PM Modi: ರಕ್ಷಾಬಂಧನಕ್ಕೆ ದೇಶದ ಮಹಿಳೆಯರಿಗೆಲ್ಲಾ ಭರ್ಜರಿ ಗಿಫ್ಟ್ ಅನೌನ್ಸ್ ಮಾಡಿದ ಪ್ರಧಾನಿ ಮೋದಿ – ನಾರಿಯರಂತೂ ಫುಲ್ ಖುಷ್!!

National Political news PM Modi says women's reservation Bill is his gift to womens on raksha Bandhan day

PM Modi: ರಕ್ಷಾ ಬಂಧನ ಎಂಬುದು ಅಣ್ಣ ತಂಗಿಯರ ಸಂಬಂಧ ಬೆಸೆಯುವ, ಗಟ್ಟಿಗೊಳಿಸುವ ಒಂದು ಹಬ್ಬ. ತಂಗಿಯರಿಗೆ ರಕ್ಷೆಯಾಗಿ ಅವರೆಲ್ಲರ ಕಾರ್ಯಗಳಿಗೆ ಪ್ರೋತ್ಸಾಹಕನಾಗಿ ನಿಲ್ಲುವುದು ಅಣ್ಣನ ಮಹತ್ಕಾರ್ಯವಾಗಿದೆ. ಹೀಗಾಗಿ ರಕ್ಷಾಬಂಧನ ಬಂತೆಂದರೆ ದೇಶದ ಹೆಚ್ಚಿನ ಮಹಿಳೆಯರು ಪ್ರಧಾನಿ ಮೋದಿಯನ್ನು(PM Modi) ಅಣ್ಣನಂತೆ ಕಾಣುತ್ತಾರೆ. ಅಣ್ಣ ಅನ್ನೋದಕ್ಕಿಂತಲೂ ಒಬ್ಬ ಹಿರಿಯ ವ್ಯಕ್ತಿ, ತಮ್ಮ ಸಂಬಂಧದವರೆಂದು ಭಾವನಾತ್ಮಕವಾಗಿ ಕಾಣುತ್ತಾರೆ. ಇದೇ ರೀತಿಯಾಗಿ ಹಲವರು ಮೋದಿಯವರಿಗೆ ರಾಖಿ ಕಟ್ಟಿ ರಕ್ಷಾಬಂಧನವನ್ನು ಸಂಭ್ರಮಿಸುತ್ತಾರೆ.

ಈಗಾಗಲೇ ಕೆಲವು ನಾವು ರಕ್ಷಾ ಬಂಧನವನ್ನು ಆಚರಿಸಿದ್ದೇವೆ. ಮೋದಿಯವರು ಕೂಡ ಕೆಲವೆಡೆ ಮಕ್ಕಳೊಂದಿಗೆ ಬೆರೆತು, ಸಮಯ ಕಳೆದು ಹಾಗೂ ಹಲವು ಮಹಿಳೆಯರಿಂದ ರಾಖಿ ಕಟ್ಟಿಸಿಕೊಳ್ಳುವುದರೊಂದಿಗೆ ಈ ಹಬ್ಬವನ್ನು ಸಂಭ್ರಮಿಸಿದ್ದಾರೆ. ಇನ್ನು ರಾಖಿ ಕಟ್ಟಿದ ಮೇಲೆ ಅಣ್ಣನಾದವನು ಸಮೋದರಿಯರಿಗೆ ಉಡುಗೊರೆ ನೀಡುವುದು ಸಮಾನ್ಯ. ಈ ಹಿನ್ನೆಲೆಯಲ್ಲಿ ರಕ್ಷಾಬಂಧನದ ಪ್ರಯುಕ್ತ ಮೋದಿಯವರು ದೇಶದ ಎಲ್ಲಾ ಮಹಿಳೆಯರಿಗೂ ಬಂಪರ್ ಗಿಫ್ಟ್ ನೀಡಿದ್ದಾರೆ.

ಹಲವು ದಶಕಗಳಿಂದ ನೆನೆಗುಂದಿಗೆ ಬಿದ್ದಿದಂತಹ ಮಹಿಳಾ ಮೀಸಲಾತಿಯನ್ನು ಇತ್ತೀಚಿಗಷ್ಟೇ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ಜಾರಿಗೊಳಿಸಿದರು. ಈ ಮಸೂದೆಗೆ ತಿದ್ದುಪಡಿಯನ್ನು ತಂದು ಶೇಕಡ 33 ರಷ್ಟು ಮಹಿಳೆಯರಿಗೆ ದೇಶಾದ್ಯಂತ ಮೀಸಲಾತಿಯನ್ನು ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಹೀಗಾಗಿ ಮಹಿಳಾ ಮೀಸಲಾತಿಯೇ ರಕ್ಷಾ ಬಂಧನದ ಪ್ರಯುಕ್ತ ನಾನು ದೇಶದ ಮಹಿಳೆಯರಿಗೆ ನೀಡಿದ ಗಿಫ್ಟ್ ಎಂದು ಪ್ರಧಾನಿ ಅವರ ಘೋಷಿಸಿದ್ದಾರೆ.

ಮಧಪ್ರದೇಶದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಕ್ಷಾ ಬಂಧನದಂದು ನೀವು ರಾಖಿ ಕಳಿಸಿದ್ದೀರಿ, ನಿಮ್ಮ ಸೋದರನಾಗಿ ಮಹಿಳಾ ಮೀಸಲು ಮಸೂದೆಯನ್ನು ನಿಮಗೆ ಉಡುಗೊಡೆಯಾಗಿ ನೀಡುತ್ತಿದ್ದೇನೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಹೇಳಿದ್ದಾರೆ. ಮಂಗಳವಾರ ತಮ್ಮನ್ನು ಗೌರವಿಸಲು ಏರ್ಪಡಿಸಲಾಗಿದ್ದ ಮಹಿಳಾ ಮೀಸಲು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು,‘10 ವರ್ಷದ ಹಿಂದ ಮಹಿಳಾ ಮೀಸಲು ಹಿಡಿದು ಜೋತಾಡುತ್ತಿದ್ದವರು, ನಾವು ಜಾರಿ ಮಾಡುತ್ತೇವೆ ಎಂದಾಗ, ‘ಆದರೆ’ ‘ಹೇಗೆ’ ಅಂದೆಲ್ಲಾ ಪ್ರಶ್ನೆಗಳನ್ನು ಕೇಳಿದ್ದರು. ಇದೀಗ ಮಹಿಳೆಯರ ಶಕ್ತಿಗೆ ಅಂಜಿ ಮಸೂದೆಗೆ ಮತ ಹಾಕಿದ್ದಾರೆ. ಮಹಿಳಾ ಮೀಸಲು ಮಸೂದೆ ನನ್ನ ಗ್ಯಾರಂಟಿ’ ಎಂದರು. ಜೊತೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್‌ ಪ್ರವೇಶಿಸುತ್ತಿದ್ದಂತೆ ಅಭಿವೃದ್ಧಿ ತಂತಾನೇ ಆಗುತ್ತದೆ ಎಂದರು

ಇದನ್ನೂ ಓದಿ: Kaveri protest: ಕಾವೇರಿ ನೀರಿಗಾಗಿ ಹೋರಾಟ ಮಾಡೋರಿಗೆಲ್ಲಾ ಬಿಗ್ ಶಾಕ್ – ಇನ್ಮುಂದೆ ಯಾರೂ ಬಂದ್ ಮಾಡುವಂತಿಲ್ಲ ಎಂದ ಡಿಕೆಶಿ !!

Leave A Reply

Your email address will not be published.