Bpl card holders: BPL ಕಾರ್ಡ್ ದಾರರಿಗೆ ಭರ್ಜರಿ ಗುಡ್ ನ್ಯೂಸ್ – ನಿಮಗಿನ್ನು ಅಕ್ಕಿ, ದುಡ್ಡು ಮಾತ್ರವಲ್ಲ ‘ಈ ವಸ್ತು’ ಕೂಡ ಉಚಿತವಾಗೇ ಸಿಗಲಿದೆ !!

Latest news intresting news good news for BPL card holders

Bpl card holders: ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಜನರಿಗೆ ಬೆಂಬಲವಾಗಿ ನಿಂತಿವೆ. ಇವುಗಳಲ್ಲಿ ಪಡಿತರ ವಿತರಣೆ(Ration Card)ಕೂಡ ಒಂದಾಗಿದೆ. ಇದೀಗ,BPL ಕಾರ್ಡ್’ದಾರರಿಗೆ ಸಿಹಿಸುದ್ದಿಯೊಂದು ಪ್ರಕಟವಾಗಿದೆ.

ರಾಜಧಾನಿಯ ನಾಲ್ಕು ಕಡೆಗಳಲ್ಲಿ ಮೆಟ್ರೋ ಸಾರಿಗೆ ಹಾಗೂ ಇತರೆ ಮೂಲ ಸೌಕರ್ಯವಿರುವ ಜಾಗದಲ್ಲಿ ಜಮೀನು ಗುರುತಿಸಿಕೊಂಡು 50:50 ಆಧಾರದಲ್ಲಿ ಜಮೀನು ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಬಡಾವಣೆ ನಿರ್ಮಾಣ ಮಾಡುವ ಕುರಿತು ವಸತಿ ಸಚಿವರು ಮಾಹಿತಿ ನೀಡಿದ್ದಾರೆ. ಈ ವಿಚಾರದ ಸಾಧಕ ಬಾಧಕ ಅಧ್ಯಯನ ನಡೆಸಿ ವರದಿ ನೀಡಲು ವಸತಿ ಸಚಿವ ಜಮೀರ್ ಅಹಮದ್ ಖಾನ್ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜಮೀನು ಸ್ವಾಧೀನ ಸೇರಿದಂತೆ ನ್ಯಾಯಲಯದಲ್ಲಿರುವ 122 ವ್ಯಾಜ್ಯ ಇತ್ಯರ್ಥ ನಡೆಸಿ ಅದಾಲತ್ ಮಾದರಿಯಲ್ಲಿ ಅರ್ಜಿದಾರರ ಜೊತೆಗೆ ಸಂಧಾನ ಸಭೆ ಏರ್ಪಡಿಸಲು ವಸತಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರಾಜಧಾನಿಯ ಐದು ಕಡೆ ತಲಾ ಎರಡು ಸಾವಿರ ಎಕರೆ ಯಲ್ಲಿ ಟೌನ್ ಶಿಪ್ ಮತ್ತು ತಲಾ 500 ಎಕರೆಯಲ್ಲಿ ನಾಲ್ಕು ಕಡೆ ವಿಲ್ಲಾ ಯೋಜನೆಗೆ ಜಮೀನು ಗುರುತಿಸಿ ಪ್ರಕ್ರಿಯೆ ಆರಂಭಿಸಿ, ಈ ಸಲುವಾಗಿ ಅಧಿಕಾರಿಗಳ ವಿಶೇಷ ತಂಡ ರಚಿಸಲು ವಸತಿ ಸಚಿವ ಜಮೀರ್ ಅಹಮದ್ ಖಾನ್ ನಿರ್ದೇಶನ ನೀಡಿದ್ದಾರೆ.ಟೌನ್ ಶಿಪ್ ಹಾಗೂ ವಿಲ್ಲಾ ಯೋಜನೆ ಕಡಿಮೆ ಅವಧಿಯಲ್ಲಿ ಸಂಪೂರ್ಣ ಮಾಡಬೇಕಾಗಿದೆ. ಹೀಗಾಗಿ ರೂಪು ರೇಷೆ ಹಾಕಿಕೊಂಡು ಪ್ರತ್ಯೇಕ ವಿಭಾಗ ರಚನೆ ಮಾಡಿ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ.

ಬುಧವಾರ ಗೃಹಮಂಡಳಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಬೆಂಗಳೂರು ನಗರ ಹೊರತುಪಡಿಸಿ ನಾಲ್ಕು ಕಡೆಗಳಲ್ಲಿ ಬಿಪಿಲ್ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ನಿವೇಶನ ಅಥವಾ ಮನೆ ನಿರ್ಮಿಸಿಕೊಡುವ ಯೋಜನೆ ಜಾರಿಗೆ ತರುವ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರದಿಂದ(Government )ಜಮೀನು ಪಡೆದು ಬಡಾವಣೆ ಅಭಿವೃದ್ಧಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಇದು ಆಗದೇ ಇದ್ದಲ್ಲಿ ಮಾಲೀಕರ ಜತೆ 50:50 ಒಪ್ಪಂದ ಮಾಡಿಕೊಂಡು ಬಡಾವಣೆ ಅಭಿವೃದ್ಧಿ ಪಡಿಸಿ ಬಡ ಕುಟುಂಬಗಳಿಗೆ ಮನೆ (House)ಕಲ್ಪಿಸಲು ಆಗುವುದೇ ಎಂಬುದನ್ನು ಪರಿಶೀಲಿಸಿ ವಸತಿ ಸಚಿವರು ಪ್ರಸ್ತಾವನೆ ಸಿದ್ದಪಡಿಸಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ: Mangaluru:  ಮೀನುಗಾರರಿಗೆ ಭರ್ಜರಿ ಬೇಟೆ; ಭಾರೀ ಗಾತ್ರದ ಮುರು ಮೀನು ಬಲೆಗೆ, ತೂಕ ಎಷ್ಟು ಗೊತ್ತೇ?

Leave A Reply

Your email address will not be published.