Kerala: ಪೊಲೀಸ್ ಯೂನಿಫಾರ್ಮ್ ತೊಟ್ಟವರ ಮೇಲೆ ದಾಳಿ ಮಾಡುವಂತೆ ನಾಯಿಗಳಿಗೆ ಸಖತ್ ಟ್ರೇನಿಂಗ್; ಡ್ರಗ್ಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಕುತಂತ್ರ ಬುದ್ಧಿಗೆ ಖಾಕಿ ಬೇಸ್ತು!!!
Kerala news drug dealer trained dogs to bite anyone wearing khaki Cops Face Dog Threat During Raids
Kerala : ನಿಮಗೆ ಗೊತ್ತಿರಬಹುದು, ನೀವೇನಾದರೂ ದಾರಿಯಲ್ಲಿ ನಡೆದುಕೊಂಡು ಹೋದಾಗ, ಕೆಂಪು ಬಟ್ಟೆ ಧರಿಸಿದ್ದರೆ ಗೂಳಿಗಳು ದಾಳಿ ಮಾಡಬಹುದು ಎಂಬ ಅಳುಕು ಇರುತ್ತದೆ. ಆದರೆ ಕೇರಳದಲ್ಲಿ ವ್ಯಕ್ತಿಯೋರ್ವ ಖಾಕಿ ತೊಟ್ಟವರ ಮೇಲೆಯೇ ದಾಳಿ ಮಾಡಲು ನಾಯಿಗಳಿಗೆ ಟ್ರೈನಿಂಗ್ ನೀಡಿದ ರೋಚಕ ಘಟನೆಯೊಂದು ನಡೆದಿದೆ.
ಹೌದು, ಆತನ ಡ್ರಗ್ಸ್ ವ್ಯಾಪಾರ ಮಾಡುವವ. ಹಾಗಾಗಿ ಆರೋಪಿಯ ಮನೆಗೆ ದಾಳಿಗೆಂದು ಹೋದ ಮಾದಕವಸ್ತು ನಿಗ್ರಹ ದಳದ ಪೊಲೀಸರು ಆತನಿಂದ ತರಬೇತಿ ಪಡೆದ 13 ನಾಯಿಗಳಿಂದ ದಾಳಿಗೊಳಗಾದ ಘಟನೆ ಕೇರಳದ(Kerala ) ಕೊಟ್ಟಾಯಂನಲ್ಲಿ ನಡೆದಿದೆ.
ಆರೋಪಿಯು ಖಾಕಿ ಬಟ್ಟೆ ತೊಟ್ಟವರ ಮೇಲೆ ದಾಳಿ ಮಾಡಲು ತರಬೇತಿ ನೀಡಿದ್ದ. ಹೀಗಾಗಿ ಎನ್‌ಸಿಬಿ (NCB) ಅಧಿಕಾರಿಗಳ ಮೇಲೆ ನಾಯಿಗಳು ದಾಳಿ ಮಾಡಿದೆ ಎಂಬ ವಿಷಯ ಹೊರಬಿದ್ದಿದೆ. ಆದರೂ ಆರೋಪಿಯ ಮನೆಯಿಂದ 17ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿ ಪರಾರಿಯಾಗಿದ್ದಾರೆ. ಪುಣ್ಯಕ್ಕೆ ನಾಯಿ ದಾಳಿಯಿಂದ ಪೊಲೀಸರಿಗೆ ಗಾಯವಾಗಿಲ್ಲ ಎಂದು ವರದಿಯಾಗಿದೆ.
ಆರೋಪಿ ತಾನು ನಾಯಿ ತರಬೇತುದಾರ ಎಂದು ಹೇಳಿಕೊಳ್ಳುತ್ತಿದ್ದು, ಕೆಲವು ಶ್ರೀಮಂತರು ದಿನಕ್ಕೆ ಆತನಿಗೆ 1000ರೂ. ಕೊಟ್ಟು ಈತನ ಮನೆಗೆ ತರಬೇತಿಗೆ ನಾಯಿ ಬಿಟ್ಟು ಹೋಗುತ್ತಿದ್ದರೆಂದು ವರದಿಯಾಗಿದೆ. ಈ ಸಂದರ್ಭ ಸುತ್ತಮುತ್ತಲಿನ ನಾಯಿಗಳಿಗೆ ಖಾಕಿ ಕಂಡರೆ ದಾಳಿ ಮಾಡುವ ತರಬೇತಿ ಕೂಡಾ ನೀಡಿದ್ದಾನೆ ಎಂದು ಹೇಳಲಾಗಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ದಾಳಿ ಮಾಡಿದ 13 ನಾಯಿಗಳ ಮಾಲೀಕರನ್ನು ಗುರುತಿಸಿ ವಾಪಾಸು ನೀಡುವ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Anand Mahindra: ಆನಂದ್ ಮಹೀಂದ್ರಾ ವಿರುದ್ಧ FIR ದಾಖಲು!!!