Good News for Employees: ಈ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್- ಸಂಬಳದಲ್ಲಿ ಒಮ್ಮೆಗೆ 27, 000 ಹೆಚ್ಚಳ !

Good News for Employees: ಕೇಂದ್ರ ಸರ್ಕಾರವು (Central Government) ತನ್ನ ಉದ್ಯೋಗಿಗಳಿಗೆ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆಯನ್ನು ಹೆಚ್ಚಿಸುತ್ತದೆ. ಸದ್ಯ ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಡಿಎ ನೀಡುತ್ತದೆ. ಇದೀಗ ದೇಶದಲ್ಲಿರುವ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ (Good News for Employees). ಸಂಬಳದಲ್ಲಿ ಒಮ್ಮೆಗೆ 27, 000 ಹೆಚ್ಚಳವಾಗಲಿದೆ.

ತುಟ್ಟಿಭತ್ಯೆಯಲ್ಲಿನ ಹೆಚ್ಚಳವನ್ನು ಸರ್ಕಾರ ಶೀಘ್ರದಲ್ಲಿಯೇ ಪ್ರಕಟಿಸಲಿದೆ. ಈ ಹೆಚ್ಚಳ ಶೇ.3 ಅಥವಾ 4ರಷ್ಟು ಆಗಿರಲಿದೆ. ತುಟ್ಟಿಭತ್ಯೆಯಲ್ಲಿ 3 ಅಥವಾ 4 ಪ್ರತಿಶತ ಹೆಚ್ಚಳವಾದರೂ ಉದ್ಯೋಗಿಗಳ ವೇತನದಲ್ಲಿ ಗಮನಾರ್ಹ ಹೆಚ್ಚಳವಾಗುವುದು. ಹೆಚ್ಚಿಸಿದ ಡಿಎ ಯನ್ನು ಜುಲೈನಿಂದ ನೀಡಲಾಗುವುದು ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಘೋಷಣೆ ಮಾಡಿಲ್ಲ. ನವರಾತ್ರಿಗೂ ಮುನ್ನ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಜನವರಿ ಲೆಕ್ಕಾಚಾರದಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು (DA) ಶೇ.42ಕ್ಕೆ ಹೆಚ್ಚಿಸಲಾಗಿತ್ತು. ಜನವರಿಯಲ್ಲಿ ಏರಿಕೆಯಾದ ನಂತರ, ಇಲ್ಲಿಯವರೆಗೆ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಜನವರಿಯಿಂದ ಜುಲೈವರೆಗೆ AICPI ಮಾಹಿತಿಯ ಪ್ರಕಾರ, ಹಣದುಬ್ಬರ ದರವು 4% ರಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ರೀತಿ ಆದರೆ ಡಿಎ 42 ರಿಂದ 46 ಪ್ರತಿಶತಕ್ಕೆ ಏರುತ್ತದೆ. ಇದರಿಂದಾಗಿ ಕೇಂದ್ರ ನೌಕರರ ವಾರ್ಷಿಕ ವೇತನ 8,000 ರೂಪಾಯಿಯಿಂದ 27,000ಕ್ಕೆ ಏರಿಕೆಯಾಗಲಿದೆ.

ಕನಿಷ್ಠ ಮೂಲ ವೇತನ ರೂ 18,000 ಮೇಲೆ ಡಿಎ ಹೆಚ್ಚಳ ಎಷ್ಟು?

ನೌಕರರ ಮೂಲ ವೇತನ ತಿಂಗಳಿಗೆ 18,000 ರೂ, ಹೊಸ ತುಟ್ಟಿಭತ್ಯೆ (46%) ತಿಂಗಳಿಗೆ ರೂ 8280, ಹಿಂದಿನ ತುಟ್ಟಿಭತ್ಯೆ (42%) ರೂ. 7560, ಡಿಎ ಹೆಚ್ಚಳ – 8280-7560 = ರೂ. 720 ಹಾಗೂ ವಾರ್ಷಿಕ ವೇತನ ಹೆಚ್ಚಳ 720X12 = ರೂ.8640.

56,900 ರೂ.ಗಳ ಗರಿಷ್ಠ ಮೂಲ ವೇತನದಲ್ಲಿ ಡಿಎ ಹೆಚ್ಚಳ ಎಷ್ಟು

ನೌಕರರ ಮೂಲ ವೇತನ ತಿಂಗಳಿಗೆ 56,900 ರೂ, ಹೊಸ ತುಟ್ಟಿಭತ್ಯೆ (46%) ತಿಂಗಳಿಗೆ ರೂ 26,174, ಹಿಂದಿನ ತುಟ್ಟಿಭತ್ಯೆ (42%) ರೂ. 23,898 , ಡಿಎ ಹೆಚ್ಚಳ – 26,174-23,898 = ರೂ. 2,276 ತಿಂಗಳಿಂದ ಹಾಗೂ ವಾರ್ಷಿಕ ವೇತನ ಹೆಚ್ಚಳ= 2276X12= ರೂ. 27,312

Leave A Reply

Your email address will not be published.