Transport Employees Strike: ಮಹಿಳೆಯರೇ, ಈ ಒಂದು ದಿನ ನೀವು ಫ್ರೀ ಬಸ್ ನಲ್ಲಿ ಓಡಾಡೋ ಹಾಗಿಲ್ಲ – ಯಾಕೆ ಗೊತ್ತೇ ?

Karnataka news transport employees strike KSRTC protest demand bus service

Transport Employees Strike: ಮಹಿಳೆಯರೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಈ ಒಂದು ದಿನ ನೀವು ಫ್ರೀ ಬಸ್ ನಲ್ಲಿ ಓಡಾಡಲು ಸಾಧ್ಯವಿಲ್ಲ. ಯಾಕೆ ಗೊತ್ತೇ?

2020 ಜನವರಿ 1ರ ಬಳಿಕ ವೇತನವನ್ನು ಶೇಕಡ 15 ರಷ್ಟು ಏರಿಕೆ ಮಾಡಲಾಗಿದೆ. ಈ ಪರಿಷ್ಕೃತ ಹಿಂಬಾಕಿಯನ್ನು ಪಾವತಿ ಮಾಡಬೇಕಾಗಿದ್ದು, ಎಲೆಕ್ಟ್ರಿಕ್ ಬಸ್ ಗಳಿಗೆ ನಮ್ಮ ನೌಕರರೇ ಚಾಲಕರಾಗಬೇಕು. ಈ ಹಿಂದೆ ಪ್ರತಿಭಟನೆ(Transport Employees Strike) ನಡೆಸಿದ ಸಂದರ್ಭ ವಜಾ ಮಾಡಲಾದ ಎಲ್ಲಾ ನೌಕರರನ್ನು ವಾಪಸ್ ಕೆಲಸಕ್ಕೆ ಹಿಂತೆಗೆದುಕೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಹೀಗಾಗಿ, ನಾಲ್ಕು ನಿಗಮಗಳ ನೌಕರರು ಅಕ್ಟೋಬರ್ 5ರಂದು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಈ ಹಿನ್ನೆಲೆ ಅಕ್ಟೋಬರ್ 5 ರಂದು ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗುವ ಸಂಭವ ಹೆಚ್ಚಿದೆ.

ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ನೌಕರರು ವೇತನ ಹಿಂಬಾಕಿ ಒಳಗೊಂಡಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.ಕೆ.ಎಸ್.ಆರ್.ಟಿ.ಸಿ. ನಿಗಮಗಳ ಒಕ್ಕೂಟದ(CITU) ಅಧ್ಯಕ್ಷ ಹೆಚ್.ಡಿ.ರೇವಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Petrol Diesel Price: ಏರಿಕೆ ಕಂಡ ಕಚ್ಚಾ ತೈಲದ ಬೆಲೆ- ಪರಿಣಾಮ ಮಾತ್ರ ರೂಪಾಯಿ ಮೌಲ್ಯದ ಮೇಲೆ!

Leave A Reply

Your email address will not be published.