Arabic College: ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಗ್ರ ತರಬೇತಿ- ದೇಶದ ಈ ಭಾಗಗಳಲ್ಲಿ ನಡೆಯುತ್ತಿದೆ NIA ಶೋದ

Tamilnadu news Arabic College Fierce training for students in colleges nia conducts searches

NIA : ಅರೇಬಿಕ್‌ ಕಾಲೇಜಲ್ಲಿ ಉಗ್ರ ತರಬೇತಿಯ ಶಂಕೆಯ ಹಿನ್ನೆಲೆ ದೇಶದ 30 ಸ್ಥಳಗಳಲ್ಲಿ ಎನ್‌ಐಎ ರೇಡ್‌ ಮಾಡಲಾಗಿದ್ದು, ಡಿಎಂಕೆ ಕೌನ್ಸಿಲರ್‌ ಮನೆ ಮೇಲೆ ಕೂಡ ಶೋಧ ಕಾರ್ಯ ಮಾಡಲಾಗಿದೆ. ಎನ್‌ಐಎ(NIA)ತಮಿಳುನಾಡಿನ (Tamilnadu)ಹಲವೆಡೆ ಮತ್ತು ತೆಲಂಗಾಣ (Telangana)ಸೇರಿದಂತೆ ಸುಮಾರು 30 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ ಎಂದು ವರದಿಯಾಗಿದೆ.

ಹೈದರಾಬಾದ್‌ನ ನಾಲ್ಕು ಸ್ಥಳಗಳಲ್ಲಿ ಜೊತೆಗೆ ತಮಿಳುನಾಡಿನ ಕೊಯಮತ್ತೂರಿನ 22 ಸ್ಥಳಗಳನ್ನು ಒಳಗೊಂಡಂತೆ ಚೆನ್ನೈನ ಮೂರು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಶನಿವಾರ ಬೆಳಗ್ಗೆ ಶೋಧ ಕಾರ್ಯ ಆರಂಭಿಸಿದೆ. ಐಸಿಸ್ ಮಾಡ್ಯೂಲ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಕೊಯಮತ್ತೂರಿನ ಉಕ್ಕಡಮ್‌ನಲ್ಲಿರುವ ಈಶ್ವರನ್ ಕೋವಿಲ್ ಸ್ಟ್ರೀಟ್‌ನಲ್ಲಿರುವ ಕೊಟ್ಟೈ ಸಂಗಮೇಶ್ವರರ್ ದೇವಸ್ಥಾನದ ಮುಂಭಾಗದಲ್ಲಿ 2022 ರ ಅಕ್ಟೋಬರ್ 23 ರಂದು ಸ್ಫೋಟ ಸಂಭವಿಸಿತ್ತು. ಈ ಸಂದರ್ಭ ಸುಧಾರಿತ ಸ್ಫೋಟಕ ಸಾಧನದೊಂದಿಗೆ ಕಾರನ್ನು ಓಡಿಸಿದ ಐಸಿಸ್ ಅನುಯಾಯಿ ಜಮೇಶಾ ಮುಬೀನ್ ಸಾವನ್ನಪ್ಪಿದ್ದ. ತನಿಖೆ ನಡೆಸುತ್ತಿದ್ದ ಸಂದರ್ಭ ಅವನು ಕೊಯಮತ್ತೂರಿನ ಕುನಿಯಮುತ್ತೂರಿನಲ್ಲಿ ಕೋವೈ ಅರೇಬಿಕ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.

ಕೆಲ ವರ್ಷಗಳ ಹಿಂದೆ ಕಾಲೇಜಿನಲ್ಲಿ ಮುಬೀನ್ ಜೊತೆ 25ಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಇದರ ನಡುವೆ, ಚೆನ್ನೈನ ಎನ್‌ಐಎ ಅಧಿಕಾರಿಗಳು ಕೊಯಮತ್ತೂರಿನ ಅರೇಬಿಕ್ ಕಾಲೇಜಿನಲ್ಲಿ ಕಳೆದ ತಿಂಗಳು ಶೋಧ ಕಾರ್ಯ ನಡೆಸಿದ್ದರು ಎಂದು ತಿಳಿದುಬಂದಿದೆ. ತಮಿಳುನಾಡು ಐಸಿಸ್ ಮಾಡ್ಯೂಲ್ ಮತ್ತು ಅದರ ನೇಮಕಾತಿ ಮತ್ತು ಆಮೂಲಾಗ್ರೀಕರಣ ಒಳಗೊಂಡಂತೆ ಸಂಸ್ಥೆಯು ದಾಖಲೆಗಳನ್ನು ಸಂಗ್ರಹ ಮಾಡಿದ್ದು, ಹೊಸ ಎಫ್‌ಐಆರ್ ಅನ್ನು ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೊಯಮತ್ತೂರು ನಗರದ ಕರುಂಬುಕ್ಕಡೈ, ಜಿಎಂ ನಗರ, ಕಿನಾತುಕಡವು, ಕವುಂಡಂಪಾಳ್ಯಂ, ಉಕ್ಕಡಂ ಮತ್ತು ಇನ್ನೂ ಕೆಲವು ಪ್ರದೇಶಗಳು ಸೇರಿ 22 ಸ್ಥಳಗಳಲ್ಲಿ ಎಫ್‌ಐಆರ್ ಆದ ನಂತರ, ಎನ್‌ಐಎ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಶೋಧ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ತಮಿಳುನಾಡು ರಾಜಧಾನಿ ಚೆನ್ನೈನ ನೀಲಂಕಾರೈ, ಅಯನವರಂ ಮತ್ತು ತಿರುವಿ ಕಾ ನಗರ್‌ನಲ್ಲಿ ಕೂಡ ಶೋಧ ನಡೆಸಿದ್ದಾರೆ. ಇದರ ಜೊತೆಗೆ ಕೊಯಮತ್ತೂರು ನಗರದ ಪೆರುಮಾಳ್ ಕೋವಿಲ್ ಸ್ಟ್ರೀಟ್‌ನಲ್ಲಿರುವ ಕೊಯಮತ್ತೂರು ಕಾರ್ಪೊರೇಷನ್ 82ನೇ ವಾರ್ಡ್ನ ಡಿಎಂಕೆ ಕೌನ್ಸಿಲರ್ ಎಂ. ಮುಬಸೀರಾ ನಿವಾಸದಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಶೋಧ ನಡೆಸುತ್ತಿದೆ ಎನ್ನಲಾಗಿದೆ. ಈ ಕೌನ್ಸಿಲರ್‌ನ ಪತಿ ಕೂಡ ಅರೇಬಿಕ್ ಕಾಲೇಜಿನಲ್ಲಿ ಓದುತ್ತಿದ್ದರೆನ್ನಲಾಗಿದೆ.

ಇದನ್ನೂ ಓದಿ: CM Siddaramaiah: ಸುಳ್ಳು ಸುದ್ದಿ ಹರಡೋರಿಗೆ, ದ್ವೇಷದ ಭಾಷಣ ಮಾಡೋರಿಗೆ ಬಂತು ಹೊಸ ಕಾನೂನು !! CM ಸಿದ್ದರಾಮಯ್ಯನಿಂದ ಖಡಕ್ ಎಚ್ಚರಿಕೆ

Leave A Reply

Your email address will not be published.