Unique Identity Card For Students: ಬೆಳ್ಳಂಬೆಳಗ್ಗೆಯೇ ಶಾಲಾ ಮಕ್ಕಳಿಗೆ ಬಂತು ಹೊಸ ರೂಲ್ಸ್ – ಇನ್ನಿದನ್ನು ಕೊಂಡೊಯ್ಯದಿದ್ದರೆ ಶಾಲೆಗಿಲ್ಲ ಪ್ರವೇಶ

Education news important information for students unique Identity card for students like aadhaar card

Unique Identity Card: ವಿದ್ಯಾರ್ಥಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಕೇಂದ್ರ ಸರ್ಕಾರ(Central Government)ಪ್ರತಿ ವಿದ್ಯಾರ್ಥಿಗೂ ಆಧಾರ್ ಕಾರ್ಡ್(Aadhar Card)ರೀತಿಯಲ್ಲಿ ವಿಶಿಷ್ಟ ಗುರುತಿನ ಶೈಕ್ಷಣಿಕ ಸಂಖ್ಯೆ ನೀಡಲು ಚಿಂತನೆ ನಡೆಸಿದೆ.

ಆಧಾರ್ ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುರುತಿನ ಸಂಖ್ಯೆ ( unique Identity Card Number)ನೀಡಲು ಯೋಜನೆ ಮಾಡಲಾಗಿದ್ದು, ಈ ಸಂಖ್ಯೆಯನ್ನು ವಿದ್ಯಾರ್ಥಿಯ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲಾಗುತ್ತದೆ. ನರ್ಸರಿಯಿಂದ ಪದವಿ, ಸ್ನಾತಕೋತ್ತರ ಪದವಿ ಅಧ್ಯಯನದವರೆಗೆ ಈ ಸಂಖ್ಯೆ ಮಾನ್ಯವಾಗಿರುತ್ತದೆ. ವಿದ್ಯಾರ್ಥಿಯ(Student Education)ಸಂಪೂರ್ಣ ಶೈಕ್ಷಣಿಕ ಅವಧಿವರೆಗೆ ಎಂದರೆ ಉನ್ನತ ಶಿಕ್ಷಣ ಪೂರೈಸುವವರೆಗೆ ಶೈಕ್ಷಣಿಕ ಸಂಖ್ಯೆ ಬಳಕೆ ಮಾಡಬಹುದು.ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಮಾದರಿಯಲ್ಲೇ ವಿಶಿಷ್ಟ ಗುರುತಿನ ಶೈಕ್ಷಣಿಕ ಸಂಖ್ಯೆ ನೀಡಲು ಯೋಜನೆ ರೂಪಿಸಿರುವ ಕುರಿತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಟಿ.ಜಿ. ಸೀತಾರಾಮ್ ಮಾಹಿತಿ ನೀಡಿದ್ದಾರೆ.

ಈ ಸಂಖ್ಯೆ ಮೂಲಕ ವಿದ್ಯಾರ್ಥಿಯ ಶೈಕ್ಷಣಿಕ ಮಾಹಿತಿ ಸಂಗ್ರಹವಾಗುತ್ತದೆ. ವಿದ್ಯಾರ್ಥಿಗಳ ಸಾಧನೆ, ಕಳಪೆ ನಿರ್ವಹಣೆ, ಶೈಕ್ಷಣಿಕ ಪ್ರಗತಿ ವಿವರ, ಪ್ರತಿ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಸಹಿತ ಸಂಪೂರ್ಣ ಮಾಹಿತಿಯನ್ನು ಈ ಸಂಖ್ಯೆ ಒಳಗೊಂಡಿರುತ್ತದೆ. ಈ ಶೈಕ್ಷಣಿಕ ಸಂಖ್ಯೆ ಪಡೆಯಲು ವಿದ್ಯಾರ್ಥಿಗಳು ಮೊದಲಿಗೆ ನೋಂದಣಿ ಮಾಡಿಕೊಳ್ಳಬೇಕು. ಆನಂತರ, ವಿದ್ಯಾರ್ಥಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಶೀಘ್ರವೇ ಈ ಯೋಜನೆ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: Atal Pension Yojana:ಕೇಂದ್ರದಿಂದ ಬಂತೊಂದು ಭರ್ಜರಿ ಸುದ್ದಿ | ಈ ಯೋಜನೆಯಿಂದ ಗಂಡ ಹೆಂಡತಿಯರಿಗೆ ಸಿಗುತ್ತೆ ಬರೋಬ್ಬರಿ 10, 000

Leave A Reply

Your email address will not be published.