D K Shivkumar: ತಮಿಳು ನಾಡಿಗೆ ನೀರು ಬಿಡಲ್ಲ, ಆದರೂ ನೀರು ಹೋಗುತ್ತೆ !! ಡಿಕೆಶಿ ಮಾಡಿದ್ರು ನೋಡಿ ಹೊಸ ಲಾಜಿಕ್- ಏನದು?
Karnataka news Cauvery issue cauvery water will not be released to Tamilnadu said DCM DK Shivakumar
DK Shivakumar: ಕಾವೇರಿ ವಿವಾದದ ವಿಚಾರ ದಿನೇ ದಿನೇ ಕಾವೇರುತ್ತಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಬಂದ್ ಕೂಡ ಯಶಸ್ವಿಯಾಗಿ ಇದೀಗ ರಾಜ್ಯವನ್ನೇ ಬಂದ್ ಮಾಡಲು ಸಂಘಟನೆಗಳು ತಯಾರಾಗಿವೆ. ಆದರೆ ಇಷ್ಟಾದರೂ ಯಾವುದೇ ರೀತಿಯ ಬೆಳವಣಿಗೆಗಳು ಇನ್ನು ಈ ವಿಚಾರವಾಗಿ ನಡೆದಿಲ್ಲ. ಆದರೆ ಈ ನಡುವೆಯೇ ಡಿಸಿಎಂ ಡಿ ಕೆ ಶಿವಕುಮಾರ್(DK Shivakumar)ರವರು ಕಾವೇರಿ ನೀರು ಹರಿಸುವ ಕುರಿತು ಹೊಸ ಲಾಜಿಕ್ ಒಂದನ್ನು ಸೃಷ್ಟಿಸಿದ್ದಾರೆ. ಹಾಗಿದ್ರೆ ಏನದು?
ಒಂದು ಕಡೆ ಕಾವೇರಿ ವಿಚಾರದಲ್ಲಿ ಬೆಂಗಳೂರು ಬಂದ್ (Bengaluru Bandh) ಯಶಸ್ವಿಯಾಗಿದೆ. ಮತ್ತೊಂದೆಡೆ ತಮಿಳುನಾಡಿಗೆ (Tamil Nadu) ಕಾವೇರಿ ನೀರು (Cauvery water) ಹರಿಸೋದನ್ನು ಖಂಡಿಸಿ, ಮಂಡ್ಯ (Mandya) ಸೇರಿದಂತೆ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ರಾಜ್ಯದ ರಾಜಕಾರಣಿಗಳು ಮಾತ್ರ ಪರಸ್ಪರ ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಆದರೆ ಈ ನಡುವೆ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಸಂಬಂಧ ಜಲಸಂಪನ್ಮೂಲ ಖಾತೆಯನ್ನೂ ಹೊಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಹೌದು, ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದಂತೆ ಬಿಡಬೇಕಾದ ಮೂರು ಸಾವಿರ ಕ್ಯೂಸೆಕ್ ನೀರಿನಲ್ಲಿ ಕೆಆರ್‌ಎಸ್ ನಿಂದ ಒಂದು ಹನಿ ನೀರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ. ಎರಡು ಸಾವಿರ ಕ್ಯೂಸೆಕ್ ನೀರು ಸಾಮಾನ್ಯವಾಗಿ ಹರಿದು ಹೋಗುತ್ತಿರುತ್ತದೆ. ಒಂದು ಸಾವಿರ ಕ್ಯೂಸೆಕ್ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ರೈತರ ವಿಷಯದಲ್ಲಿ ಯಾವುದೇ ಕಾರಣಕ್ಕೂ ಸರ್ಕಾರ ರಾಜಿಯಾಗುವುದಿಲ್ಲ. ಮಂಡ್ಯ ಭಾಗದ ರೈತರ ಹಿತ ಮುಖ್ಯ ಎಂದರು.
ಅಲ್ಲದೆ ಆಣೆಕಟ್ಟೆ ಕೆಳಗಿನ ಕಾವೇರಿ ಜಲಾನಯನ ಪ್ರದೇಶದಿಂದ ಸಾಮಾನ್ಯವಾಗಿ 2000 ಕ್ಯೂಸೆಕ್ಸ್ ಹರಿದು ಹೋಗುತ್ತಿರುತ್ತದೆ. 1000 ಸಾವಿರ ಕ್ಯೂಸೆಕ್ಸ್ ಬಿಡಬೇಕಾಗುತ್ತದೆ. ಕನಕಪುರ, ಬೆಂಗಳೂರು ಕಡೆಯ ಮಳೆ ನೀರು ಹೋಗುತ್ತಾ ಇರುತ್ತದೆ. ಎರಡು ಮೂರು ದಿನದಿಂದ ಒಳಹರಿವು ಕೂಡ ಚನ್ನಾಗಿದೆ ಹೀಗಾಗಿ ನೀರಿಗೆ ಸಮಸ್ಯೆ ಬರದು. ವಿಪಕ್ಷಗಳು ಈಗಲೂ ರಾಜ್ಯದ ಹಿತಕ್ಕೆ ಮೇಕೆದಾಟು ವಿಚಾರವಾಗಿ ಕೇಂದ್ರದ ಮೇಲೆ ಒತ್ತಡ ತರಲಿ, ಮೂರು ವರ್ಷದಲ್ಲಿ ಅಣೆಕಟ್ಟು ಕಟ್ಟುವ ಕೆಲಸ ಮುಗಿಸುತ್ತೇನೆ. ಆಗ ಯಾವ ಸಮಸ್ಯೆಯೂ ಬರದು ಎಂದರು.
ಇದನ್ನೂ ಓದಿ: M P Renukacharya: ಕಾಂಗ್ರೆಸ್ ಸೇರ್ಪಡೆ ವಿಚಾರ- ಬಿಗ್ ಅಪ್ಡೇಟ್ ಕೊಟ್ಟ ಎಂ ಪಿ ರೇಣುಕಾಚಾರ್ಯ !!