New rules: ಸಿಗ್ನಲ್ ನಲ್ಲಿ ಎಷ್ಟು ಸೆಕುಂಡ್ ಇದ್ರೆ ಇಂಜಿನ್ ಆಫ್ ಮಾಡಬೇಕು ?- ಬಂತು ನೋಡಿ ಹೊಸ ರೂಲ್ಸ್ ! 10 % ಕಾಸು ಉಳಿಸೋ ಪ್ಲಾನ್ !

engine should be off after how many seconds on the signal

New rules:  ಪೆಟ್ರೋಲ್ ಡೀಸೆಲ್ ಬೆಲೆಗಳು ವರ್ಷದಿಂದ ವರ್ಷಕ್ಕೆ ಇರುತ್ತದೆ. ಯಾಕೆಂದರೆ ಈ ಉತ್ಪನ್ನಗಳು ವಿಶ್ವದಲ್ಲಿ ಸೀಮಿತ ಸ್ಟಾಕ್ ನಲ್ಲಿವೆ. ಕೆಲವೇ ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮುಗಿಯಲಿವೆ. ಹಾಗಾಗಿ ಅವುಗಳ ಮಿತವಾದ ಬಳಕೆ ಮಾಡುವುದು ಅಗತ್ಯ. ಹೆಚ್ಚಿನ ಸಂದರ್ಭಗಳಲ್ಲಿ ನಮಗೆ ಯಾವಾಗಲೂ ಒಂದು ಸಂಶಯ ಕಾಡುತ್ತಲೇ ಇರುತ್ತದೆ. ವಾಹನಗಳು ಟ್ರಾಫಿಕ್ ನಲ್ಲಿ ನಿಂತಾಗ ಇಗ್ನಿಷನ್ ಆಫ್ ಮಾಡಬೇಕಾ ಅಥವಾ ಆನ್ ನಲ್ಲೇ ಇಡಬೇಕಾ ಎನ್ನುವುದು ಇವತ್ತಿಗೂ ಹೆಚ್ಚಿನವರಿಗೆ ಕನ್ಫ್ಯೂಷನ್. ಇವತ್ತು ನಾವು ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಿದ್ದೇವೆ.

ವಾಹನಗಳು, ಅದು ದ್ವಿಚಕ್ರ ಆಗಲೀ ಅಥವಾ ಕಾರು ಮುಂತಾದ ನಾಲ್ಕು ಚಕ್ರದ ವಾಹನವಾಗಲೀ ಪೇಟೆ ಪಟ್ಟಣ ಅಥವಾ ಹೆದ್ದಾರಿಗಳಲ್ಲಿ ಸಾಗುವಾಗ ಹಲವು ಕಡೆ ಸಿಗ್ನಲ್ ಗಳಲ್ಲಿ ನಿಲ್ಲಬೇಕಾಗಿ ಬರುವುದು ತೀರಾ ಸಾಮಾನ್ಯ. ಸಿಗ್ನಲ್ ಗಳು 30 ಸೆಕೆಂಡುಗಳಿಂದ 3 ನಿಮಿಷಗಳವರೆಗೆ ಸಾಮಾನ್ಯವಾಗಿ ಇರುತ್ತವೆ. ಹೀಗೆ ಸಿಗ್ನಲ್ ನಿಂತಾಗ ಇಂಜಿನ್ ಆಫ್ ಮಾಡೋದಾ ಅಥವಾ ಬೇಡ್ವಾ ಎನ್ನುವ ಸಂದಿಗ್ದತೆ ಹಲವರದ್ದು. ಒಮ್ಮೆ ಇಂಜಿನ್ ಆಫ್ ಮಾಡಿ ಮತ್ತೆ ಆನ್ ಮಾಡಿದರೆ ಹೆಚ್ಚು ಇಂಧನ ಖರ್ಚಾಗುತ್ತದೆ, ಎನ್ನುವುದು ಎಲ್ಲರ ನಂಬಿಕೆ. ಇದರ ಬಗ್ಗೆ ಇವತ್ತು ಸತ್ಯಾಸತ್ಯತೆಯನ್ನು ನಾವು ತಿಳಿಸಿ ಕೊಡಲಿದ್ದೇವೆ.

