Unbreakable world records in Cricket: ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಬ್ರೇಕ್ ಮಾಡದ ದಾಖಲೆಗಳಿವು – ಹಾಗಿದ್ರೆ ಆ 3 ದಾಖಲೆಗಳು ಯಾವುವು?

Unbreakable world records in Cricket: ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಕ್ರಿಕೆಟ್ (Cricket)ಎಂದರೆ ಸಾಕು ಜನರು ಹುಚ್ಚೆದ್ದು ನಿದ್ದೆ ಬಿಟ್ಟು ಮ್ಯಾಚ್ ನೋಡುವವರು ಕೂಡ ಇದ್ದಾರೆ. ‘ಕ್ರಿಕೆಟ್‌’ನಲ್ಲಿ ಈಗಾಗಲೇ ಅನೇಕ ದಾಖಲೆಗಳನ್ನೂ ಬರೆದು ಸಾಧನೆಯ ಮಜಲನ್ನು ದಾಟಿದೆ. ಟೀಮ್ ಇಂಡಿಯಾ ಅನೇಕ ದಾಖಲೆ ಪುಟಗಳಲ್ಲಿ ಹೆಸರು ಬರೆದಿದ್ದು, ದಾಖಲೆ ಮಾಡಿದಂತೆ ದಾಖಲೆ ಬ್ರೇಕ್ ಮಾಡುವುದು ಕೂಡ ಮಾಮೂಲಿ ಆಗಿ ಬಿಟ್ಟಿದೆ. ನೀವು ಇಲ್ಲಿಯವರೆಗೆ ಕೇಳಿರದ ಅಷ್ಟೆ ಏಕೆ, ಮುರಿಯಲು ಅಸಾಧ್ಯವಾದ ವಿಶಿಷ್ಟ 3 ದಾಖಲೆಗಳ(Unbreakable world records in Cricket) ಬಗ್ಗೆ ನಿಮಗೆ ತಿಳಿದಿದೆಯೇ?

ಕ್ರಿಕೆಟ್‌’ನಲ್ಲಿ ಆಟಗಾರನ ಫಿಟ್‌ನೆಸ್‌ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಓರ್ವ ಆಟಗಾರ ತನ್ನ 52ನೇ ವಯಸ್ಸಿನವರೆಗೂ ಕ್ರಿಕೆಟ್ ಆಡುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಇಂಗ್ಲೆಂಡ್‌’ನ ಶ್ರೇಷ್ಠ ಆಲ್‌ ರೌಂಡರ್ ವಿಲ್ಫ್ರೆಡ್ ರೋಡ್ಸ್ 1110 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 4204 ವಿಕೆಟ್‌’ಗಳನ್ನು ಪಡೆದಿದ್ದಾರೆ. 52ನೆಯ ಹರೆಯದಲ್ಲಿ165 ದಿನಗಳವರೆಗೆ ಟೆಸ್ಟ್ ಆಡುವ ಮೂಲಕ ಟೆಸ್ಟ್ ಪಂದ್ಯ ಆಡಿದ ಅತ್ಯಂತ ಹಿರಿಯ ಆಟಗಾರ ಎಂಬ ಮನ್ನಣೆಗೆ ಭಾಜನರಾಗಿದ್ದಾರೆ.

# ODI ಪಂದ್ಯದಲ್ಲಿ ಅತ್ಯಂತ ಎಕಾನಮಿ ಸ್ಪೆಲ್:
1992ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ODI ಪಂದ್ಯದಲ್ಲಿ 0.30ರ ಕೇವಲ 3 ರನ್ ನೀಡಿ 10 ಓವರ್ ಸ್ಪೆಲ್ ನಲ್ಲಿ 8 ಓವರ್ ಬೌಲಿಂಗ್ ಮಾಡಿ 4 ವಿಕೆಟ್ ಗಳಿಸಿದ ಖ್ಯಾತಿ ವೆಸ್ಟ್ ಇಂಡೀಸ್’ನ ಫಿಲ್ ಸಿಮನ್ಸ್ ಅವರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೇ, ಏಕದಿನ ಪಂದ್ಯದಲ್ಲಿ ಅತ್ಯಂತ ಮಿತವ್ಯಯ ಬೌಲಿಂಗ್ ಮಾಡಿ ದಾಖಲೆ ಬರೆದಿದ್ದಾರೆ.ಇವರ ಈ ದಾಖಲೆಯನ್ನು ಬ್ರೇಕ್ ಮಾಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ.

# ಅತ್ಯಧಿಕ ಬ್ಯಾಟಿಂಗ್ ಸರಾಸರಿ:
ಆಸ್ಟ್ರೇಲಿಯಾದ ಕ್ರಿಕೆಟಿಗನಾದ, ಸರ್ ಡಾನ್ ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಟೆಸ್ಟ್‌’ನಲ್ಲಿ ಅವರ ಬ್ಯಾಟಿಂಗ್ ಸರಾಸರಿ 99.94 ಆಗಿದ್ದು, ಇಲ್ಲಿಯ ತನಕ ಯಾವುದೇ ಆಟಗಾರನಿಗೂ ಕೂಡ ಡಾನ್ ಬ್ರಾಡ್ಮನ್ ಅವರ ಬ್ಯಾಟಿಂಗ್ ಸರಾಸರಿಯ ಸಮೀಪಕ್ಕೆ ಕೂಡ ಬರಲು ಸಾಧ್ಯವಾಗಿಲ್ಲ.

Leave A Reply

Your email address will not be published.