TV Debate: ಟಿವಿ ಸ್ಟುಡಿಯೋದಲ್ಲೇ ಹಿಗ್ಗಾಮುಗ್ಗ ಬಡಿದಾಡಿಕೊಂಡ ಪ್ರಬಲ ರಾಜಕೀಯ ನಾಯಕರು – ವಿಡಿಯೋ ವೈರಲ್

Latest news TV Debate Political leaders clashed in the TV studio

TV Debate: ಇಬ್ಬರು ರಾಜಕಾರಣಿಗಳು, ಪಾಕಿಸ್ತಾನದ (Pakistan) ಸುದ್ದಿ ಮಾಧ್ಯಮವೊಂದರ ಸಂವಾದ (TV Debate) ಕಾರ್ಯಕ್ರಮದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಹೌದು, `ಕಲ್ ತಕ್’ ಎಂಬ ಶೋನಲ್ಲಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ (Viral Video) ಆಗಿದೆ. ಇಮ್ರಾನ್ ಖಾನ್ ಅವರ ವಕೀಲ ಶೇರ್ ಅಫ್ಜಲ್ ಮರ್ವಾತ್ ಮತ್ತು ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್‍ನ ಸೆನೆಟರ್ ಆಗಿರುವ ಅಫ್ನಾನ್ ಉಲ್ಲಾ ನಡುವೆ ಈ ಹೊಡೆದಾಟ ನಡೆದಿದೆ.

ಸೆನೆಟರ್ ಅಫ್ನಾನ್ ಅವರು ಇಮ್ರಾನ್ ಖಾನ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಆದರೆ ಶೇರ್ ಅಫ್ಜಲ್ ಮಾರ್ವತ್ ಪ್ರತಿವಾದ ಮಾಡುವ ಬದಲು ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ತಲೆಗೆ ಹೊಡೆದುಕೊಂಡಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಘಟನೆ ಬಳಿಕ ಇಬ್ಬರೂ ರಾಜಕಾರಣಿಗಳು ತಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಅಫ್ನಾನ್ ಉಲ್ಲಾ ಬಳಸಿರುವ ಅವಹೇಳನಕಾರಿ ಭಾಷೆಯಿಂದಾಗಿ ಮಾರ್ವತ್ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾರೆ.

ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ, ಇಷ್ಟು ದೊಡ್ಡ ಹಿಂಸಾಚಾರವನ್ನು ತಡೆಯಲು ವಿಫಲವಾದ `ಕಲ್ ತಕ್’ನ ಹೋಸ್ಟ್ ಸಿಬ್ಬಂದಿಯ ಕ್ರಮವನ್ನು ವೀಕ್ಷಕರು ಖಂಡಿಸಿದ್ದಾರೆ.

https://twitter.com/OsintTV/status/1707408828747092068?ref_src=twsrc%5Etfw%7Ctwcamp%5Etweetembed%7Ctwterm%5E1707408828747092068%7Ctwgr%5E0a338fcb1db8bd1a5cf7ebb97707d62c604ce98f%7Ctwcon%5Es1_c10&ref_url=https%3A%2F%2Fd-38929388841980366213.ampproject.net%2F2309151607000%2Fframe.html

ಇದನ್ನು ಓದಿ: BPL ಕಾರ್ಡ್ ದಾರರಿಗೆ ಭರ್ಜರಿ ಗುಡ್ ನ್ಯೂಸ್ – ನಿಮಗಿನ್ನು ಅಕ್ಕಿ, ದುಡ್ಡು ಮಾತ್ರವಲ್ಲ ‘ಈ ವಸ್ತು’ ಕೂಡ ಉಚಿತವಾಗೇ ಸಿಗಲಿದೆ !!

Leave A Reply

Your email address will not be published.