ಸಿಗ್ನಲ್ ನಲ್ಲಿ ಇಂಜಿನ್ ಆಫ್ ಯಾವಾಗ ಮಾಡಬೇಕು ?

* ಒಂದು ವೇಳೆ ನೀವು ಸಿಗ್ನಲ್ ನಲ್ಲಿ (New rules )ನಿಂತರೆ, ಸಿಗ್ನಲ್ 10 ರಿಂದ 20 ಸೆಕುಂಡ್ ಗಳಿಗಿಂತ ಹೆಚ್ಚು ಸಮಯ ಇದ್ದರೆ, ನೀವು ಇಂಜಿನ್ ಆಫ್ ಮಾಡಿಬಿಡಬಹುದು. 10 ಸೆಕುಂಡ್ ಇದ್ದರೂ ಇಂಜಿನ್ ಆಫ್ ಮಾಡಬಹುದು.
* 10 ಸೆಕುಂಡಿನಿಂದ 20 ಸೆಕೆಂಡುಗಳ ರೇಂಜ್ ಯಾಕೆ ಕೊಟ್ಟೆವು ಎಂದರೆ ಭಾರತದಲ್ಲಿ ಮುಖ್ಯವಾಗಿ ಎಲ್ಲರಿಗೂ ಅವಸರ. ಎಲ್ಲರಿಗೂ ತಿಳಿದಿರುವಂತೆ ಸಮಯ ಪ್ರಜ್ಞೆ ಭಾರತೀಯರಲ್ಲಿ ಕಮ್ಮಿ ಇದ್ದರೂ ಅವಸರಕ್ಕೇನೂ ಕೊರತೆ ಇಲ್ಲ. ಮುಖ್ಯವಾಗಿ ಟ್ರಾಫಿಕ್ಕಿನಲ್ಲಿ ಮುಂದಿನ ಸಾಲಿನಲ್ಲಿ ನಾವು ಇದ್ದರೆ ಒಂದು ಕ್ಷಣ ಹೆಚ್ಚು ಕಮ್ಮಿ ಆದರೂ ಹಿಂದಿನವರು ನಿರಂತರವಾಗಿ ಹಾರ್ನ್ ಬಜಾಯಿಸುತ್ತಾರೆ. ಇಂತಹ ಸಂದರ್ಭದಲ್ಲಿ ಮುಂದಿನ ಸಾಲಿನ ವಾಹನ ಚಾಲಕರು ಪರಿಸ್ಥಿತಿ ನೋಡಿಕೊಂಡು ಇಂಜಿನ್ ಆಫ್ ಮಾಡಬಹುದು.
* ಟ್ರಾಫಿಕ್ ಸಿಗ್ನಲ್ ನ ಮಧ್ಯದಲ್ಲಿ ಇದ್ದವರು 10 ಸೆಕುಂಡ್ ಇದ್ದರೂ ವಾಹನ ಬಂದ್ ಮಾಡಿ.
* ಇಂಜಿನ್ ಸ್ಟಾರ್ಟ್ ಮಾಡಲು ಹೆಚ್ಚು ಪೆಟ್ರೋಲ್ ಅಥವಾ ಡೀಸೆಲ್ ತೆಗೆದುಕೊಳ್ಳುವುದು ಸತ್ಯ. ಆದರೆ ಈಗಾಗಲೇ ಮನೆಯಿಂದ ಹೊರಡುವಾಗ ಇಂಜಿನ್ ಸ್ಟಾರ್ಟ್ ಆಗಿ ಬಿಸಿಯಾಗಿರುತ್ತದೆ. ಆದುದರಿಂದ ಇಂಜಿನ್ ಆಫ್ ಮಾಡಿ ಮತ್ತೆ ಆನ್ ಮಾಡಿದಾಗ ಹೆಚ್ಚಿನ ಇಂಧನ ಖರ್ಚಾಗುವ ಸಾಧ್ಯತೆ ಇಲ್ಲ.
