Aadhaar Card Types: ಆಧಾರ್ ಕಾರ್ಡ್ ನಲ್ಲಿ 4 ವಿಧ ಅನ್ನೋದು ನಿಮಗೆ ಗೊತ್ತಾ? ಹಾಗಿದ್ರೆ ನಿಮ್ಮ ಆಧಾರ್ ಯಾವುದು ?

Aadahaar card news 4 types of aadhaar card here is complete detail

 

Aadhaar Card Types: 12 ಅಂಕಿಗಳ ವಿಶಿಷ್ಟ ಗುರತಿನ ಸಂಖ್ಯೆಯ ಆಧಾರ್ ಭಾರತೀಯನ ಪ್ರತಿಯೊಬ್ಬ ಅಗತ್ಯ ID ಪುರಾವೆಯಾಗಿದೆ. ಇದು ವಿಶಿಷ್ಟ ಗುರುತಿನ ಪ್ರಾಧಿಕಾರ ದೊಂದಿಗೆ (ಯುಐಡಿಎಐ) ಭಾರತದ ಜನರಿಗೆ ನೀಡುವ ದಾಖಲೆಯಾಗಿದೆ. ಇದರಲ್ಲಿ ಬಯೋಮೆಟ್ರಿಕ್, ಡೆಮಾಗ್ರಾಫಿಕ್ ಮಾಹಿತಿ ಇದರಲ್ಲಿ ಇರುತ್ತದೆ. ವಿಶ್ವದ ಅತೀ ದೊಡ್ಡ ಬಯೋಮೆಟ್ರಿಕ್ ಐಡೆಂಟಿಫಿಕೇಷನ್ ವ್ಯವಸ್ಥೆ ಎಂದರೆ ಅದು ಆಧಾರ್ ಆಗಿದೆ (Aadhaar Card). ಮುಖ್ಯವಾಗಿ ಸರ್ಕಾರದ ಸಬ್ಸಿಡಿ, ಹಣಕಾಸು ವಹಿವಾಟು, ಫಿಂಗರ್‌ಪ್ರಿಂಟ್ ವಿವರಗಳು, ವಿಳಾಸ, ಸಂಪರ್ಕ ವಿವರಗಳು ಮತ್ತು ಇತರ ವೈಯಕ್ತಿಕ ಮಾಹಿತಿ ಸೇರಿದಂತೆ ಬಹು ಗುರುತಿನ ಪುರಾವೆಗಳನ್ನು ಒಳಗೊಂಡಿದೆ.

ಆದರೆ UIDAI ಪ್ರಕಾರ, ಆಧಾರ್ ಕಾರ್ಡ್ ಅನ್ನು ನಾಲ್ಕು ವಿಧದ ಸ್ವರೂಪಗಳಲ್ಲಿ (Aadhaar Card Types) ಮಾನ್ಯವೆಂದು ಪರಿಗಣಿಸಲಾಗುತ್ತದೆ. ಮೊದಲನೆಯದು ಆಧಾರ್ ಪತ್ರ. ಇದು ಕಾಗದ ಆಧಾರಿತ ಲ್ಯಾಮಿನೇಟೆಡ್ ಕಾರ್ಡ್. ಈ ಆಧಾರ್‌ನಲ್ಲಿ ಅದನ್ನು ಮುದ್ರಿಸಿದ ದಿನಾಂಕದೊಂದಿಗೆ, ಆಧಾರ್ ರಚನೆಯ ದಿನಾಂಕವನ್ನು ಸಹ ದಾಖಲಿಸಲಾಗಿರುತ್ತದೆ.

ಎರಡನೆಯದು PVC ಆಧಾರ್ ಕಾರ್ಡ್ ಹಗುರವಾದ ಮತ್ತು ಬಾಳಿಕೆ ಬರುವ ಕ್ರೆಡಿಟ್ ಕಾರ್ಡ್‌ನಂತೆ. ನಿಮ್ಮ ಆಧಾರ್ ಕಳೆದು ಹೋದರೆ ನೀವು ಕೇವಲ 50 ರೂಪಾಯಿ ಪಾವತಿಸಿ PVC ಆಧಾರ್ ಕಾರ್ಡ್ ಅನ್ನು ಮತ್ತೇ ಆರ್ಡರ್ ಮಾಡಬಹುದಾಗಿದೆ.

ಮೂರನೇ ಯದು mAadhaar ಇದು ಯುಐಡಿಎಐ ನೀಡಿದ ಡಿಜಿಟಲ್ ಆಧಾರ್ ಕಾರ್ಡ್ ಆಗಿರುತ್ತದೆ. CIDR ನಲ್ಲಿ ನೋಂದಾಯಿಸಲಾದ ತಮ್ಮ ಆಧಾರ್ ದಾಖಲೆಗಳನ್ನು ಸಾಗಿಸಲು ಆಧಾರ್ ಸಂಖ್ಯೆ ಹೊಂದಿರುವವರಿಗೆ ಇದು ಇಂಟರ್ಫೇಸ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಅಪ್ಲಿಕೇಶನ್, ಆಧಾರ್‌ನಲ್ಲಿ ನಮೂದಿಸಿದ ಮಾಹಿತಿಯೊಂದಿಗೆ ಫೋಟೋವನ್ನು ಸಹ ಒಳಗೊಂಡಿದೆ. ಯಾವುದೇ ಶುಲ್ಕವಿಲ್ಲದೆ ಈ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.

ನಾಲ್ಕನೇ ಯದು , ಇ-ಆಧಾರ್ ಕಾರ್ಡ್‌. ಇದು ಪಾಸ್‌ವರ್ಡ್‌ನಿಂದ ರಕ್ಷಿಸಲ್ಪಟ್ಟ ಎಲೆಕ್ಟ್ರಾನಿಕ್ ಆಧಾರ್ ಕಾರ್ಡ್ ಆಗಿದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಮಾತ್ರ ನೀವು ಯುಐಡಿಎಐ ಅಧಿಕೃತ ವೆಬ್‌ಸೈಟ್‌ನಿಂದ ಇ-ಆಧಾರ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಈ ರೀತಿ ನಾಲ್ಕು ವಿಧಗಳಲ್ಲಿ ಪ್ರಾಧಿಕಾರ ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಅನ್ನು ವಿತರಿಸುತ್ತದೆ.

ಇದನ್ನೂ ಓದಿ: Smile Pinki: ಆಸ್ಕರ್ ವಿಜೇತ ‘ಸ್ಮೈಲ್ ಪಿಂಕಿ’ ಕಲಾವಿದೆ ಮನೆ ಕೆಡವಲು ಸರ್ಕಾರ ನೋಟಿಸ್ !! ಕಾರಣವೇನು?

Leave A Reply

Your email address will not be published.