Free laptop: ನೀವು ಉಚಿತ ಲ್ಯಾಪ್ ಟಾಪ್ ನಿರೀಕ್ಷೆಯಲ್ಲಿದ್ದೀರಾ? ಹಾಗಿದ್ರೆ ಹೀಗೆ ಅರ್ಜಿ ಸಲ್ಲಿಸಿ !

Free Laptop: ಇಂದಿನ ದಿನದಲ್ಲಿ ಮೊಬೈಲ್ (mobile) ಎಷ್ಟು ಮುಖ್ಯವೋ ಅಷ್ಟೇ ಲ್ಯಾಪ್ಟಾಪ್ ಕೂಡ ಮುಖ್ಯವಾಗಿದೆ. ವಿದ್ಯಾರ್ಥಿಗಳಿಗಂತೂ (students) ಲ್ಯಾಪ್ಟಾಪ್ ಬಹಳ ಉಪಯುಕ್ತವಾಗಿದೆ. ಕಂಪನಿ ಕೆಲಸದಲ್ಲಿರುವವರಿಗೆ ಕೂಡ ಲ್ಯಾಪ್ಟಾಪ್ (Free Laptop) ಅತ್ಯಗತ್ಯವಾಗಿದೆ. ನಿಮಗೂ ಲ್ಯಾಪ್ಟಾಪ್ ಬೇಕಿದ್ದರೆ, ನೀವು ಕೂಡ ಲ್ಯಾಪ್ಟಾಪ್ ಖರೀದಿಯ ನಿರೀಕ್ಷೆಯಲ್ಲಿದ್ದರೆ ಇಲ್ಲಿದೆ ನಿಮಗೆ ಭರ್ಜರಿ ಸುದ್ದಿ. ಈ ರೀತಿ ಅರ್ಜಿ ಸಲ್ಲಿಸಿ ಲ್ಯಾಪ್ಟಾಪ್ ಪಡೆಯಿರಿ !!.

ನೀವು ಈಗಾಗಲೇ 12 ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಉತ್ತೀರ್ಣರಾಗಿದ್ದರೆ, ಕರ್ನಾಟಕ ಉಚಿತ ಲ್ಯಾಪ್‌ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಆರ್ಥಿಕ ಪರಿಸ್ಥಿತಿಯಿಂದ ಲ್ಯಾಪ್ಟಾಪ್ ಖರೀದಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡುವ ಉದ್ದೇಶವೂ ಹೌದು. 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಈ ಮೂಲಕ ಮಾಡಲಾಗುತ್ತದೆ.

ಕರ್ನಾಟಕ ಉಚಿತ ಲ್ಯಾಪ್‌ಟಾಪ್ ಯೋಜನೆಯ ಫೀಚರ್
ಯೋಜನೆಯಡಿಯಲ್ಲಿ, ಎಸ್‌ಟಿ ಮತ್ತು ಎಸ್‌ಸಿ ವರ್ಗಗಳಿಗೆ ಸೇರಿದ 1.50 ಲಕ್ಷಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಸುಮಾರು 32,000 ರೂಪಾಯಿಯಿಂದ 35,000 ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್ ನೀಡಲಾಗುವುದು.

ಯಾವೆಲ್ಲ ಕೋರ್ಸ್‌ಗಳು ಅನ್ವಯ?
ವೈದ್ಯಕೀಯ ಅಧ್ಯಯನಗಳು, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳು, ಸ್ನಾತಕೋತ್ತರ ಕೋರ್ಸ್‌ಗಳು, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಓದುತ್ತಿರುವವರು.

ಉಚಿತ ಲ್ಯಾಪ್‌ಟಾಪ್ ಯೋಜನೆ ಅರ್ಹತಾ ಮಾನದಂಡಗಳು:-

• ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
• ಅರ್ಜಿದಾರರು ಯಾವುದೇ ವರ್ಗ ಅಥವಾ ಯಾವುದೇ ಹಿಂದುಳಿದ ವರ್ಗದವರಾಗಿರಬಹುದು.
• ವಿದ್ಯಾರ್ಥಿಯು 12 ನೇ ತರಗತಿ ಅಥವಾ ದ್ವಿತೀಯ ಪಿಯುಸಿಯನ್ನು ಉತ್ತಮ ಶ್ರೇಣಿಗಳೊಂದಿಗೆ ಉತ್ತೀರ್ಣರಾಗಿರಬೇಕು.

ಬೇಕಾಗುವ ದಾಖಲೆಗಳು:-

• ಕರ್ನಾಟಕದ ನಿವಾಸ ಪ್ರಮಾಣಪತ್ರ
• ಗುರುತಿನ ಚೀಟಿಗಾಗಿ ಆಧಾರ್ ಕಾರ್ಡ್
• ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆ ಮಾಹಿತಿ
• ಜಾತಿ ಪ್ರಮಾಣ ಪತ್ರ
• ಆದಾಯ ಪ್ರಮಾಣಪತ್ರ
• ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
• ಶೈಕ್ಷಣಿಕ ಪ್ರಮಾಣಪತ್ರ

ಅರ್ಜಿ ಸಲ್ಲಿಕೆ:-

ಉಚಿತ ಲ್ಯಾಪ್‌ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ dce.karnataka.gov.in ಗೆ ಭೇಟಿ ನೀಡಿ.
ಕಾರ್ಮಿಕ ಅಧಿಕಾರಿ -1, ಉಪ ವಿಭಾಗ ಬೆಂಗಳೂರು ಇವರ ಕಾರ್ಯವ್ಯಾಪ್ತಿಯಲ್ಲಿ ನೋಂದಣಿ ಅಗಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಲು ಅರ್ಜಿ ನಮೂನೆಯನ್ನು ಆಯಾ ವೃತ್ತ ಕಛೇರಿ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಪಡೆದು ಅಗತ್ಯ ದಾಖಲಾತಿ ಜೊತೆಗೆ, ಅರ್ಜಿ ಸ್ವೀಕರಿಸಿದ ಕಚೇರಿಗೆ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26 ಕೊನೆಯ ದಿನ ಎಂದು ತಿಳಿಸಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ವಿಳಾಸಕ್ಕೆ ಭೇಟಿ ನೀಡಿ.
ವಿಳಾಸ:
ಕಾರ್ಮಿಕ ಅಧಿಕಾರಿ ಕಚೇರಿ
ಉಪ ವಿಭಾಗ-1, ಬೆಂಗಳೂರು.
ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಕಟ್ಟಡ
ಮೊದಲ ಮಹಡಿ
ಮಂಜುನಾಥ ನಗರ ಬಾಗಲಗುಂಟೆ ಬೆಂಗಳೂರು -73

ದೂರವಾಣಿ ಸಂಖ್ಯೆ: 9845587605, 8105084941

Leave A Reply