Cauvery water issue: ಅಮಿತ್ ಶಾ ಜೊತೆ ‘ಕಾವೇರಿ’ ಕುರಿತು ಕುಮಾರಸ್ವಾಮಿ ಚರ್ಚೆ ?! ಡಿಕೆಶಿ ಕೊಟ್ರು ನೋಡಿ ಸಖತ್ ಟಾಂಗ್
Political news cauvery water row DK Shivakumar salms on HD Kumaraswamy over cauvery water issue
Cauvery water issue : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ (JDS)ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಬಿಜೆಪಿ ಭರದ ತಯಾರಿ ನಡೆಸುತ್ತಿದೆ. ಈ ನಡುವೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಠಕ್ಕರ್ ಕೊಡಲು ಕಾಂಗ್ರೆಸ್ (Congress)ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಒಕ್ಕಲಿಗ ಪ್ರಾಬಲ್ಯದ 8 ಜಿಲ್ಲೆಗಳು ಒಳಗೊಂಡ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿಗೆ ಟಕ್ಕರ್ ನೀಡಿ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ.
ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ (Cauvery water Issue)ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ಹೋರಾಟ ತೀವ್ರಗೊಂಡಿದ್ದು, ರೈತರು, ಕನ್ನಡ ಸಂಘಟನೆಗಳಿಂದ ಸರಣಿ ಪ್ರತಿಭಟನೆ ನಡೆದಿದೆ.ಈ ನಡುವೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಅಮಿತ್ ಶಾ ಜತೆ ಕಾವೇರಿ ಹಂಚಿಕೆ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಸೋನಿಯಾ ಗಾಂಧಿ ಮಧ್ಯ ಪ್ರವೇಶಿಸಿ, ಸಮಸ್ಯೆ ಬಗೆಹರಿಸಬೇಕು ಎಂಬ ಸಿ.ಟಿ. ರವಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ‘ಪ್ರಧಾನಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ದೇವೇಗೌಡರು ಸ್ಪಷ್ಟವಾಗಿ ಹೇಳಿಕೆ ನೀಡಿದ್ದು, ಸಿ.ಟಿ. ರವಿ ಅವರಿಗೆ ಎಲ್ಲೂ ಜಾಗ ಇಲ್ಲ. ಅದಕ್ಕೆ ಹೋರಾಟ ಮಾಡಿ ಮಂಡ್ಯದಲ್ಲಿ ಏನಾದರೂ ಜಾಗ ಸಿಗುವುದೇ ಎಂದು ನೋಡುತ್ತಿದ್ದಾರೆ’ ಎಂದು ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ಅಮಿತ್ ಶಾ ಅವರೊಂದಿಗೆ ಆಡಿದ ನುಡಿಮುತ್ತುಗಳು ಏನು ಎಂಬುದನ್ನೊಮ್ಮೆ ಬಹಿರಂಗಪಡಿಸಲಿ. ಅದನ್ನು ನಾವೂ ಕೇಳುತ್ತೇವೆ ಎಂದು ಡಿ.ಕೆ ಶಿವಕುಮಾರ್ ಒತ್ತಾಯ ಮಾಡಿದ್ದಾರೆ. ಕಾವೇರಿ ವಿಚಾರವಾಗಿ ದೇವೇಗೌಡರು ಒಂದು ಸಂದರ್ಶನ ನೀಡಿದ್ದು, ಅದರಲ್ಲಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಗಮನಿಸಿದಾಗ ಎಲ್ಲವೂ ಸ್ಪಷ್ಟವಾಗಿ ತಿಳಿಯುತ್ತದೆ. ನಾವು ರಾಜ್ಯದ ಹಿತ ಕಾಯಲು, ರೈತರ ಹಿತ ಕಾಯಲು ಪ್ರಯತ್ನ ಪಡುತ್ತಿದ್ದು, ಇದರಲ್ಲಿ ಅನಗತ್ಯವಾಗಿ ರಾಜಕೀಯ ಮಾಡುವುದು ತರವಲ್ಲವೆಂದು ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ: Karkala: ಕರಾವಳಿಗಳಿಗರಿಗೆ ಬಿಗ್ ಶಾಕ್- ಕಾರ್ಕಾಳ ಪರಶುರಾಮನ ಮೂರ್ತಿ ಬದಲಾವಣೆ ?! ಅಸಲಿ-ನಕಲಿ ಬಗ್ಗೆ ಸಚಿವೆ ಹೇಳಿದ್ದೇನು?