Gruha jyothi scheme: ಗೃಹಜ್ಯೋತಿ ಫಲಾನುಭವಿಗಳಿಗೆ ಮಹತ್ವದ ಸೂಚನೆ – ಸೆಪ್ಟೆಂಬರ್ 30 ರೊಳಗೆ ಇದೊಂದು ಕೆಲಸ ಮಾಡ್ಲಿಲ್ಲಾಂದ್ರೆ ನಿಮಗೆ ಫ್ರೀ ಕರೆಂಟ್ ಕಟ್

Karnataka news Congress guarantee Important notice for Gruha Jyothi beneficiaries do this work before September 30

Gruha jyothi scheme: ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಪ್ರಮುಖವಾಗಿರುವಂತಹ ಗೃಹಜ್ಯೋತಿ ಯೋಜನೆಗೆ(Gruha jyothi scheme) ಚಾಲನೆ ಸಿಕ್ಕಿದ್ದು ಈಗಾಗಲೇ ಒಂದೆರಡು ತಿಂಗಳಿಂದ ನಾಡಿನ ಜನರು ಉಚಿತ ವಿದ್ಯುತ್ ಅನ್ನು ಪಡೆಯುತಿದ್ದಾರೆ. ಇನ್ನು ಈ ಯೋಜನೆ ಜಾರಿಯಾಗುವಾಗ ಸರ್ಕಾರವು ಕೆಲವು ನಿಯಮಗಳನ್ನು ವಿಧಿಸಿತ್ತು. ಅವುಗಳ ಪೈಕಿ ಒಂದು ನಿಯಮಕ್ಕೆ ನೀಡಿದ್ದ ಗಡುವು ಇದೀಗ ಸನ್ಹಿತವಾಗಿದೆ. ಇದನ್ನು ಪಾಲಿಸದಿದ್ದರೆ ಅಂತವರಿಗೆ ಫ್ರೀ ಕರೆಂಟ್ ಕಟ್ ಆಗಲಿದೆ.

 

ಹೌದು, ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವ ವೇಳೆ ಹಿಂದಿನ ವಿದ್ಯುತ್ ಬಾಕಿ ಉಳಿಸಿಕೊಂಡ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದೇ ಎಂಬ ಅನುಮಾನ ಹಲವರಲ್ಲಿ ಇತ್ತು. ಆಗ ಸರ್ಕಾರವು ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ. ಆದರೆ ಹಿಂಬಾಕಿಯನ್ನು ಸೆ.30 ರೊಳಗೆ ಪಾವತಿಸಬೇಕು. ಅಂದರೆ ಹಿಂದಿನ ವಿದ್ಯುತ್ ಬಿಲ್ ಗಳನ್ನು ಪಾವತಿಸಲು ಇನ್ನೂ ಮೂರು ತಿಂಗಳ ಕಾಲಾವಾಕಾಶ ಇದೆ. ಇದರೊಳಗಾಗಿ ಎಲ್ಲರೂ ಬಿಲ್ ಪಾವತಿಸಬೇಕು. ಇಲ್ಲವಾದರೆ ನಂತರ ಉಚಿತ ವಿದ್ಯುತ್ ನೀಡಲಾಗದು ಎಂದು ಹೇಳಿತ್ತು.

ಸದ್ಯ ಇದೀಗ ಆ ಸಮಯ ಹತ್ತಿರವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸೆಪ್ಟೆಂಬರ್ 30 ಬರಲಿದೆ. ಈಗಾಗಲೇ ಹಲವು ಗ್ರಾಹಕರು ಬಾಕಿ ಶುಲ್ಕ ಪಾವತಿಸಿದ್ದಾರೆ. ಬಾಕಿ ಪಾವತಿಸದ ಗ್ರಾಹಕರಿಗೆ ಕೊನೆಯ 4 ದಿನಗಳ ಕಾಲಾವಕಾಶವಿದೆ. ಒಂದು ವೇಳೆ ಬಿಲ್ ಕಟ್ಟದೆಯೂ ವಿದ್ಯುತ್ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೇ ಅಕ್ಟೋಬರ್, 01 ರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಅನಿವಾರ್ಯವಾಗಿರುತ್ತದೆ ಇಂಧನ ಇಲಾಖೆ ತಿಳಿಸಿದೆ

ಹೀಗಾಗಿ ದಯವಿಟ್ಟು ಯಾರೆಲ್ಲಾ ಹಿಂಬಾಕಿ ಉಳಿಸಿಕೊಂಡಿದ್ದೀರೋ ಅವರೆಲ್ಲರೂ ಇನ್ನೊಂದೆರಡು ದಿನದೊಳಗೆ ಬಿಲ್ ಪಾವತಿಸಿ ಮುಂದಿನ ದಿನಗಳಲ್ಲೂ ನಿರಂತರವಾಗಿ ಗೃಹಜ್ಯೋತಿಯನ್ನು ಪಡೆಯಿರಿ. ಹಿಂಬಾಕಿ ಉಳಿಸಿಕೊಂಡಿದ್ದರೆ ನೀವೂ ಕಟ್ಟಿ, ನಿಮ್ಮ ಅಕ್ಕ ಪಕ್ಕದವರಿಗೂ ಹೇಳಿ ಕಟ್ಟಿಸಿ. ಅಲ್ಲದೆ ಗೃಹಜ್ಯೋತಿಗೆ ಇನ್ನೂ ಅರ್ಜಿ ಹಾಕದೆ ಇದ್ದರೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ. ಈ ಪ್ರಯೋಜನ ಪಡೆಯಲು ನಿಮ್ಮ ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು. ಉಳಿದಂತೆ ಎಪಿಎಲ್ ಕಾರ್ಡ್, ಬಿಪಿಎಲ್ ಕಾರ್ಡ್ ದಾರರೆಲ್ಲರೂ ಇದಕ್ಕೆ ಇದರ ಫಲಾನುಭವಿಗಳಾಗುವ ಅರ್ಹತೆ ಹೊಂದಿದ್ದಾರೆ.

ಇದನ್ನೂ ಓದಿ: PM Modi: ರಕ್ಷಾಬಂಧನಕ್ಕೆ ದೇಶದ ಮಹಿಳೆಯರಿಗೆಲ್ಲಾ ಭರ್ಜರಿ ಗಿಫ್ಟ್ ಅನೌನ್ಸ್ ಮಾಡಿದ ಪ್ರಧಾನಿ ಮೋದಿ – ನಾರಿಯರಂತೂ ಫುಲ್ ಖುಷ್!!

Leave A Reply

Your email address will not be published.