ದ.ಕ : ಸಿನಿಮೀಯ ಶೈಲಿಯಲ್ಲಿ ಹೊಡೆದಾಟ : ವಿಡಿಯೋ ವೈರಲ್ !

Share the Article

ಬೆಳ್ತಂಗಡಿ ತಾಲೂಕಿನ ಬಸ್‌ ನಿಲ್ದಾಣದ ಬಳಿ ಮಾರಾಮಾರಿಯೊಂದು ನಡೆದಿರುವ ಘಟನೆಯೊಂದು ವರದಿಯಾಗಿದೆ. ಕಾರು ಬೈಕ್‌ ಅಪಘಾತ ವಿಚಾರದಲ್ಲಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ನಂತರ ಈ ಪ್ರಕರಣ ಠಾಣೆ ಮೆಟ್ಟಿಲೇರಿದೆ. ಬೈಕ್‌ ಮತ್ತು ಕಾರು ಸವಾರರ ಮಧ್ಯೆ ಮಾತುಕತೆ ನಡೆದಿದ್ದು ನಂತರ ಈ ಘಟನೆ ಸುಖಾಂತ್ಯಗೊಂಡಿದೆ ಎಂದು ತಿಳಿದು ಬಂದಿದೆ.

ಘಟನೆ ವಿವರ: ರಸ್ತೆ ಸಂಚಾರದ ವೇಳೆ ಕ್ಷುಲ್ಲಕ ಕಾರಣದಿಂದಾಗಿ ಈ ಘಟನೆ ನಡೆದಿದೆ. ಬೈಕ್‌ವೊಂದು ಲೈಟ್‌ ಆಗಿ ಕಾರಿಗೆ ಡಿಕ್ಕಿ ಹೊಡೆದಿದ್ದೋ ಅಥವಾ ಓವರ್‌ ಟೇಕ್‌ ಮಾಡುವ ಸಂದರ್ಭದಲ್ಲಿ ಇನ್ನೊಂದು ವಾಹನಕ್ಕೆ ಅಡ್ಡಿ ಪಡಿಸಿದ್ದಾರೆ ಎಂಬ ಕಾರಣಕ್ಕೆ ಶುರುವಾದ ಗಲಾಟೆ ನಂತರ ತೀವ್ರ ಸ್ವರೂಪ ಪಡೆದಿದೆ.

5000 ಕೋಟಿಯ ಒಡೆಯ ಪರಂ ಮೇಲೆ ಮುಗಿಬಿದ್ದಿದೆ ಐಟಿ

ಕಾರಿನಲ್ಲಿದ್ದ ಮೂವರು ಯುವಕರು ಬಸ್ಸು ನಿಲ್ದಾಣದ ಬಳಿಕೆ ಹೆಲ್ಮೆಟ್‌ನಿಂದ ಬೈಕ್‌ ಸವಾರನ ಮೇಲೆ ಯದ್ವಾತದ್ವಾ ಹಲ್ಲೆ ಮಾಡಿರುವುದು ಕಂಡು ಬಂದಿದೆ. ಉಜಿರೆಯಲ್ಲಿ ಗಾರೆ ಕೆಲಸ ಮಾಡಿಕೊಂಡಿರುವ ಪಶ್ಚಿಮ ಬಂಗಾಲ ಮೂಲದ ಯುವಕ  ಹಲ್ಲೆಗೊಳಗಾದ ಬೈಕ್‌ ಸವಾರ. ಯುವಕನ ಮೇಲೆ ಹಲ್ಲೆಯನ್ನು ತಡೆಯಲೆತ್ನಿಸಲು ಬಂದ ಸಾರ್ವಜನಿಕರಿಗೂ ಹಲ್ಲೆಯಾಗಿದೆ ಎನ್ನಲಾಗಿದೆ.

ಬಿಜೆಪಿ | ಸಾಧನೆ To ಅಹಂಕಾರ To ಸರ್ವನಾಶ

ನಂತರ ಸಿಟ್ಟುಗೊಂಡ ಸಾರ್ವಜನಿಕರು ಮೂವರು ಯುವಕರಿಗೆ ಥಳಿಸಿದ್ದಾರೆ ಎಂಬ ಮಾಹಿತಿ ಇದೆ. ಕಾರಿನಲ್ಲಿದ್ದ ಸಕಲೇಶಪುರ ಮೂಲದ ಯುವಕರು ಎಂದು ವರದಿಯಾಗಿದೆ. ಗಲಾಟೆ ನಡೆದ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಬಂದಿದ್ದು, ಹೆಚ್ಚಿನ ಅನಾಹುತ ನಡೆಯದಂತೆ ತಡೆದಿದ್ದಾರೆ ಎನ್ನಲಾಗಿದೆ.

ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ನಡೆದ ಘಟನೆ ಸಿನಿಮಾ ಮಾದರಿಯಲ್ಲಿ ನಡೆದಿತ್ತು. ಸದ್ಯ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೆಟ್ಟಿಗರು ಇದನ್ನು ನೋಡಿ ತರಹೇವಾರಿ ಕಮೆಂಟ್‌ ಮಾಡಿದ್ದಾರೆ.

Leave A Reply