* ಹೊಸ ವಾಹನಗಳು ಇಂಧನ ಕ್ಷಮತೆಯ ಡಿಸೈನ್ ಇದ್ದು ಸಿಗ್ನಲ್ಗಳಲ್ಲಿ ಆಫ್ ಮಾಡಿ ಮತ್ತೆ ಆನ್ ಮಾಡುವ ಮೂಲಕ ಹೆಚ್ಚು ಇಂಧನ ಬಳಕೆಯಾಗಲ್ಲ.
* ಟ್ರಾಫಿಕ್ ಸಿಗ್ನಲ್ ಇನ್ನೇನು 3 ರಿಂದ 5 ಸೆಕೆಂಡು ಒಳಗೆ ಹೊರಡಲು ಇದೆ ಅನ್ನುವಾಗ ಇಂಜಿನ್ ಆನ್ ಮಾಡಿ.
* ಸ್ಟಾರ್ಟಿಂಗ್ ಟ್ರಬಲ್ ಇರುವ ವಾಹನಗಳನ್ನು ಸಿಗ್ನಲ್ಗಳಲ್ಲಿ ಆಫ್ ಮಾಡಿದರೆ, ಆಗ ವಾಹನವು ಮದ್ಯ ದಾರಿಯಲ್ಲಿ ನಿಂತು ಸಿಗ್ನಲ್ ಬ್ಲಾಕ್ ಆಗುವ ಸಂಭವವಿದೆ ಜಾಗೃತೆ. ಯಾವುದೇ ಕಾರಣಕ್ಕೂ ಸಿಂಗಲ್ ಪುಶ್ ನಲ್ಲಿ ವಾಹನ ಸ್ಟಾರ್ಟ್ ಆಗಬೇಕು, ಆ ರೀತಿ ಸರ್ವಿಸ್ ಮಾಡಿಟ್ಟು ಕೊಳ್ಳುವುದು ವಾಹನ ಚಾಲಕರ ಜವಾಬ್ದಾರಿ.
* ಅತ್ಯಂತ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳಲ್ಲಿ, ಉದಾಹರಣೆಗೆ ಭಾರತದಲ್ಲಿ ದೆಹಲಿ ಜಮ್ಮು ಕಾಶ್ಮೀರ ಮುಂತಾದ ಕಡೆಗಳಲ್ಲಿ ಸಿಗ್ನಲ್ಗಳಲ್ಲಿ ತಕ್ಷಣ ವಾಹನ ಸ್ಟಾರ್ಟ್ ಆಗಲು ಕೇಳಲಿಕ್ಕಿಲ್ಲ. ಹಾಗಾಗಿ ಕನಿಷ್ಠ ಉಷ್ಣಾಂಶವಿರುವ ಪ್ರದೇಶಗಳಲ್ಲಿ ವಾಹನ ಆಫ್ ಮಾಡುವಾಗ ಜಾಗೃತೆ. ಈಗಾಗಲೇ ಇಂಜಿನ್ ತೀರ ಬಿಸಿಯಾಗಿದ್ದರೆ ಮಾತ್ರ ಸಿಗ್ನಲ್ಗಳಲ್ಲಿ ಇಂಜಿನ್ ಆಫ್ ಮಾಡಿ.

