ಮಲ್ಪೆಯಲ್ಲಿ ಅಬ್ಬರಿಸಿದ ಸೌಜನ್ಯ ಹೋರಾಟ: ಆಪಪ್ರಚಾರ ತೀವ್ರವಾದಂತೆ ತಿಮರೋಡಿ ಬೆಂಬಲಕ್ಕೆ ಧಾವಿಸಿದ ಜನ ಸಾಗರ !

Dharmastala Sowjanya murder case protest at malpe Dakshina Kannada

ಮಲ್ಪೆ: ನಿನ್ನೆ ಕಡಲ ತಡಿಯಲ್ಲಿ ಮತ್ತೆ ಘರ್ಜನೆ ಅಬ್ಬರಿಸಿದೆ. ಸಂಜೆ ಶುರುವಾದ ಸೌಜನ್ಯ ಹೋರಾಟ ಕತ್ತಲಾದರೂ ಕರಗಲಿಲ್ಲ. ಜನರು ಯಾವುದಕ್ಕೂ ಮಿಸುಕದೆ ಕುಳಿತಲ್ಲೇ ಕುಳಿತು ಭಾಷಣ ಕೇಳಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಮಲ್ಪೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಹರಿದು ಬಂದಿದ್ದು ಮಹೇಶ್ ಶೆಟ್ಟಿ ತಿಮರೋಡಿ ಅವರ ಏಕಮುಖದ ಹೋರಾಟಕ್ಕೆ ಭಾರಿ ಜನಬೆಂಬಲ ವ್ಯಕ್ತವಾಗಿದೆ. ಇತ್ತೀಚೆಗೆ, ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಹೋರಾಟಗಾರರನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರೂ, ಮಹೇಶ್ ಶೆಟ್ಟಿ ಅವರ ಜನಪ್ರಿಯತೆ ಮತ್ತು ಹೋರಾಟದ ತೀವ್ರತೆ ಮತ್ತಷ್ಟು ಅಧಿಕವಾಗಿರುವುದು ಭಾರೀ ಅಚ್ಚರಿ ಮೂಡಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ, ಎಲ್ಲಾ ಸಮುದಾಯದ ಜನರು ಚಳವಳಿಯ ರೂಪದಲ್ಲಿ ಸೇರಿಕೊಂಡು ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಏನಂದ್ರು ಮಹೇಶ್ ಶೆಟ್ಟಿ ತಿಮರೋಡಿ:
ಸೌಜನ್ಯ ಪ್ರಕರಣದಲ್ಲಿ ನಿರಂತರ ಹೋರಾಟ ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ನ್ಯಾಯ ಸಿಗದಿದ್ದರೆ ಮುಂದೆ ಈ ದೇಶದಲ್ಲಿ ಯಾವುದೇ ಪ್ರಕರಣದಲ್ಲಿಯೂ ನ್ಯಾಯ ಸಿಗಲು ಸಾಧ್ಯವಿಲ್ಲ. ಆದುದರಿಂದ ನ್ಯಾಯ ಸಿಗುವವರೆಗೆ ಹೋರಾಟ ವನ್ನು ತೀವ್ರಗೊಳಿಸಬೇಕು. ಆ ಮೂಲಕ ಅತ್ಯಾಚಾರ ಮಾಡಿದವರಿಗೆ ಹಾಗೂ ಅವರನ್ನು ರಕ್ಷಿಸಿದವರಿಗೆ ಜೈಲು ಶಿಕ್ಷೆಯಾಗಬೇಕು ಎಂದು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಒತ್ತಾಯಿಸಿದ್ದಾರೆ.

ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮಲ್ಪೆ ಸೀವಾಕ್ ನಲ್ಲಿ ಶುಕ್ರವಾರ ಆಯೋಜಿಸಲಾದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಈ ಹೋರಾಟವನ್ನು ನಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಸೌಜನ್ಯಳಂತಹ ಹೆಣ್ಣು ಮಗಳಿಗೆ ನ್ಯಾಯ ಸಿಗುವ ಉದ್ದೇಶದಿಂದ ಮಾಡುತ್ತಿದ್ದೇವೆ. ಧರ್ಮ ಸತ್ಯದ ನೆಲದಲ್ಲಿ ಇಂದು ಅನ್ಯಾಯ ನಡೆಯುತ್ತಿದೆ. ಅಧರ್ಮ ತಾಂಡವಾಡುತ್ತಿದೆ. ಅದನ್ನು ಕಾಪಾ ಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆ ಮೂಲಕ ಅಧರ್ಮ ಅಳಿಯಬೇಕು ಮತ್ತು ಧರ್ಮ ಉಳಿಯಬೇಕು ಎಂದರು.

ಕೇವಲ ರಾಮ ಮಂದಿರ ನಿರ್ಮಾಣವಾದರೆ ಮಾತ್ರ ಈ ದೇಶ ಉಳಿಯಲು ಸಾಧ್ಯವಿಲ್ಲ. ಇಂತಹ ನ್ಯಾಯ, ಧರ್ಮ ಪೀಠಗಳು ಉಳಿದರೆ ಮಾತ್ರ ಭಾರತ ಉಳಿಯುತ್ತದೆ. ಅದಕ್ಕಾಗಿ ಸೌಜನ್ಯ ಪ್ರಕರಣದಲ್ಲಿ ನಾವೆಲ್ಲರು ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದು ಅವರು ತಿಳಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ಹೋರಾಟಗಾರ ತಮ್ಮಣ್ಣ ಶೆಟ್ಟಿ, ಸೌಜನ್ಯಳ ತಾಯಿ ಕುಸುಮಾವತಿ ಮಾತನಾಡಿದರು. ರಾಮಾಂಜಿ ನಮ್ಮ ಭೂಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.