Gadaga: ಜನಿಸಿದ್ದು ಗಂಡು ಮಗು, ತಾಯಿಗೆ ಕೊಟ್ಟದ್ದು ಹೆಣ್ಣು ಮಗು! ಏನಿದು ಎಡವಟ್ಟು? ಪ್ರಕರಣದ ಕಂಪ್ಲೀಟ್‌ ಮಾಹಿತಿ ಇಲ್ಲಿದೆ!

NEGLIGENCE OF KIMS DOCTOR FAMILY OUTRAGED AGAINST THE STAFF WHO REPLACED THE CHILD

Gadaga: ಆಸ್ಪತ್ರೆಯಲ್ಲಿ ತಾನು ಹೆತ್ತ ಮಗು ಗಂಡು ಆಗಿದ್ದರೂ, ಹೆಣ್ಣು ಮಗುವೊಂದನ್ನು ನೀಡಿ, ಉದ್ಧಟತನ ಮೆರೆದ ಘಟನೆಯೊಂದು ಕಿಮ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ. ಗದಗ (Gadaga) ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುತ್ತವ್ವ ಎಂಬ ಮಹಿಳೆಯು ಸೆ.3ರಂದು ಕಿಮ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ತೂಕ ಕಡಿಮೆ ಇರುವುದರಿಂದ ಮಗುವಿಗೆ ಕಳೆದ ಹದಿನೈದು ದಿನದಿಂದ ಚಿಕಿತ್ಸೆ ನಡೆಯುತಿದ್ದು, ಐಸಿಯುನಲ್ಲಿಟ್ಟಿದ್ದಾರೆ. ಜೊತೆಗೆ ತಾಯಿಗೂ ಸಿಸೇರಿಯನ್‌ ಆಗಿರುವುದರಿಂದ ಚಿಕಿತ್ಸೆ ನಡೆಯುತಿತ್ತು.

ಮಗುವಿನ ಜನನ ದಾಖಲೆಯಲ್ಲಿಯೂ ಮಗು ಗಂಡು ಎಂದು ನಮೂದಿಸಿದ್ದರೂ, ಕಿಮ್ಸ್‌ ಸಿಬ್ಬಂದಿಗಳ ಯಡವಟ್ಟಿನಿಂದಾಗಿ ಚಿಕಿತೆ ಬಳಿಕ ಗಂಡು ಮಗು ಬದಲಾಗಿ ಹೆಣ್ಣು ಮಗುವನ್ನು ಕುಟುಂಬದವರ ಕೈಗೆ ನೀಡಿದ್ದಾರೆ.
ಆಸ್ಪತ್ರೆಗೆ ಬಂದು ಹದಿನೆಂಟು ದಿನ ಕಳೆದಿದೆ. ಆಗ ಗಂಡು ಎಂದು ಹೇಳಿ ಈಗ ಹೆಣ್ಣು ಮಗುವನ್ನು ಕೈಗೆ ನೀಡಿದ್ದಾರೆ. ಬೇಕಿದ್ದರೆ ಮಗು ತೆಗೆದುಕೊಳ್ಳಿ ಇಲ್ಲವಾದರೆ ಬಿಡಿ ಎಂದು ಸಿಬ್ಬಂದಿಗಳು ವಾದ ಮಾಡುತ್ತಿದ್ದಾರೆ ಎಂದು ಮಗುವಿನ ತಂದೆ ಶಿವಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪೋಷಕರು ಪ್ರತಿಭಟನೆ ಮಾಡುತ್ತಿದ್ದಂತೆ, ಸ್ಥಳಕ್ಕಾಗಮಿಸಿದ ಕಿಮ್ಸ್‌ ಅಧೀಕ್ಷಕ ಅರುಣ್‌ ಕುಮಾರ್‌, ತಾಯಿ ಹಾಗೂ ಮಗುವಿನ ಕೈಗೆ ಒಂದೇ ನಂಬರಿನ ಬ್ಯಾಂಡ್‌ ಕಟ್ಟಿರುತ್ತಾರೆ. ಬ್ಯಾಂಡ್‌ ಕಳಚಿ ಬಿದ್ದ ಕಾರಣ ಕೆಲಕಾಲ ಗೊಂದಲವುಂಟಾಗಿ ಮಗು ಅದಲು ಬದಲಾಗಿ ಪೋಷಕರಿಗೆ ಮಗು ಬೇರೆಯವರದ್ದು ನೀಡಲಾಗಿತ್ತು. ಈಗ ಪರಿಶೀಲನೆ ನಡೆಸಿ ಗೊಂದಲ ನಿವಾರಣೆಯಾಗಿದೆ. ಮಗು ಪೋಷಕರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಏಡಿ ಖಾದ್ಯಕ್ಕೆ ಭರ್ಜರಿ 56 ಸಾವಿರ ರೂಪಾಯಿ! ಬಿಲ್‌ ನೋಡಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ!!!

Leave A Reply

Your email address will not be published.