Chandrayan-3: ಭಾರತದ ವಿಕ್ರಮ್ ಹಾಗೂ ಪ್ರಗ್ಯಾನ್ ನೌಕೆಗಳು ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿದಿಲ್ಲ !! ಅರೆ ಏನಿದು ಶಾಕಿಂಗ್ ನ್ಯೂಸ್ ?!!

Chandrayan-3 Vikram and Pragyan spacecraft did not land on the Moon's South Pole

Chandrayan-3: ಭಾರತದ ಚಂದ್ರಯಾನ-3(Chandrayan-3) ಯೋಜನೆ ಅಭೂತಪೂರ್ವ ಯಶಸ್ಸು ಕಂಡಿದೆ. ಅಂದುಕೊಂಡಂತೆ ಸಾಫ್ಟ್ ಲ್ಯಾಂಡ್ ಆಗುವಲ್ಲಿಂದ ಹಿಡಿದು ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಗಳು 15 ದಿನಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಮಾಹಿತಿ ರವಾನಿಸಿವೆ. ಒಟ್ಟಿನಲ್ಲಿ ಅಂದುಕೊಂಡಂತೆ ಎಲ್ಲವೂ ಯಶಸ್ವಿಯಾಗಿದೆ. ಆದರೆ ಮತ್ತೆ ಮುಂದಿನ ದಿನಗಳಲ್ಲೂ ಈ ನೌಕೆಗಳು ಕಾರ್ಯನಿರ್ವಹಿಸುತ್ತವೆ ಎಂಬ ಭರವಸೆಗೆ, ನಂಬಿಕೆಗೆ ಕೊಂಚ ಹಿನ್ನಡೆಯಾಗಿದೆ. ಇದೇನೆ ಇರಲಿ ಇಡೀ ಪ್ರಪಂಚವೇ ಮಾಡದಂತಹ ಸಾಧನೆಯನ್ನು ನಾವು ಮಾಡಿದ್ದೇವೆ ಎಂಬ ಹೆಮ್ಮೆ ನಮ್ಮಲ್ಲಿದೆ. ಆದರೆ ಈ ನಡುವೆ ನಮ್ಮ ನೆರೆಯ ಶತ್ರು ಚೀನಾ ದೇಶಕ್ಕೆ ಭಾರತದ ಈ ಚಂದ್ರಯಾನದ ಯಶಸ್ಸನ್ನು ಸಹಿಸಲು ಆಗುತ್ತಿಲ್ಲ.

ಇಡೀ ವಿಶ್ವವೇ ಭಾರತದ ಚಂದ್ರಯಾನ- 3 ಅನ್ನು ಒಪ್ಪಿಕೊಂಡು ಕೊಂಡಾಡಿದೆ. ಭಾರತದ ಸಾಧನೆಯನ್ನು ಹಾಡಿ ಹೊಗಳಿವೆ. ಯಾರು ಮಾಡದ ಸಾಧನೆಯನ್ನು ನೀವು ಮಾಡಿದ್ದೇರಿ ಎಂದು ಹೊಗಳಿವೆ. ಆದರೆ ನಮ್ಮ ನೆರೆಯಲ್ಲೇ ಇದ್ದುಕೊಂಡು, ಸದಾ ನಮಗೆ ಕೇಡು ಬಗೆಯುವ ಚೀನಾ ಚಂದ್ರಯಾನ-3ರ ವಿಚಾರವಾಗಿಯೂ ಕೊಂಕು ಮಾತನಾಡಲು ಶುರುಮಾಡಿದೆ. ಅಲ್ಲಿನ ವಿಜ್ಞಾನಿಯೊಬ್ಬರು ಚಂದ್ರಯಾನ-3 ನೌಕೆ ಇಳಿದಿದ್ದು ಚಂದ್ರನ ದಕ್ಷಿಣ ಧ್ರುವವಲ್ಲ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಹೌದು, ಚೀನಾದ ವಿಜ್ಞಾನ ಅಕಾಡೆಮಿಯ ಸದಸ್ಯರಾಗಿರುವ ಹಿಯಿಯ ವಿಜ್ಞಾನಿಗಳಾದ ಒಯಾಂಗ್‌ ಝಿಯಾನ್‌ಅವರು ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಚಂದ್ರಯಾನ–3 ಯೋಜನೆಯ ವಿಕ್ರಂ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಿಂದ 619 ಕಿ.ಮೀ. ದೂರದಲ್ಲಿ ಇಳಿದಿದೆ. ಹೀಗಾಗಿ ಇದನ್ನು ದಕ್ಷಿಣ ಧ್ರುವ ಎಂದು ಕರೆಯಲಾಗದು’ ಎಂದು ಚೀನಾದ ಚಂದ್ರಯಾನ ಯೋಜನೆಯ ಹಿರಿಯ ವಿಜ್ಞಾನಿ ಒಯಾಂಗ್ ಹೇಳಿದ್ದಾರೆ. ಸೈನ್ಸ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು ‘ಚಂದ್ರಯಾನ–3 ಇಳಿದ ಸ್ಥಳ ಚಂದ್ರನ ದಕ್ಷಿಣ ಧ್ರುವ ಅಲ್ಲ. ಬದಲಿಗೆ ಅಂಟಾರ್ಟಿಕ್ ಪೊಲಾರ್‌ ಪ್ರದೇಶ ಎಂದು ಕರೆಯಲಾಗುತ್ತದೆ’ ಎಂದಿದ್ದಾರೆ.

