Karnataka Bandh: ಕಾವೇರಿ ಹೋರಾಟಕ್ಕೆ ಮಂಗಳಮುಖಿಯರ ಸಾಥ್- ಗೋವಿಂದ ಗೋವಿಂದ ಎನ್ನುತ್ತ ಮಾಡಿದ್ದೇನು ಗೊತ್ತಾ ?!

Karnataka Bandh Mangalmukhi's support for Cauvery struggle

Karnataka Bandh: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ವಿರೋಧಿಸಿ, ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದು, ಕರ್ನಾಟಕ ಬಂದ್ (Karnataka Bandh) ಬೆಂಬಲಿಸಿ ಚಿತ್ರನಟ ದರ್ಶನ್ ಅಭಿಮಾನಿಗಳು, ಮಂಗಳಮುಖಿಯರು, ಎಸ್‌ಡಿಪಿಐ ಹಾಗೂ ವಿಶ್ವಕರ್ಮ ಸಮಾಜ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟಿಸಿದ್ದಾರೆ.

ಸದ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ದರ್ಶನ್ ಸೇನಾ ಸಮಿತಿ ಆಶ್ರಯದಲ್ಲಿ ಮೆರವಣಿಗೆ ಹೊರಟ ದರ್ಶನ್ ತೂಗುದೀಪ್ ಅಭಿಮಾನಿಗಳು ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿ ನಾವು ಎಂದೆಂದಿಗೂ ರೈತಪರ ಎಂದರು. ಜೊತೆಗೆ ಗೋವಿಂದ.. ಗೋವಿಂದ.. ಕೆಆರ್‌ಎಸ್‌ನಲ್ಲಿ ನೀರೆಲ್ಲ ಖಾಲಿ ಗೋವಿಂದ, ನಿಲ್ಲಿಸಿ.. ನಿಲ್ಲಿಸಿ.. ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಿ ಎಂದು ಕೂಗಿದ್ದು ಅಲ್ಲದೆ, ಇದೇ ವೇಳೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಮುಖ್ಯವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ.

ಇನ್ನು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪೇಟೆ ಬೀದಿಯಿಂದ ಮೆರವಣಿಗೆ ಹೊರಟು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಳುವ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲಾ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಚಿನ್ನದ ಅಂಗಡಿಯ ಕೆಲಸಗಾರರು ಪೇಟೆ ಬೀದಿಯಿಂದ ಬೈಕ್ ಜಾತ ನಡೆಸಿ ಕಾವೇರಿ ಹೋರಾಟ ಬೆಂಬಲಿಸಿದರು.
ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನಾಮ, ತಮಿಳುನಾಡಿಗೆ ಲಡ್ಡು ಸಿಹಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅದಲ್ಲದೆ ಮಂಗಳಮುಖಿಯರು ಕಾವೇರಿ ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಸಿದ್ದು, ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕಾವೇರಿ ಹೋರಾಟಗಾರರ ಜೊತೆ ಸೇರಿದ ಮಂಗಳಮುಖಿಯರು ಖಾಲಿ ಬಿಂದಿಗೆ ಪ್ರದರ್ಶಿಸಿ ರೈತರಿಗೆ ಆಗಿರುವ ಅನ್ಯಾಯವನ್ನು ಖಂಡಿಸಿದರು. ಹಾಗೆಯೇ ಎಸ್‌ಡಿಪಿಐ ಕಾರ್ಯಕರ್ತರು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿ ಹಲವು ತಾಸು ಪ್ರತಿಭಟನೆ ನಡೆಸಿದರು. ಈ ವೇಳೆ ಕಾವೇರಿ ನಮ್ಮದು, ರೈತರಿಗೆ ಆಗುತ್ತಿರುವ ಅನ್ಯಾಯ ಸರ್ಕಾರ ಮಾಡುತ್ತಿರುವ ದ್ರೋಹವಾಗಿದೆ ಎಂದು ಕಿಡಿಕಾರಿದರು.

ಒಟ್ಟಿನಲ್ಲಿ ಕಾವೇರಿ ನದಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಯೊಂದು ಸಂಘಟನೆಗಳು ಒಟ್ಟಾಗಿ ದಂಗೆ ಎದ್ದಿದ್ದಾರೆ. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು. ವ್ಯವಸಾಯಕ್ಕೆ ನೀರಿಲ್ಲದಂತಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯಲು ಸಹ ನೀರು ಸಿಗದಂತಾಗಲಿದೆ. ನಾವೆಲ್ಲರೂ ಕಾವೇರಿ ನೀರು ಕುಡಿದು ಬದುಕುತ್ತಿದ್ದೇವೆ. ಕಾವೇರಿ ವಿಚಾರದಲ್ಲಿ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ ಎಂದು ಎಲ್ಲರ ನಿಲುವನ್ನು ತಿಳಿಸಿದ್ದಾರೆ.

 

ಇದನ್ನು ಓದಿ: Rules on Private Vehicles: ಖಾಸಗಿ ವಾಹನಗಳ ಮೇಲೆ ಇನ್ನು ಮುಂದೆ ಈ ಸ್ಟಿಕ್ಕರ್‌ ಬಳಸುವಂತಿಲ್ಲ : ಹೈಕೋರ್ಟ್‌ ನೀಡಿದೆ ಗೃಹ ಇಲಾಖೆಗೆ ಮಹತ್ವದ ಆದೇಶ!!!

Leave A Reply

Your email address will not be published.