Sullia: ವಿದೇಶದಿಂದಲೇ ತ್ರಿವಳಿ ತಲಾಖ್!! ಪತಿಯ ವಾಟ್ಸಪ್ ಸಂದೇಶದಿಂದ ಬೆಚ್ಚಿದ ಸುಳ್ಯದ ಗರ್ಭಿಣಿ ಮಹಿಳೆ ಏನಿದು ಪ್ರಕರಣ
ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿದ್ದರೂ ಇಲ್ಲೊಬ್ಬ ಪತಿರಾಯ ವಿದೇಶದಲ್ಲಿ ಕುಳಿತು ಪತ್ನಿಗೆ ತ್ರಿವಳಿ ತಲಾಖ್ ಸಂದೇಶ ರವಾನಿಸಿದ ಘಟನೆಯೊಂದು ವರದಿಯಾಗಿದ್ದು, ವಾಟ್ಸಪ್ ಸಂದೇಶದಿಂದ ಗಾಬರಿಗೊಂಡ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾಳೆ.
ಏನಿದು ಪ್ರಕರಣ?
ಕಳೆದ ಕೆಲ ವರ್ಷಗಳ ಹಿಂದೆ ಸುಳ್ಯದ ಜಯನಗರ ನಿವಾಸಿ ನಿಸ್ರಿಯಾ ಎಂಬಾಕೆಯ ವಿವಾಹ ಕೇರಳ ರಾಜ್ಯದ ತ್ರಿಶೂರ್ ಮೂಲದ ಮೊಹಮ್ಮದ್ ರಾಶಿದ್ ಎಂಬಾತಾನೊಂದಿಗೆ ನಡೆದಿತ್ತು.ದಂಪತಿಗೆ ಒಂದು ಮಗುವಿದ್ದು, ಎರಡನೇ ಬಾರಿ ಗರ್ಭಿಣಿಯಾದಾಗ ಪತಿ ರಾಶೀದ್ ಪತ್ನಿಯ ಹೆರಿಗೆಗಾಗಿ ಮಹಿಳೆಯ ತಾಯಿ ಮನೆಗೆ ಬಿಟ್ಟು ವಿದೇಶಕ್ಕೆ ತೆರಳಿದ್ದ.
ಆ ಬಳಿಕ ಅನ್ಯೋನ್ಯವಾಗಿದ್ದ ಆತ ಇದ್ದಕ್ಕಿದ್ದಂತೆ ಕಳೆದ ಒಂದೆರಡು ದಿನಗಳಿಂದ ತಲಾಖ್ ವಿಚಾರ ಎತ್ತಿದ್ದು, ವಾಟ್ಸಪ್ ನಲ್ಲಿ ಮೂರು ಬಾರಿ ತಲಾಖ್ ಎಂದು ಸಂದೇಶ ರವಾನಿಸಿದ್ದ ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ಮಹಿಳೆ ಸುಳ್ಯ ಠಾಣೆಗೆ ದೂರು ನೀಡಿದ್ದು, ಸದ್ಯ ಠಾಣೆಯಲ್ಲಿ ಮುಸ್ಲಿಂ ಪ್ರೊಟೆಕ್ಷನ್ ಆಫ್ ರೈಟ್ ಆಕ್ಟ್ 2019 ರಂತೆ ದೂರು ದಾಖಲಾಗಿದೆ.