HSRP: ಹಳೇ ವಾಹನಗಳಿಗೂ ಬಂತು ಹೊಸ ಟಫ್ ರೂಲ್ಸ್ !! ಇದನ್ನು ಮಾಡ್ಲಿಲ್ಲ ಅಂದ್ರೆ ದಂಡ ಫಿಕ್ಸ್ !!

HSRP: ಅಪರಾಧ ಕೃತ್ಯಗಳಲ್ಲಿ ನಕಲಿ ನೋಂದಣಿ ಸಂಖ್ಯೆಯ ವಾಹನಗಳ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ದೇಶದಲ್ಲಿ ಏಕರೂಪ ನೋಂದಣಿ ಸಂಖ್ಯೆಯ ಬೋರ್ಡ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದು ಕೇವಲ ಹೊಸ ವಾಹನಗಳಿಗೆ ಮಾತ್ರಲವಲ್ಲದೆ ಹಳೆಯ ವಾಹನಗಳಿಗೂ ಅನ್ವಯಿಸಲಿದೆ. ಒಂದು ವೇಳೆ ಈ ರೂಲ್ಸ್ ಫಾಲೋ ಮಾಡದಿದ್ರೆ ದಂಡ ಬೀಳೋದು ಫಿಕ್ಸ್ ಆಗಿದೆ.

ಹೌದು, ಕರ್ನಾಟಕದ ಎಲ್ಲ ಹಳೆಯ ವಾಹನಗಳ ನಂಬರ್‌ಪ್ಲೇಟ್‌ ಬದಲಾಯಿಸಿ ಅತಿ ಸುರಕ್ಷಿತ ನೋಂದಣಿ ಫಲಕ(HSRP) ಅಳವಡಿಸಿಕೊಳ್ಳುವಂತೆ ರಾಷ್ಟ್ರೀಯ ರಸ್ತೆ ಸುರಕ್ಷತೆ ಸಮಿತಿ ಸದಸ್ಯ ಡಾ. ಕಮಲಜಿತ್‌ ಸೋಯಿ ತಿಳಿಸಿದ್ದು ನೋಂದಣಿ ಫಲಕಗಳಲ್ಲಿ (Number plate ) ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಸಾರಿಗೆ ಅವರು ತಿಳಿಸಿದ್ದಾರೆ.

ಅಂದಹಾಗೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಎಸ್‌ಆರ್‌ಪಿ(ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ಪ್ಲೇಟ್ಸ್‌) ಯೋಜನೆಯು ವಾಹನದ ಸುರಕ್ಷತೆ ಮತ್ತು ಭದ್ರತೆಯನ್ನು ನೀಡುವ ಮೂಲಕ ನೇರವಾಗಿ ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತದೆ. ಅಲ್ಲದೇ ವಾಹನ ಸಂಬಂಧಿತ ಅಪರಾಧ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. 2019 ಏಪ್ರಿಲ್‌ 1ಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳು ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಪ್ರಸ್ತುತ, ವಾಹನ ತಯಾರಕರು ಈ ಪ್ಲೇಟ್‌ಗಳನ್ನು ವಾಹನ ವಿತರಕರಿಗೆ ಪೂರೈಸಲು ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಹಳೆಯ ವಾಹನಗಳಿಗೂ ಸಹ ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರು ಪ್ಲೇಟ್‌ಗಳನ್ನು ಪೂರೈಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಪ್ಪಿದರೆ ಬೀಳುತ್ತೆ ಭಾರೀ ಮೊತ್ತದ ದಂಡ:
ಈಗಾಗಲೇ ದೇಶದ ದೆಹಲಿ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಸಿಕ್ಕಿಂ ಸೇರಿದಂತೆ 18 ರಾಜ್ಯಗಳು ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಈ ಹಿಂದೆಯೇ ಇದು ಕಡ್ಡಾಯವಾಗಿತ್ತು. ಆದರೆ, ಕರ್ನಾಟಕದ ಸಾರಿಗೆ ಇಲಾಖೆ 2023 ಆಗಸ್ಟ್‌ 18ರಂದು ಆದೇಶ ಹೊರಡಿಸಿದೆ. ಹೊಸ ನಂಬರ್‌ ಪ್ಲೇಟ್‌ ಅಳವಡಿಕೆಗೆ ನ.17ರವರೆಗೆ ಕಾಲಾವಕಾಶ ನೀಡಿದೆ. ತಪ್ಪಿದರೆ 500ರಿಂದ 1 ಸಾವಿರ ರು.ಗಳವರೆಗೆ ದಂಡ ವಿಧಿಸಬಹುದಾಗಿದೆ.

HSRP ನಂಬರ್‌ ಪ್ಲೇಟ್‌ ಮಾಡಿಸುವುದು ಎಲ್ಲಿ?
• ಹಳೆ ವಾಹನಗಳ ಮಾಲೀಕರು ವಾಹನಗಳ ಅಧಿಕೃತ ಡೀಲರ್‌ಗಳು ಅಥವಾ ಶೋ ರೂಂಗಳ ಮೂಲಕ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗೆ ಮುಂಗಡವಾಗಿ ಕೋರಿಕೆ ಸಲ್ಲಿಸಿ ಹಣ ಪಾವತಿಸಬೇಕಾಗುತ್ತದೆ.
• ನಾಲ್ಕು ಚಕ್ರಗಳ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಬೆಲೆಯು 400 ರಿಂದ 500 ರೂ.ವರೆಗೆ ಬೆಲೆ ಇರಲಿದೆ. ದ್ವಿಚಕ್ರ ವಾಹನಗಳಿಗೆ 250 ರಿಂದ 300 ರೂ. ಇರುತ್ತದೆ.
• ವಾಹನ ಉತ್ಪಾದಕ ಕಂಪೆನಿಗಳು ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳನ್ನು ಶೋ ರೂಂಗಳಿಗೆ ಪೂರೈಸಲು ಅಧಿಕೃತ HSRP ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಹಳೆ ವಾಹನಗಳಿಗೂ ಸಹ ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರು ಪ್ಲೇಟ್‌ಗಳನ್ನು ಪೂರೈಸುತ್ತಾರೆ.
• HSRP ತಯಾರಕರಿಂದ ಬಂದಿರುವ ನಂಬರ್‌ಪ್ಲೇಟ್‌ಗಳನ್ನು ಶೋರೂಂಗಳಲ್ಲಿ ಅಳವಡಿಸಲಾಗುತ್ತದೆ.
• ಇದು ಹೈಸೆಕ್ಯುರಿಟಿ ನಂಬರ್‌ ಪ್ಲೇಟ್‌ ಆಗಿರುವುದರಿಂದ ಶೋರೂಂ ಸಿಬ್ಬಂದಿ ಅಥವಾ ವಾಹನ ತಯಾರಕ ಕಂಪೆನಿಯವರು ವಾಹನ್‌ ಪೋರ್ಟಲ್‌ನಲ್ಲಿ ಲೇಸರ್‌ ಕೋಡಿಂಗ್‌ ನವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
• ನೋಂದಣಿ ಪ್ರಮಾಣಪತ್ರ ಮತ್ತು ಕಾರ್ಯಕ್ಷಮತೆ ಪ್ರಮಾಣಪತ್ರ (ಎಫ್‌.ಸಿ.) ಹೊಂದಿರದ ವಾಹನಗಳು ಹಾಗೂ ಮಿತಿ ಮೀರಿದ ರಸ್ತೆ ತೆರಿಗೆ ಹೊಂದಿರುವ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲಾಗದು.

Leave A Reply

Your email address will not be published.