Home Interesting Animal Milk: ಅರೆ.. ಈ ಪ್ರಾಣಿಯ ಹಾಲಿನಲ್ಲಿ ಬಿಯರ್, ವಿಸ್ಕಿಯನ್ನು ಮೀರಿಸೋ ಆಲ್ಕೋಹಾಲ್ ಇದೆಯಂತೆ !...

Animal Milk: ಅರೆ.. ಈ ಪ್ರಾಣಿಯ ಹಾಲಿನಲ್ಲಿ ಬಿಯರ್, ವಿಸ್ಕಿಯನ್ನು ಮೀರಿಸೋ ಆಲ್ಕೋಹಾಲ್ ಇದೆಯಂತೆ ! 2 ಗುಟುಕು ಕುಡಿದ್ರೂ ಸಾಕು ಅಮಲಲ್ಲಿ ತೇಲುತ್ತಾರಂತೆ!!

Animal milk
Image source: The times of india

Hindu neighbor gifts plot of land

Hindu neighbour gifts land to Muslim journalist

Animal Milk: ದಿನನಿತ್ಯ ಆಹಾರದಲ್ಲಿ ಹಸುವಿನ ಹಾಲನ್ನು ಬಳಸುವುದು ಸಾಮಾನ್ಯ. ವಿಟಮಿನ್ ಬಿ ಹೇರಳವಾಗಿರುವ, ಹಸುವಿನ ಹಾಲಿನಲ್ಲಿರುವ ಪ್ರೋಟೀನ್ ಉತ್ತಮ ಗುಣಮಟ್ಟದ್ದಾಗಿದ್ದು, ಲೈಸಿನ್ ಸೇರಿದಂತೆ ಎಲ್ಲಾ ಅಗತ್ಯ ಅಮೈನೋ ಆಮ್ಲಗಳ ಉತ್ತಮ ಸಮತೋಲನವನ್ನು ಹೊಂದಿರುತ್ತದೆ. ಹಾಲಿನ ಪ್ರೋಟೀನ್‌ಗಳು ಹೆಚ್ಚಿನ ಜೈವಿಕ ಮೌಲ್ಯವನ್ನು ಹೊಂದಿವೆ. ಹಾಲಿನ ಪ್ರೋಟೀನ್‌ಗಳು ಹೆಚ್ಚಿನ ಸಸ್ಯಹಾರಿ ಆಹಾರಗಳಿಗೆ ಅಮೂಲ್ಯವಾದ ಪೂರಕಗಳಾಗಿವೆ. 100 ಗ್ರಾಂ ಹಾಲು 3.26 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಸುವಿನ ಹಾಲಿನ ಹೊರತು ಹೆಚ್ಚಿನ ಜನರು ಎಮ್ಮೆ ಅಥವಾ ಮೇಕೆ ಹಾಲನ್ನು ಬಳಸುತ್ತಾರೆ. ಇದರಲ್ಲಿ ಪ್ರೋಟೀನ್​ ಮತ್ತು ವಿಟಮಿನ್​ಗಳು ಸಮೃದ್ಧವಾಗಿವೆ. ಆದರೆ ಇದೊಂದು ಪ್ರಾಣಿಯ ಹಾಲಿನಲ್ಲಿ (Animal Milk) ಆಲ್ಕೋಹಾಲ್ ಇದೆಯಂತೆ. ಅದು ಎಷ್ಟರಮಟ್ಟಿಗೆ ಆಲ್ಕೋಹಾಲ್ ಎಂದರೆ ಅದು ಬಿಯರ್ ಅಥವಾ ವಿಸ್ಕಿಗಿಂತ ಹೆಚ್ಚು ಅಮಲೇರಿಸುತ್ತದೆ. 2 ಗುಟುಕು ಕುಡಿದ್ರೂ ಸಾಕು ಅಮಲಲ್ಲಿ ತೇಲುತ್ತಾರಂತೆ!! ಬನ್ನಿ ಈ ಹಾಲಿನ ಹಿಸ್ಟರಿ ಬಗ್ಗೆ ತಿಳಿಯೋಣ.

