Ujjain: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ! ಮನೆ ಮನೆಗೆ ತೆರಳಿದರೂ ಸಹಾಯ ಮಾಡದ ಜನ!! ಸಿಸಿಟಿವಿಯಲ್ಲಿ ದೃಶ್ಯ ಸೆರೆ!

Madhyapradesh crime news Minor girl semi-naked state and bleeding and seeks help in ujjain

Ujjain:  ಮಹಾಕಲ್‌ ನಗರದ ಉಜ್ಜಯಿನಿಯಲ್ಲಿ (Ujjain)  ಅತ್ಯಾಚಾರದ ನೋವಿನ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು, ಈ ಘಟನೆಯು ಬೆಳಕಿಗೆ ಬಂದ ಕೂಡಲೇ ಪೊಲೀಸರು ಸಂತ್ರಸ್ತ ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ನೀಡಿ, ಅತ್ಯಾಚಾರ ನಡೆದಿರುವುದನ್ನು ಖಚಿತ ಪಡಿಸಿ ಪ್ರಕರಣ ದಾಖಲು ಮಾಡಿದ್ದಾರೆ. ತನಿಖೆಗಾಗಿ ಪೊಲೀಸರು ಎಸ್‌ಐಟಿ ತಂಡ ರಚಿಸಿದ್ದು, 400 ಕ್ಕೂ ಹೆಚ್ಚು ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಪೊಲೀಸರಿಗೆ ಸಿಕ್ಕ ಸಿಸಿಟಿವಿಯಲ್ಲಿ ಅಪ್ರಾಪ್ತ ಬಾಲಕಿಯೋರ್ವಳು ರಸ್ತೆಯಲ್ಲಿ ಓಡಾಡುತ್ತಿರುವುದು, ಅವರ ಮೈಮೇಲಿನ ಬಟ್ಟೆಗಳು ರಕ್ತದ ಕಲೆಗಳಾಗಿರುವುದು ಕಂಡು ಬಂದಿದೆ. ಅವಳು ಎರಡೂವರೆ ಗಂಟೆಗಳ ಕಾಲ ಅಲೆದಾಡುತ್ತಲೇ ಇದ್ದಳು ಆದರೆ ಯಾರೂ ಅವಳಿಗೆ ಸಹಾಯ ಮಾಡಲಿಲ್ಲ. ಆದರೆ, ಹೇಗೋ ಪೊಲೀಸರಿಗೆ ಅಪ್ರಾಪ್ತೆಯ ಸ್ಥಿತಿಯ ಬಗ್ಗೆ ಮಾಹಿತಿ ಸಿಕ್ಕಿತು. ಇದಾದ ನಂತರ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಆಕೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಕೂಡಲೇ ಆಕೆಯನ್ನು ಇಂದೋರ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಯುವತಿಗೆ ಚಿಕಿತ್ಸೆ ಕೊಟ್ಟು, ಚೇತರಿಕೆ ಕಂಡು ಬಂದಿದೆ .

ಅಪ್ರಾಪ್ತ ಬಾಲಕಿಯೊಬ್ಬಳು ಅರೆನಗ್ನ ಸ್ಥಿತಿಯಲ್ಲಿ ಓಡಾಡುತ್ತಿರುವ ಮಾಹಿತಿ ದೊರಕಿದ್ದು, ಕೂಡಲೇ ಸ್ಥಳಕ್ಕೆ ಹೋದಾಗ, ಆಕೆಯನ್ನು ತಕ್ಷಣ ಠಾಣೆಗೆ ಕರೆತರಲಾಗಿದ್ದು, ಆದರೆ ಆಕೆ ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯ ಖಾಸಗಿ ಭಾಗಕ್ಕೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ಇಂದೋರ್‌ಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

400ಕ್ಕೂ ಹೆಚ್ಚು ಕ್ಯಾಮೆರಾಗಳ ದೃಶ್ಯಾವಳಿಗಳನ್ನು ನೋಡಿದ ನಂತರ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸಚಿನ್ ಶರ್ಮಾ ತಿಳಿಸಿದ್ದಾರೆ.

ಅಪ್ರಾಪ್ತ ವಯಸ್ಕಳು ಉಜ್ಜಯಿನಿಯ ನಿವಾಸಿಯಲ್ಲ. ಆದ್ದರಿಂದ ಆಕೆ ಎಲ್ಲಿಯವಳು ಎಂದು ತಿಳಿದು ಬಂದಿಲ್ಲ. ವೀಡಿಯೋದಲ್ಲಿ ಕಾಣಿಸಿರುವ ಹಾಗೆ ಆಕೆ ಕೆಲವು ಜನರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದು, ಬಹುಶಃ ಅವರಿಗೆ ಅವರ ಭಾಷೆ ಅರ್ಥವಾಗಲಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ಸ್ನಾನಕ್ಕೆ ಹೆದರಿ ಕಾರಿನಲ್ಲಿ ಬಚ್ಚಿಟ್ಟುಕೊಂಡ ಬಾಲಕ! ನಂತರ ಆದದ್ದೇ ಭೀಕರ ಘಟನೆ!

Leave A Reply

Your email address will not be published.