BMTC ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ರಾಜ್ಯ ಸರಕಾರ!

state government has given good news to BMTC employees

BMTC ನೌಕರರಿಗೆ ರಾಜ್ಯ ಸರಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೆಎಸ್‌ಆರ್‌ಟಿಸಿ ನೌಕರರಿಗೆ ನೀಡುವ ಒಂದು ಕೋಟಿ ರೂ. ವಿಮಾ ಯೋಜನೆಯನ್ನು ಬಿಎಂಟಿಸಿ ನೌಕರರಿಗೂ ವಿಸ್ತರಣೆ ಮಾಡಲಾಗುವುದು ಎಂಬ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾಹಿತಿ ನೀಡಿದ್ದಾರೆ. ಕೆಎಸ್‌ಆರ್‌ಟಿಸಿ ನೌಕರರಿಗೆ ಕಾರ್ಮಿಕ ಕಲ್ಯಾಣ ಯೋಜನೆಯಡಿ ಒಂದು ಕೋಟಿ ರೂ.ವರೆಗೆ ಅಪಘಾತ ವಿಮಾ ಸೌಲಭ್ಯ ಕಲ್ಪಿಸಲಾಗಿದ್ದು, ಇದನ್ನು ಬಿಎಂಟಿಸಿ ನೌಕರರಿಗೆ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ಸಾರಿಗೆ ನೌಕರರು ಸೇವೆಯಲ್ಲಿದ್ದಾಗ ಮೃತಪಟ್ಟರೆ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶವನ್ನು ನೀಡಲಾಗುವುದು, ಹಾಗೆನೇ ನೇಮಕಾತಿ ಆದೇಶಗಳನ್ನು ನೀಡಲಾಗುವುದು ಎಂಬ ಮಾಹಿತಿಯನ್ನು ಕೂಡಾ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

 

ಇದನ್ನು ಓದಿ: Cauvery Dispute Issue:ಕರ್ನಾಟಕಕ್ಕೆ ಮತ್ತೊಂದು ಬಿಗ್ ಶಾಕ್- ಪ್ರತಿ ದಿನ ಇಷ್ಟು ನೀರು ಬಿಡಲೇಬೆಕೆಂದು ಕಾವೇರಿ ಪ್ರಾಧಿಕಾರದ ಮೊರೆ ಹೋದ ತ.ನಾ. ಸರ್ಕಾರ !!

Leave A Reply

Your email address will not be published.