ಆ ಪ್ರಾಣಿ ಯಾವುದೆಂದರೆ ಹೆಣ್ಣು ಆನೆ. ಹೌದು, ಆನೆ ಹಾಲಿನಲ್ಲಿ ಶೇಕಡಾ 60ರಷ್ಟು ಆಲ್ಕೋಹಾಲ್ ಇರುತ್ತದೆ. ವೈಜ್ಞಾನಿಕ ಸಂಶೋಧನೆಯ ಪ್ರಕಾರ ಆನೆಗಳು ಕಬ್ಬನ್ನು ತಿನ್ನಲು ಇಷ್ಟಪಡುತ್ತವೆ. ಕಬ್ಬು ದೊಡ್ಡ ಪ್ರಮಾಣದಲ್ಲಿ ಆಲ್ಕೋಹಾಲ್ ರೂಪಿಸುವ ಅಂಶಗಳನ್ನು ಒಳಗೊಂಡಿದೆ. ಆನೆಯ ಹಾಲಿನಲ್ಲಿ ಆಲ್ಕೋಹಾಲ್ ಪ್ರಮಾಣವು ಹೆಚ್ಚಿರುವುದಕ್ಕೆ ಇದೇ ಕಾರಣ. ಆದರೆ ಆನೆ ಹಾಲು ಮನುಷ್ಯರಿಗೆ ಉಪಯುಕ್ತವಲ್ಲ. ಹಾಲಿನಲ್ಲಿ ಕಂಡುಬರುವ ರಾಸಾಯನಿಕಗಳು ಅಪಾಯಕಾರಿ. ಈ ಹಾಲಿನಲ್ಲಿ ಬೀಟಾ ಕ್ಯಾಸೀನ್ ಇದ್ದು, ಹಾಲಿನಲ್ಲಿ ಹೆಚ್ಚಿನ ಮಟ್ಟದ ಲ್ಯಾಕ್ಟೋಸ್ ಇರುತ್ತದೆ.

ಸಂಶೋಧನೆಯ ಪ್ರಕಾರ, ಆಫ್ರಿಕನ್ ಹೆಣ್ಣು ಆನೆಗಳು ಹೆಚ್ಚಿನ ಮಟ್ಟದ ಲ್ಯಾಕ್ಟೋಸ್ ಮತ್ತು ಆಲಿಗೋಸ್ಯಾಕರೈಡ್‌ಗಳನ್ನು ಹೊಂದಿರುತ್ತವೆ. ಆಫ್ರಿಕನ್ ಹೆಣ್ಣು ಆನೆಗಳು ದಿನಕ್ಕೆ 12 ರಿಂದ 18 ಗಂಟೆಗಳ ಕಾಲ ಹುಲ್ಲು, ಎಲೆಗಳು ಮತ್ತು ಹಣ್ಣುಗಳನ್ನು ತಿನ್ನುತ್ತವೆ. ಒಟ್ಟು ದಿನಕ್ಕೆ ಸರಾಸರಿ 150 ಕೆಜಿ ಆಹಾರವನ್ನು ತಿನ್ನುತ್ತದೆ. ಅಂತಹ ದೊಡ್ಡ ಪ್ರಮಾಣ ಆಹಾರ ಸೇವನೆಯ ಪ್ರಾಣಿಯಿಂದ ಉತ್ಪತ್ತಿಯಾಗುವ ಹಾಲಿನಲ್ಲಿ ಪೋಷಕಾಂಶಗಳು ಹೆಚ್ಚಾಗಿರುತ್ತದೆ. ಈ ಕಾರಣಕ್ಕಾಗಿ ಮಾನವನಿಗೆ ಇದನ್ನು ಜೀರ್ಣಿಸಿಕೊಳ್ಳಲು ಮತ್ತು ಕರುಳಿನಿಂದ ಹೀರಿಕೊಳ್ಳಲು ಸಾಧ್ಯವಿಲ್ಲ.

ಈಗಾಗಲೇ 2015ರ ‘ಜರ್ನಲ್ ಆಫ್ ಡೈರಿ ಸೈನ್ಸ್’ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಆನೆಯ ಹಾಲಿನಲ್ಲಿ ಕಂಡುಬರುವ ರಾಸಾಯನಿಕಗಳು ಇತರ ಯಾವುದೇ ಪ್ರಾಣಿ ಅಥವಾ ಜಾತಿಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚು ಇದೆ. ಇದು ಆಲಿಗೋಸ್ಯಾಕರೈಡ್ ಎಂಬ ದೊಡ್ಡ ಪ್ರಮಾಣದ ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತದೆ. ಈ ಕಾರ್ಬೋಹೈಡ್ರೇಟ್‌ನ ಹೆಚ್ಚಿನ ಪ್ರಮಾಣವು ಮಾನವರು ಸೇವಿಸಿದಾಗ ಉಬ್ಬುವುದು, ಅನಿಲ ಮತ್ತು ಅತಿಸಾರಕ್ಕೆ ಕಾರಣವಾಗಬಹುದು ಎಂದು ವರದಿ ಹೇಳಿದೆ. ಒಟ್ಟಿನಲ್ಲಿ ಡೈರಿ ಪ್ರಾಣಿ ಹಾಲಿಗೆ ಹೋಲಿಸಿದರೆ ಆನೆಯ ಹಾಲು ಮನುಷ್ಯನಿಗೆ ಅಪಾಯಕಾರಿಯು ಹೌದು.

ಇದನ್ನೂ ಓದಿ: ಪುರುಷರೇ ಸಂಭೋಗಿಸುವಾಗ ಕಾಂಡೋಮ್ ಮಾತ್ರವಲ್ಲ, ಇದನ್ನು ಬಳಸಿದ್ರೂ ಮಕ್ಕಳಾಗಲ್ಲ !! ಹಾಗಿದ್ರೆ ಏನದು?