ಇಂಜಿನ್ ಆಫ್ ಮಾಡಿದರೆ ಏನು ಲಾಭ ?

ಒಂದು ವೇಳೆ ನೀವು ಒಟ್ಟಾರೆ 10 ನಿಮಿಷ ಇಂಜಿನ್ ಆಫ್ ಮಾಡದೆ ವಿವಿಧ ಟ್ರಾಫಿಕ್ ನಲ್ಲಿ ನಿಂತರೆ 0.098 ಲೀಟರ್ ನಶ್ಟು ಇಂಧನ ಖರ್ಚಾಗುತ್ತದೆ. ಅಂದ್ರೆ ಹೆಚ್ಚು ಕಮ್ಮಿ 100 ಎಂಎಲ್ ನಶ್ಟು ಪೆಟ್ರೋಲ್. (ಲೀಟರಿನ 10 ರಲ್ಲಿ ಒಂದು ಭಾಗ). ಹಾಗಾಗಿ ಟ್ರಾಫಿಕ್ ನಲ್ಲಿ ಇಂಜಿನ್ ಆಫ್ ಮಾಡುವುದರಿಂದ 10% ನಷ್ಟು ಹೆಚ್ಚಿನ ಇಂಧನ ಕ್ಷಮತೆ ಸಾಧಿಸಬಹುದು.
* ನೀವು 3 ಮಿನಿಟ್ ಐಡ್ಲಿಂಗ್ ನಲ್ಲಿ ಗಾಡಿ ಇಟ್ಟರೆ (ಸಿಗ್ನಲ್ ನಲ್ಲಿ (New rules ) ಗಾಡಿ ಆಫ್ ಮಾಡದೆ ನಿಂತರೆ) ಕನಿಷ್ಠ 1 ಕಿಲೋಮೀಟರ್ ಹೋಗುವಷ್ಟು ಇಂಧನವನ್ನು ಅದು ವ್ಯಯಿಸುತ್ತದೆ.
* ಬೆಂಗಳೂರಿನ ವ್ಯಕ್ತಿಯೊಬ್ಬರು ಒಂದು ಪ್ರಯೋಗ ನಡೆಸಿದ್ದು ಅವರು ಟ್ರಾಫಿಕ್ ಇರುವಾಗ ಇಂಜಿನ್ ಆಫ್ ಮಾಡದೆ ಇದ್ದಾಗ, ಲೀಟರಿಗೆ 14 ರಿಂದ 14.5 ಕಿಲೋ ಮೀಟರ್ ಮೈಲೇಜ್ ಇದ್ದದ್ದು ಅವರು ಇಂಜಿನ್ ಆಫ್ ಮಾಡಿ ಚಲಾಯಿಸಿದ ನಂತರ ಮೈಲೇಜು 17 ಕಿಲೋಮೀಟರ್ ಪರ್ ಲೀಟರ್ ಗೆ ಏರಿತ್ತು.
* ಒಂದು ಅಂದಾಜಿನ ಪ್ರಕಾರ 250 ಕೋಟಿಯಷ್ಟು ಮೊತ್ತದ ಇಂಧನ ಪ್ರತಿ ವರ್ಷ ಸಿಗ್ನಲ್ ನಲ್ಲಿ ಇಂಜಿನ್ ಆಫ್ ಮಾಡದೆ ಇರುವ ಕಾರಣದಿಂದ ಪೋಲಾಗುತ್ತದೆ.
* ಸಿಗ್ನಲ್ಗಳಲ್ಲಿ ವಾಹನ ಆಫ್ ಮಾಡುವ ಮೂಲಕ ಅಲ್ಲಿ ದಟ್ಟವಾಗಿ ಮೂಡುವ ಕಾರ್ಬನ್ ಡೈಯಾಕ್ಸೈಡ್ ಕಾರ್ಬನ್ ಆಕ್ಸೈಡ್ ಮತ್ತಿತರ ವಿಷಾನಿಲಗಳ ಸಾಂದ್ರತೆಯನ್ನು ಕಮ್ಮಿ ಮಾಡಬಹುದು.

 

ಇದನ್ನು ಓದಿ: Remove Damp in Wall: ಪಾಚಿಕಟ್ಟಿ ಗೋಡೆಗಳ ಅಂದ ಕೆಟ್ಟಿದೆಯೇ? ಹಾಗಿದ್ರೆ ಈ ಟಿಪ್ಸ್‌ ಫಾಲೋ ಮಾಡಿ

Leave A Reply

Your email address will not be published.