Bomb Blast: ಮಸೀದಿಯಲ್ಲಿ ಭೀಕರ ಬಾಂಬ್‌ ಬ್ಲಾಸ್ಟ್ ! 30 ಜನ ಸ್ಥಳದಲ್ಲೇ ಸಾವು, 17 ಮಂದಿಗೆ ಗಂಭೀರ ಗಾಯ!!!

International news bomb blast news suicide bomb blast near Eid Miladun Nabi procession in Balochistan

Bomb Blast: ಇಂದು ಶುಕ್ರವಾರ ಸಂಭವಿಸಿದ ಭೀಕರ ಬಾಂಬ್‌ ಸ್ಫೋಟದಲ್ಲಿ (Bomb Blast) ಕನಿಷ್ಠ 30 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆಯೊಂದು ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದಿದೆ.

ಈ ಭೀಕರ ಸ್ಫೋಟದಲ್ಲಿ ಉಪಪೊಲೀಸ್‌ ವರಿಷ್ಠಾಧಿಕಾರಿ (ಡಿಎಸ್ಪಿ) ಕೂಡಾ ಸೇರಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮ ಪ್ರಕಟಮಾಡಿದೆ.

ಮಸೀದಿಯೊಂದರಲ್ಲಿ ಈ ಬಾಂಬ್‌ ಸ್ಫೋಟ ಸಂಭವಿಸಿದ್ದು, ಬಲೂಚಿಸ್ತಾನದ ಮಸ್ತುಂಗ್‌ ಜಿಲ್ಲೆಯಲ್ಲಿ ನಡೆದಿದೆ. ಇಂದು (ಶುಕ್ರವಾರ) ಪ್ರವಾದಿ ಮುಹಮ್ಮದ್‌ ಅವರ ಜನ್ಮ ದಿನಾಂಚರಣೆಯಂದು ಜನರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಇಂತಹ ಒಂದು ಭೀಕರ ಸ್ಫೋಟ ಉಂಟಾಗಿದೆ. ಮಸ್ತುಂಗ್ನ ಡಿಎಸ್ಪಿ ನವಾಜ್‌ ಗಶ್ಕೋರಿ ಎಂಬುವವರು ಕೂಡಾ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಹೇಳಿದೆ.

ಬಾಂಬ್‌ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಗಂಭೀರ ಗಾಯಗೊಂಡವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಸೆಪ್ಟೆಂಬರ್‌ನಲ್ಲಿ ಈ ಜಿಲ್ಲೆಯಲ್ಲಿ ನಡೆದ ಭೀಖರ ಎರಡನೇ ಸ್ಫೋಟ ಎಂದು ವರದಿಯಾಗಿದೆ.

 

ಇದನ್ನು ಓದಿ: Cauvery Dispute Issue:ಕರ್ನಾಟಕಕ್ಕೆ ಮತ್ತೊಂದು ಬಿಗ್ ಶಾಕ್- ಪ್ರತಿ ದಿನ ಇಷ್ಟು ನೀರು ಬಿಡಲೇಬೆಕೆಂದು ಕಾವೇರಿ ಪ್ರಾಧಿಕಾರದ ಮೊರೆ ಹೋದ ತ.ನಾ. ಸರ್ಕಾರ !!

Leave A Reply

Your email address will not be published.