Anand Mahindra: ಆನಂದ್‌ ಮಹೀಂದ್ರಾ ವಿರುದ್ಧ FIR ದಾಖಲು!!!

uttarpradesh kanpur news anand mahindra booked in kanpur elderly man lodged fir

Anand Mahindra: ಉತ್ತರ ಪ್ರದೇಶದ ಕಾನ್ಪುರದಲ್ಲಿ ನೆಲೆಸಿರುವ ವೃದ್ಧರೊಬ್ಬರು ತಮ್ಮ ಮಗನಿಗಾಗಿ ಜರೀಬ್ ಚೌಕಿಯಲ್ಲಿರುವ ಮಹೀಂದ್ರಾ ಶೋರೂಂನಿಂದ ಸ್ಕಾರ್ಪಿಯೋ ಖರೀದಿಸಿದ್ದು, ಕೆಲವು ದಿನಗಳ ನಂತರ, ದಟ್ಟವಾದ ಮಂಜಿನಿಂದಾಗಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಮಯದಲ್ಲಿ ಕಾರಿನ ಏರ್‌ಬ್ಯಾಗ್‌ಗಳು ತೆರೆಯದೇ ಇರುವದರಿಂದ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ವೃದ್ಧರು ಆರೋಪಿಸಿದ್ದಾರೆ. ಹಾಗಾಗಿ ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ(Anand Mahindra) ಸೇರಿದಂತೆ 13 ಜನರ ವಿರುದ್ಧ ವೃದ್ಧ ವಂಚನೆ ವರದಿಯನ್ನು ದಾಖಲಿಸಿದ್ದಾರೆ.

ಜೂಹಿ ಕಾಲೋನಿ ನಿವಾಸಿ ರಾಜೇಶ್ ಮಿಶ್ರಾ (60) ಅವರು 2020 ರಲ್ಲಿ ಜರಿಬ್ ಚೌಕಿಯಲ್ಲಿರುವ ಶ್ರೀ ತಿರುಪತಿ ಆಟೋ ಏಜೆನ್ಸಿಯಿಂದ 17 ಲಕ್ಷ ರೂಪಾಯಿ ಮೌಲ್ಯದ ಸ್ಕಾರ್ಪಿಯೋ ಕಾರನ್ನು ಖರೀದಿಸಿದ್ದರು. ಜನವರಿ 14, 2022 ರಂದು, ಅವರ ಮಗ ಅಪೂರ್ವ ಮಿಶ್ರಾ ತನ್ನ ಸ್ನೇಹಿತರೊಂದಿಗೆ ಲಕ್ನೋದಿಂದ ಕಾನ್ಪುರಕ್ಕೆ ಬರುತ್ತಿದ್ದರು.

ದಟ್ಟವಾದ ಮಂಜಿನಿಂದಾಗಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಅಪೂರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಏಜೆನ್ಸಿಗೆ ಹೋಗಿ ಸೀಟ್ ಬೆಲ್ಟ್ ಹಾಕಿದ್ದರೂ ಕಾರಿನ ಏರ್ ಬ್ಯಾಗ್ ತೆರೆಯಲಿಲ್ಲ ಎಂದು ಹೇಳಿದ್ದಾಗಿ ರಾಜೇಶ್ ಹೇಳಿದ್ದಾರೆ. ಇದರಿಂದಾಗಿ ಅವರ ಮಗ ಸಾವನ್ನಪ್ಪಿದ್ದಾನೆ.

ಈ ಕುರಿತು ಶೋರೂಂನ ಮ್ಯಾನೇಜರ್ ಮತ್ತು ಸಿಬ್ಬಂದಿಯೊಂದಿಗೆ ಹೇಳಿದಾಗ, ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ರಾಜೇಶ್ ಆರೋಪಿಸಿದ್ದಾರೆ. ಕಾರನ್ನು ತಾಂತ್ರಿಕವಾಗಿ ಪರಿಶೀಲಿಸಿದ್ದು, ಕಾರಿನಲ್ಲಿ ಏರ್ ಬ್ಯಾಗ್ ಇಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದು ರಾಜೇಶ್ ಆರೋಪಿಸಿದ್ದಾರೆ. ಈ ಬಗ್ಗೆ ರಾಜೇಶ್ ರಾಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ಬಳಿಕ ರಾಜೇಶ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಆದೇಶದ ನಂತರ, ಏಜೆನ್ಸಿ ಮ್ಯಾನೇಜರ್, ಚಂದ್ರಪ್ರಕಾಶ್ ಗುರ್ನಾನಿ, ವಿಕ್ರಮ್ ಸಿಂಗ್ ಮೆಹ್ತಾ, ರಾಜೇಶ್ ಗಣೇಶ್ ಜೆಜುರಿಕರ್, ಅನೀಸ್ ದಿಲೀಪ್ ಶಾ, ತೊತ್ಲಾ ನಾರಾಯಣಸಾಮಿ, ಹರ್‌ಗ್ರೇವ್ ಖೇತಾನ್, ಮುತ್ತಯ್ಯ ಮುರ್ಗಪ್ಪನ್ ಮುತ್ತಯ್ಯ ಮತ್ತು ಆನಂದ್ ಗೋಪಾಲ್ ಮಹೀಂದ್ರ ಸೇರಿದಂತೆ 13 ಜನರ ವಿರುದ್ಧ ವಂಚನೆ ಮತ್ತು ಇತರ ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ. ರಾಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Actor Darshan:ಕಾವೇರಿ ಹೋರಾಟದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್ – ನಟನ ವಿರುದ್ಧ ತಿರುಗಿಬಿದ್ದ ರೈತರು

Leave A Reply

Your email address will not be published.