Uttara Kannada: ಉತ್ತರಕನ್ನಡದಲ್ಲಿ ಹೊಸ ರೋಗ ಪತ್ತೆ, ದಕ್ಷಿಣನ್ನಡದಲ್ಲೂ ಈ ರೋಗದ ಸಾಧ್ಯತೆ! ಆರೋಗ್ಯ ಇಲಾಖೆ ಹೈ ಅಲರ್ಟ್‌!!!

state news uttara kannada health department high alert given new disease detected in uttarakannada

Uttara Kannada : ಕಾರವಾರ: ಅನುವಂಶೀಯವಾಗಿ ಬರುವ ರೋಗವೊಂದು ಉತ್ತರಕನ್ನಡ ಜಿಲ್ಲೆಯ ಕೆಲ ಬುಡಕಟ್ಟು ಜನಾಂಗಗಳ ಜನರಲ್ಲಿ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಹೈ ಅಲರ್ಟ್‌ ಘೋಷಣೆ ಮಾಡಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಬುಡಕಟ್ಟು ಜನಾಂಗಗಳಲ್ಲಿ ಈ ರೋಗ ಪತ್ತೆಯಾಗಿದೆ.

ಸೂಕ್ಷ್ಮದರ್ಶಕದಲ್ಲಿ ಈ ರೋಗವಿರುವವರ ರಕ್ತದ ಕಣಗಳನ್ನು ಸೂಕ್ಷ್ಮ ದರ್ಶಕದಲ್ಲಿ ನೋಡಿದಾಗ ವೃತ್ತಾಕಾರವಾಗಿ ಕಾಣದೇ ಇರುವುದರಿಂದ, ಇವುಗಳು ಕುಡುಗೋಲಿನ ಆಕಾರದಲ್ಲಿ ಕಾಣುತ್ತದೆ. ಇವುಗಳನ್ನು ಕುಡಗೋಲು ಕಾಯಿಲೆ ಅಥವಾ ವೈದ್ಯಕೀಯ ಭಾಷೆಯ ಪ್ರಕಾರ ಸಿಕಲ್‌ ಸೆಲ್‌ ಅನಿಮಿಯಾ ಎಂದು ಕರೆಯಲಾಗುತ್ತದೆ.

ರಾಜ್ಯದ ಚಾಮರಾಜನಗರ, ದಕ್ಷಿಣ ಕನ್ನಡ ಸೇರಿ 7 ಜಿಲ್ಲೆಗಳಲ್ಲಿ ಈರುವ ಬುಡಕಟ್ಟು ಜನಾಂಗಗಳಲ್ಲಿ ಈ ರೋಗ ಲಕ್ಷಣ ಇರಬಹುದು ಎಂದು ಊಹಿಸಲಾಗಿದೆ.

ಮಗುವೊಂದು ಹುಟ್ಟಿದ ನಂತರ ಐದಾರು ತಿಂಗಳಲ್ಲೇ ಕಾಣಿಸಿಕೊಳ್ಳುವ ಈ ರೋಗದಲ್ಲಿ ರಕ್ತಹೀನತೆ, ಕೈಕಾಲುಗಳ ಊತ, ಅನಿಯಮಿತ ರಕ್ತಸ್ರಾವ, ಬ್ಯಾಕ್ಟೀರಿಯಾ ಸೋಂಕು ಕಾಣಿಸಿಕೊಳ್ಳಲಿದೆ. ಸಿಕಲ್‌ ಸೆಲ್‌ ಡಿಸೀಸ್‌ ಅತ್ಯಂತ ಗಂಭೀರ ಖಾಯಿಲೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Transfer Of Teachers: ‘ಪ್ರಾಥಮಿಕ ಶಾಲಾ ಶಿಕ್ಷಕʼ ಇಲ್ಲಿದೆ ಮಹತ್ವದ ಮಾಹಿತಿ!

Leave A Reply

Your email address will not be published.