ಅನ್ಯಕೋಮಿನ ಯುವಕರ ಗುಂಪಿನಿಂದ ಶಿವನ ದೇವಾಲಯದ ಅವಶೇಷಕ್ಕೆ ಕಲ್ಲೆಸೆತ! ಹಿಂದೂ ಸಂಘಟನೆ ಕಿಡಿ!!

ಶಿವ ದೇವಾಲಯದ ಅವಶೇಷಕ್ಕೆ ಕಿಡಿಕೇಡಿಗಳು ಹಾನಿ ಮಾಡಿದ್ದು, ಜೋಯಿಡಾ ರಾಮನಗರದ ನಾಗೋಡಾ ಕ್ರಾಸ್‌ ಬಳಿ ಜಲಾಶಯ ವ್ಯಾಪ್ತಿಯಲ್ಲಿರುವ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಅನ್ಯಕೋಮಿನ ಯುವಕರು ಈ ಕೃತ್ಯ ಎಸಗಿದ್ದಾರೆಂದು ವರದಿಯಾಗಿದೆ. ಹಿಂದೂ ಸಂಘಟನೆಗಳು ಕಿಡಿಕಾರಿದ್ದಾರೆ.

POK: ಶೀಘ್ರದಲ್ಲೇ ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನ- ರಾಜನಾಥ್ ಸಿಂಗ್ ಮಹತ್ವದ ಹೇಳಿಕೆ

ಶಿವನ ದೇವಾಲಯದ ಸೂಪಾ ಜಲಾಶಯದಲ್ಲಿ ಮುಳುಗಡೆಯಾಗಿತ್ತು. ಮಳೆ ಇಲ್ಲದೆ ನೀರು ಕಡಿಮೆಯಾಗುವ ಸಂದರ್ಭದಲ್ಲಿ ದೇವಸ್ಥಾನ ಕಾಣಿಸುತ್ತದೆ. ಹೀಗೆ ಕಂಡ ದೇವಾಲಯದ ಕಲ್ಲುಗಳಿಗೆ ಯಾರೋ ಕಿಡಿಕೇಡಿಗಳು ಹಾನಿ ಮಾಡಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಘಟನೆ ಸೆ.18 ರಂದು ನಡೆದಿದೆ. ಸೆಲ್ಫಿ ವೀಡಿಯೋ ಮಾಡಿ ಹುಸೈನ್‌ ಶೇಖ್‌ ಎಂಬಾತ ಫೇಸ್‌ಬುಕ್‌ನಲ್ಲಿ ಅವಶೇಷಗಳಿಗೆ ಹಾನಿ ಮಾಡುವುದನ್ನು ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ರಾಮನಗರ ಪೊಲೀಸರಿಗೆ ಮನವಿ ಪತ್ರವನ್ನು ನೀಡಿದ್ದಾರೆ.

 

 

Leave A Reply

Your email address will not be published.