುವುದನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಷೇಧಿಸಿದ್ದು, ಈ ನಿಯಮಗಳೂ ಅಕ್ಟೋಬರ್‌ 1ರಿಂದ ಜಾರಿಗೆ ಬರಲಿವೆ. ಈ ಕುರಿತು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ.

9. ಆರೋಗ್ಯ ವಿಮೆ ನಿಯಮಗಳಲ್ಲಿ ಬದಲಾವಣೆ:
ಕೊರೊನಾ ಹಿನ್ನೆಲೆಯಲ್ಲಿ ಆರೋಗ್ಯ ವಿಮೆಯ ನಿಯಮಗಳಲ್ಲಿ ಹಲವು ಬದಲಾವಣೆ ಮಾಡಲಾಗಿತ್ತು. ಆದರೀಗ, ಕೊರೊನಾ ಭೀತಿ ಇಲ್ಲದ ಕಾರಣ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ದೀರ್ಘಕಾಲದಿಂದ ಬಳಲುತ್ತಿರುವ 17 ಕಾಯಿಲೆಗನ್ನು ಇನ್ಸುರೆನ್ಸ್‌ ಕವರ್‌ನಿಂದ ತೆಗೆದುಹಾಕಲಾಗಿದೆ. ಈ ನಿಯಮಗಳು ಭಾನುವಾರದಿಂದ ಜಾರಿಗೆ ಬರಲಿವೆ.

10. ಡಿಶ್‌ ಟಿವಿ ಪ್ಯಾನೆಲ್‌ ತುಟ್ಟಿ:
ಅಕ್ಟೋಬರ್‌ 1ರಿಂದ ಡಿಶ್‌ ಟಿವಿ ಪ್ಯಾನೆಲ್‌ಗಳ ಆಮದು ಮೇಲೆ ಶೇ.5ರಷ್ಟು ಸುಂಕ ವಿಧಿಸಿದ ಕಾರಣ ಡಿಶ್‌ ಪ್ಯಾನೆಲ್‌ಗಳ ಬೆಲೆ ಜಾಸ್ತಿಯಾಗುವ ಸಾಧ್ಯತೆ ಇದೆ. ದೇಶೀಯವಾಗಿಯೇ ಪ್ಯಾನೆಲ್‌ಗಳ ಉತ್ಪಾದನೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಆಮದು ಸುಂಕ ವಿಧಿಸಿದೆ.

ಇದನ್ನೂ ಓದಿ: Mangalore: ಮಂಗಳೂರಿನ ಸಂತ ಅಲೋಶಿಯಸ್‌ ವಿದ್ಯಾರ್ಥಿ ರೋನಕ್‌ ಡೇಸಾ ಫೋಟೋಗ್ರಫಿಗೆ ಮನಸೋತ ಭಾರತೀಯ ರೈಲ್ವೇ

Leave A Reply

Your email address will not be published.