ಇಷ್ಟೇ ಅಲ್ಲದೆ ‘ಚಂದ್ರನ ದಕ್ಷಿಣ ಭಾಗದ 69 ಡಿಗ್ರಿ ಅಕ್ಷಾಂಶದಲ್ಲಿ ಲ್ಯಾಂಡರ್ ಇಳಿದಿದೆ. ಇದು ಚಂದ್ರನ ದಕ್ಷಿಣದ ಒಂದು ಭಾಗವಾಗಿದೆಯೇ ಹೊರತು, ದಕ್ಷಿಣ ಧ್ರುವವಲ್ಲ. ದಕ್ಷಿಣ ಧ್ರುವವು 88.5 ರಿಂದ 90 ಡಿಗ್ರಿ ಅಕ್ಷಾಂಶದಲ್ಲಿದೆ. ಭೂಮಿ ತಿರುಗುವ ಅಕ್ಷವು ಸೂರ್ಯನೆಡೆಗೆ 23.5 ಡಿಗ್ರಿ ವಾಲಿದೆ. ಹೀಗಾಗಿ ದಕ್ಷಿಣ ಧ್ರುವವು 66.5 ರಿಂದ 90 ಡಿಗ್ರಿವರೆಗು ಇದೆ. ಆದರೆ ಚಂದ್ರ ಕೇವಲ 1.5 ಡಿಗ್ರಿಯಷ್ಟೇ ವಾಲಿರುವುದರಿಂದ ದಕ್ಷಿಣ ಧ್ರುವದ ಪ್ರದೇಶ ಕಿರಿದಾಗಿದೆ
ಅಮೆರಿಕದ ನಾಸಾ ಪ್ರಕಾರ ದಕ್ಷಿಣ ಧ್ರುವವು 80ರಿಂದ 90 ಡಿಗ್ರಿ ದಕ್ಷಿಣದಲ್ಲಿದೆ ಎಂದಿದೆ. ಹಾಗಾದರೆ ಚಂದ್ರಯಾನ–3 ಈ ಪ್ರದೇಶದಿಂದ ತುಸು ಮೇಲೆ ಇಳಿದಿದೆ. ಇದು ಚಂದ್ರಯಾನ–2ರಲ್ಲಿ ಯೋಜಿಸಿದ್ದ ಸ್ಥಳಕ್ಕಿಂತ ತುಸು ಮೇಲೆಯೇ ಆಗಿದೆ ಎಂದು ವಾದ ಮಂಡಿಸಿದ್ದಾರೆ.

ಇಷ್ಟೆಲ್ಲಾ ಹೇಳಿದ ಬಳಿಕ ‘2019ರಲ್ಲಿ ಚೀನಾದ ಚಾಂಗ್ ಎ–4 ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಆಟ್ಕೆನ್‌ ಬೇಸಿನ್‌ನಲ್ಲಿ ಇಳಿದಿತ್ತು. ಇದು ದಕ್ಷಿಣದ 45.44 ಡಿಗ್ರಿ ಅಕ್ಷಾಂಶದಲ್ಲಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡರ್ ಇಳಿಸುವುದೇ ಸಾಹಸ. ಭಾರತದ ಇಸ್ರೊ ಪ್ರಯತ್ನ ನಿಜಕ್ಕೂ ಅದ್ಭುತ’ ಎಂದಿದ್ದಾರೆ.

ಇನ್ನು 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್(Vikram lander) ಮತ್ತು ಪ್ರಗ್ಯಾನ್ ರೋವರ್(Pragyan rover) ಗಳನ್ನು ಎಬ್ಬಿಸುವ ಮಹತ್ಕಾರ್ಯಕ್ಕೆ ಇಸ್ರೋ ಮುಂದಾಗಿದೆ. ಇದೀಗ ಮತ್ತೆ ಚಂದ್ರನಲ್ಲಿ ಮುಂಜಾನೆಯಾಗಿದ್ದು ಇದೇ ಕಾರಣಕ್ಕೆ ಇಸ್ರೋ ವಿಜ್ಞಾನಿಗಳು ನಿದ್ರೆಗೆ ಜಾರಿರುವ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಗಳನ್ನು ಎಬ್ಬಿಸಲು ಹಗಲು ರಾತ್ರಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ ಇಷ್ಟು ಪ್ರಯತ್ನ ನಡೆಸಿದರೂ ಕೂಡ ಇಸ್ರೋಗೆ ಚಂದ್ರನ ಮೇಲಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ನಿಂದ ಯಾವುದೇ ರೀತಿಯ ಸಿಗ್ನಲ್ ಗಳು ಬಂದಿಲ್ಲ. ಹೀಗಾಗಿ ಚಂದ್ರನಲ್ಲಿ ಕತ್ತಲು ಕಳೆದು ಬೆಳಕು ಹರಿದಾಗ ಮತ್ತೆ ಪ್ರಗ್ಯಾನ್ ಹಾಗೂ ವಿಕ್ರಮ್ ಎಚ್ಚರಗೊಂಡು ತಮ್ಮ ಕಾರ್ಯ ನಿರ್ವಹಿಸಲಿವೆ ಎಂದು ತಿಳಿದ್ದ ಇಸ್ರೋ ವಿಜ್ಞಾನಿಗಳಿಗೆ ಕೊಂಚ ನಿರಾಸೆಯಾಗಿದೆ.

 

ಇದನ್ನು ಓದಿ: ವಿಟ್ಲ: ಬಾಲಕಿಗೆ ಲೈಂಗಿಕ ಕಿರುಕುಳ ,ಆರೋಪಿ ಮೇಲೆ ಪೋಕ್ಸೋ ಪ್ರಕರಣ ದಾಖಲು

Leave A Reply

Your email address will not be published.