Madyapradesh: ಎಂಟ್ರಿ ಇಲ್ಲಾ ಅಂದ್ರೂ ಬುಲೆಟ್ ಅಲ್ಲಿ ನುಗ್ಗಿ ಬಂದ ಲೇಡಿ ರೈಡರ್- ಪೋಲೀಸರಿಗೂ ಡೋಂಟ್ ಕೇರ್- ನಂತರ ಆದದ್ದೇ ವಿಚಿತ್ರ !!

Madyapradesh: ರೂಲ್ಸ್ ಗಳಿರುವುದೇ ಬ್ರೇಕ್ ಮಾಡೋದಕ್ಕೆ ಎಂಬ ಫಿಲಾಸಫಿ ಯನ್ನ ಪಾಲಿಸುವವರೇ ಹೆಚ್ಚು ಮಂದಿ. ಅದರಲ್ಲಿಯೂ ಯುವ ಜನತೆಯ ಕಥೆ ಕೇಳೋದೇ ಬೇಡ. ಟ್ರಾಫಿಕ್ ರೂಲ್ಸ್(Traffic Rules) ಗಳನ್ನ ಬ್ರೇಕ್ ಮಾಡಿ ಪೋಲೀಸರ ಕೈಯಲ್ಲಿ ತಗಾಲಾಕಿಕೊಳ್ಳುವ ಕೆಲವು ಮಂದಿ ದಂಡ ಪಾವತಿಸಿದ ಬಳಿಕವೂ ಮತ್ತೆ ಮುಂದುವರಿಸುವುದು ತಮ್ಮ ಹಳೆ ಚಾಳಿಯನ್ನು ಎಂಬುದು ವಿಪರ್ಯಾಸ. ಇದೀಗ, ಮದ್ಯಪ್ರದೇಶದಲ್ಲಿ(Madyapradesh)ಪೋಲಿಸರಿಗೆ(Police)ಕ್ಯಾರೇ ಎನ್ನದೆ ಯುವತಿಯೊಬ್ಬಳು ಪ್ರವೇಶವಿಲ್ಲದ ರಸ್ತೆಯಲ್ಲಿ ಬುಲೆಟ್ ನಲ್ಲಿ ಜಬರ್ದಸ್ತ್ ಆಗಿ ಓಡಾಟ ನಡೆಸಿ ಹೆಲ್ಮೆಟ್ ಧರಿಸದೆ(Helmet)ಅಸಭ್ಯವಾಗಿ ಪೊಲೀಸರಿಗೆ ಮಾತಾಡಿದ ಘಟನೆ ವರದಿಯಾಗಿದೆ.

ಯುವತಿಯೊಬ್ಬಳು ಪ್ರವೇಶ ಇರದ ರಸ್ತೆಯಲ್ಲಿ ಬುಲೆಟ್ನಲ್ಲಿ ಬಂದಿದ್ದಲ್ಲದೆ ಪೊಲೀಸರಿಗೂ ಡೋಂಟ್ ಕೇರ್ ಎಂಬಂತೆ ರೋಷಾವೇಶದಿಂದ ವರ್ತಿಸಿದ ಘಟನೆ ಸೆಪ್ಟೆಂಬರ್ 15ರಂದು ನಡೆದಿದೆ ಎನ್ನಲಾಗಿದೆ. ಮಧ್ಯಪ್ರದೇಶ ಮೂಲದ ಎಂಬ ನೂಪುರ್ ಪಟೇಲ್(26) ಮುಂಬೈನ ಬಾಂದ್ರಾ-ವರ್ಲಿ ಸೀಲಿಂಕ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ಪ್ರವೇಶ ಇಲ್ಲದೇ ಹೋದರೂ ಕೂಡ ಬುಲೆಟ್ನಲ್ಲಿ ಹೆಲ್ಮೆಟ್ ಕೂಡ ಧರಿಸದೆ ಬಂದಿದ್ದಾಳೆ.

ಈ ವೇಳೆ, ಅಲ್ಲಿದ್ದ ಸಂಚಾರಿ ಪೊಲೀಸರು ಆಕೆಯನ್ನು ತಡೆದಿದ್ದಾರೆ. ತನ್ನನ್ನು ತಡೆದ ಪೊಲೀಸರಿಗೇ ಡೊಂಟ್ ಕೇರ್ ಧೋರಣೆ ತೋರಿ ಅಸಭ್ಯವಾಗಿ ವರ್ತಿಸಿದ್ದಾಳೆ. ಅಷ್ಟೇ ಅಲ್ಲದೆ, ತುಚ್ಚವಾಗಿ ಮಾತಾಡಿದ್ದಾಳೆ. ಲೇಡಿ ರೈಡರ್ ನಿಯಮ ಉಲ್ಲಂಘನೆ ಮಾಡಿದ ಅಸಭ್ಯವಾಗಿ ಮಾತನಾಡಿದ್ದಳು. ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸರು ಈಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.