Rain In Karnataka: ಸುರಿಯಲಿದ್ದಾನೆ ಬಿರುಸಾಗಿ ವರುಣ!!! ಉಡುಪಿಗೆ ಆರೆಂಜ್‌, ದ.ಕ. ಜಿಲ್ಲೆಗೆ ಯೆಲ್ಲೊ ಅಲರ್ಟ್‌! ಮೀನುಗಾರರೇ ಸಮುದ್ರಕ್ಕಿಳಿಯುವ ಮೊದಲು ಎಚ್ಚರ!!!

dakshina kannada news heavy rain in udupi and dakshina kannada districts orange and yellow alert

Rain In Karnataka: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಹಾಗಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಸೂಚನೆ ಇರುವುದರಿಂದ ಹವಾಮಾನ ಇಲಾಖೆ ಹೈ ಅಲರ್ಟ್‌ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಹೀಗಾಗಿ ಸೆ.29 ರಿಂದ ಅಕ್ಟೋಬರ್‌ 01 ರವರೆಗೆ ಉತ್ತರ ಒಳಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ವ್ಯಾಪಾಕ ಮಳೆಯಾಗುವ ಸಂಭವವಿದೆ.

ಮುಂದಿನ 3 ದಿನಗಳಲ್ಲಿ ಅಂದರೆ ಅ.2 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಸೆ.29, ಸೆ.30ರವರೆಗೆ ದಕ್ಷಿಣ ಕನ್ನಡ, ಕಲಬುರ್ಗಿ, ಚಿಕ್ಕಮಗಳೂರು, ಕೊಡಗು, ಕೋಲಾರ, ಬೀದರ್‌ ಇಲ್ಲಿ ಕೂಡಾ ಭಾರೀ ಮಳೆಯಾಗುವ ಮುನ್ಸೂಚನೆ ದೊರೆತಿದ್ದು, ಎಲ್ಲೋ ಅಲರ್ಟ್‌ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಕಾರಣ ಆರೆಂಜ್‌ ಅಲರ್ಟ್‌ ನೀಡಲಾಗಿದೆ.

 

ಇದನ್ನು ಓದಿ: ಕಾವೇರಿ ಹೋರಾಟಕ್ಕೆ ಮಂಗಳಮುಖಿಯರ ಸಾಥ್- ಗೋವಿಂದ ಗೋವಿಂದ ಎನ್ನುತ್ತ ಮಾಡಿದ್ದೇನು ಗೊತ್ತಾ ?!

Leave A Reply

Your email address will not be published.