Bank Holidays In 2023 October: ಜನರೇ ಗಮನಿಸಿ- ಅಕ್ಟೋಬರ್ ನಲ್ಲಿ ಈ 15 ದಿನ ಬಂದ್ ಆಗಲಿದೆ ಬ್ಯಾಂಕ್ !! ಇಲ್ಲಿದೆ ಡೀಟೇಲ್ಸ್
Bank news bank holidays in October 2023 national holiday list 2023 complete details is here
Bank Holidays In 2023 October: ಸದ್ಯ ಸೆಪ್ಟೆಂಬರ್ ಮುಗಿಯುತ್ತಿದ್ದು ಅಕ್ಟೋಬರ್ ಆರಂಭ ಆಗಲು ಕೆಲವೇ ದಿನ ಇದೆ. ಮುಖ್ಯವಾಗಿ ಅಕ್ಟೋಬರ್ ತಿಂಗಳು ದಸರಾ ಹಬ್ಬದ (dasara festival) ಸಡಗರ. ಶಾಲಾ ಕಾಲೇಜುಗಳಲ್ಲಿ ದಸರಾ ರಜೆಯ ಗಮ್ಮತ್ತು. ಆದ್ದರಿಂದ ಆರ್ಬಿಐ ವೇಳಾಪಟ್ಟಿ ಪ್ರಕಾರ ಭಾರತದ ವಿವಿಧೆಡೆ ಗಾಂಧಿ ಜಯಂತಿ ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ 15 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಆದರೆ ಎಲ್ಲಾ ಬ್ಯಾಂಕುಗಳಿಗೂ 15 ದಿನ ರಜೆ ಇರುವುದಿಲ್ಲ . ಒಂದೊಂದು ಪ್ರದೇಶದಲ್ಲಿ ರಜಾ ದಿನಗಳು ವ್ಯತ್ಯಾಸವಾಗುತ್ತದೆ. ಮುಖ್ಯವಾಗಿ ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರ ಸೇರಿ 10 ದಿನಗಳ ಕಾಲ ರಜೆ ಇದೆ.
ಕರ್ನಾಟಕದಲ್ಲಿ ಅಕ್ಟೋಬರ್ 2023ರಲ್ಲಿ ಬ್ಯಾಂಕ್ ರಜೆ (Bank Holidays In 2023 October) ಇರುವ ದಿನಗಳು:
ಅಕ್ಟೋಬರ್ 1: ಭಾನುವಾರ
ಅಕ್ಟೋಬರ್ 2: ಗಾಂಧಿ ಜಯಂತಿ
ಅಕ್ಟೋಬರ್ 8: ಭಾನುವಾರ
ಅಕ್ಟೋಬರ್ 14: ಎರಡನೇ ಶನಿವಾರ ಮತ್ತು ಮಹಾಲಯ ಅಮಾವಾಸ್ಯ
ಅಕ್ಟೋಬರ್ 15: ಭಾನುವಾರ
ಅಕ್ಟೋಬರ್ 22: ಭಾನುವಾರ
ಅಕ್ಟೋಬರ್ 23: ಮಹಾನವಮಿ
ಅಕ್ಟೋಬರ್ 24: ವಿಜಯದಶಮಿ
ಅಕ್ಟೋಬರ್ 28: ನಾಲ್ಕನೇ ಶನಿವಾರ, ವಾಲ್ಮೀಕಿ ಜಯಂತಿ
ಅಕ್ಟೋಬರ್ 29: ಭಾನುವಾರ
ಅಕ್ಟೋಬರ್ 2023ರಲ್ಲಿ ಬ್ಯಾಂಕ್ ರಜಾ ದಿನಗಳು:
ಅಕ್ಟೋಬರ್ 1: ಭಾನುವಾರ
ಅಕ್ಟೋಬರ್ 2: ಗಾಂಧಿ ಜಯಂತಿ
ಅಕ್ಟೋಬರ್ 8: ಭಾನುವಾರ
ಅಕ್ಟೋಬರ್ 12: ನರಕ ಚತುರ್ದಶಿ
ಅಕ್ಟೋಬರ್ 14: ಎರಡನೇ ಶನಿವಾರ ಮತ್ತು ಮಹಾಲಯ ಅಮಾವಾಸ್ಯ (ಕರ್ನಾಟಕ, ಒಡಿಶಾ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ರಜೆ)
ಅಕ್ಟೋಬರ್ 15: ಭಾನುವಾರ (ಘಟಸ್ಥಾಪನಾ)
ಅಕ್ಟೋಬರ್ 18: ಕಾಟಿ ಭಿಯು (ಅಸ್ಸಾಮ್)
ಅಕ್ಟೋಬರ್ 19: ಸಂವತ್ಸರಿ ಉತ್ಸವ (ಗುಜರಾತ್)
ಅಕ್ಟೋಬರ್ 21: ದುರ್ಗಾ ಪೂಜಾ, ಮಹಾಸಪ್ತಮಿ
ಅಕ್ಟೋಬರ್ 22: ಭಾನುವಾರ
ಅಕ್ಟೋಬರ್ 23: ಮಹಾನವಮಿ (ಆಯುಧ ಪೂಜೆ)
ಅಕ್ಟೋಬರ್ 24: ವಿಜಯದಶಮಿ
ಅಕ್ಟೋಬರ್ 28: ನಾಲ್ಕನೇ ಶನಿವಾರ
ಅಕ್ಟೋಬರ್ 29: ಭಾನುವಾರ
ಅಕ್ಟೋಬರ್ 31: ಸರ್ದಾರ್ ವಲ್ಲಭಭಾಯ್ ಪಟೇಲ್ (ಗುಜರಾತ್ನಲ್ಲಿ ರಜೆ)
202ರ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸಾರ್ವತ್ರಿಕ ರಜೆಗಳು:
ಕರ್ನಾಟಕದಲ್ಲಿ 3 ಬ್ಯಾಂಕುಗಳಿಗೆ ಇರುವ ಇತರ ಸಾರ್ವತ್ರಿಕ ರಜೆಗಳ ವಿವರ:
ನವೆಂಬರ್ 1: ಕನ್ನಡ ರಾಜ್ಯೋತ್ಸವ
ನವೆಂಬರ್ 11: ಎರಡನೇ ಶನಿವಾರ
ನವೆಂಬರ್ 12: ದೀಪಾವಳಿ
ನವೆಂಬರ್ 25: ನಾಲ್ಕನೇ ಶನಿವಾರ
ನವೆಂಬರ್ 30: ಕನಕದಾಸ ಜಯಂತಿ
ಡಿಸೆಂಬರ್ 9: ಎರಡನೇ ಶನಿವಾರ
ಡಿಸೆಂಬರ್ 23: ನಾಲ್ಕನೇ ಶನಿವಾರ
ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ.
ಇದನ್ನೂ ಓದಿ: ಅಯ್ಯೋಧ್ಯೆ ರಾಮ ಮಂದಿರಕ್ಕೆ ರಾಹುಲ್ ಗಾಂಧಿ ಭೇಟಿ ?! ಕಾಂಗ್ರೆಸ್ ಕೊಡ್ತು ಬಿಗ್ ಅಪ್ಡೇಟ್