BJP: ಕೇಂದ್ರಸಚಿವರನ್ನೇ ಕೂಡಿಹಾಕಿದ ಬಿಜೆಪಿ ಕಾರ್ಯಕರ್ತರು !! ಕಾರಣ ಕೇಳಿದ್ರೆ ಶಾಕ್

Political news union minister Subhash Sarkar locked up in party office by Bengal BJP workers

Subhash sarkar: ಕೇಂದ್ರ ಸಚಿವ ಸುಭಾಸ್ ಸರ್ಕಾರ್(Subhash sarkar) ಅವರನ್ನು ಸ್ವತಃ ಬಿಜೆಪಿ(BJP) ಕಾರ್ಯಕರ್ತರೇ ತಮ್ಮ ಪಕ್ಷದ ಕಚೇರಿಯಲ್ಲಿ ಕೂಡಿ ಹಾಕಿರುವ ಘಟನೆ ಪಶ್ವಿಮ ಬಂಗಾಳದ(west bengal) ಬಂಕುಡಾದಲ್ಲಿ ನಡೆದಿದೆ.

ಹೌದು, ಒಂದು ಪಕ್ಷ ಬೆಳೆಯಲು, ಅದರಲ್ಲಿನ ನಾಯಕರು ಬೆಳೆಯಲು, ಚುನಾವಣೆಯಲ್ಲಿ ನಿಂತು, ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಮುಖ ಕಾರಣ ಪಕ್ಷದ ಕಾರ್ಯಕರ್ತರು. ಕಾರ್ಯಕರ್ತರಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಇಂತಹ ಕಾರ್ಯಕರ್ತರನ್ನೇ ಕಡೆಗಣಿಸಿದರೆ ಹೇಗೆ? ಇಂತಹ ಸಮಯದಲ್ಲಿ ಕಾರ್ಯಕರ್ತರು ತಿರುಗಿನಿಂತರೆ ಏನೂ ಮಾಡಲಾಗದು. ಅಂತದೇ ಪರಸ್ಥಿತಿ ಸದ್ಯ ಪಶ್ಚಿಮ ಬಂಗಾಳದ ಬಂಕುಡಾದಲ್ಲಿ ನಡೆದಿದ್ದು, ತಮ್ಮಮನ್ನು ಕಡೆಗಣಿಸಿದ್ದಕ್ಕಾಗಿ ಸ್ವತಃ ಕಾರ್ಯಕರ್ತರೇ ಕೇಂದ್ರ ಸಚಿವ ಸುಭಾಸ್ ಸರ್ಕಾರ್ ಅವರನ್ನು ತಮ್ಮ ಬಿಜೆಪಿ ಕಛೇರಿಯಲ್ಲಿ ಕೂಡಿಹಾಕಿದ್ದಾರೆ.

ಅಂದಹಾಗೆ ಬಂಕುಡಾ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಸುಭಾಸ್, ಸದ್ಯ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವರಾಗಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಕಚೇರಿಯಲ್ಲಿ ಇಂದು ಮಧ್ಯಾಹ್ನ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸರ್ಕಾರ್‌ ಅಧ್ಯಕ್ಷತೆ ವಹಿಸಿದ್ದರು. ಈ ಈ ವೇಳೆ ಪಕ್ಷದ ನಾಯಕರ ವಿರುದ್ಧ ಘೊಷಣೆಗಳನ್ನು ಕೂಗುತ್ತಾ ಬಮದ ಕಾರ್ಯಕರ್ತರು ಕೇಂದ್ರ ಸಚಿವರು ಸೇರಿದಂತೆ ಅನೇಕರನ್ನು ಕಚೇರಿಯೊಳಗೆ ಕೂಡಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಇನು ಈ ಕುರಿತು ಪ್ರತಿಕ್ರಿಯಿಸಿದ ಕಾರ್ಯಕರ್ತ ಮೋಹಿತ್​ ಕೇಂದ್ರ ಸಚಿವ ಸರ್ಕಾರ್​ ಕಾರ್ಯಕರ್ತರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ. ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರಿಗೆ ಜಿಲ್ಲಾ ಘಟಕದಲ್ಲಿ ಸ್ಥಾನಮಾನ ನೀಡಲಾಗುತ್ತಿದೆ. ನಾವು ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ಕಳೆದ ನಪುರಸಭೆ ಚುನಾವಣೆಯಲ್ಲಿ ಬಂಕುರಾದಲ್ಲಿ ನಾವು ಎರಡು ಸ್ಥಾನ ಗೆದ್ದಿದ್ದೆವು. ಆದರೆ, ಈ ಬಾರಿ ಸಂಸದರ ಅದಕ್ಷೆತಯಿಂದಾಗಿ ನಾವು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಹಲವು ಪಂಚಾಯಿತಿ ಚುನಾವನೆಯಲ್ಲೂ ನಾವು ನಿರೀಕ್ಷತಿ ಮಟ್ಟದಲ್ಲಿ ಸಾಧನೆ ಮಾಡಿಲ್ಲ. ಇದು ಅವಮಾನಕರ ಸಂಗತಿಯಾಗಿದೆ. ಇದನ್ನು ಪ್ರಶ್ನಿಸಿದವರಿಗೆ ವಿವರಣೆ ನೀಡುವಂತೆ ಶೋಕಾಸ್​ ನೋಟಿಸ್​ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಘಟಕದ ಅಧ್ಯಕ್ಷ ಸಮೀಕ್​ ಭಟ್ಟಾಚಾರ್ಯ ಇದೂಂದು ದುರದೃಷ್ಟಕರ ಘಟನೆಯಾಗಿದ್ದು, ಈ ರೀತಿ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಸಮಸ್ಯೆಗಳಿದ್ದರೆ ಅದನ್ನು ಸರಿಯಾದ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕು. ಪಕ್ಷ ಸಂಘಟನೆಗೂ ಸರ್ಕಾರ್​ ಅವರಿಗೂ ಯಾವುದೇ ಸಂಬಂಧವಿಲ್ಲ. ಕೆಲವರ ತಪ್ಪು ಗ್ರಹಿಕೆ ಅಥವಾ ಪ್ರಚೋದನೆಯಿಂದಾಗಿ ಅವರ ಮೇಲೆ ಆರೋಪ ಮಾಡಲಾಗಿದೆ. ಘಟನೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ

ಅಲ್ಲದೆ ಈ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಬಂದ ಮತ್ತೊಂದು ಬಣದ ಕಾರ್ಯಕರ್ತರು ಕಚೇರಿ ಬಾಗಿಲು ತೆರೆಯುವಂತೆ ಹೇಳಿದರು. ಈ ವೇಳೆ ಎರಡೂ ಗುಂಪುಗಳ ನಡುವೆ ಗಲಾಟೆಯಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಚಿವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು. ಈ ವಿಡಿಯೋ ಶೇರ್‌ ಮಾಡಿಕೊಂಡಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಘರ್ಷಣೆ ಹೆಚ್ಚಾಗುತ್ತಿದ್ದು, ಕೆಲವರಿಗೆ ಅನಗತ್ಯವಾಗಿ ಆದ್ಯತೆ ನೀಡುತ್ತಿರುವುದು ಇದಕ್ಕೆ ಕಾರಣʼ ಎಂದು ಟ್ವೀಟ್‌ ಮಾಡಿದೆ.

ಇದನ್ನೂ ಓದಿ: B K Hariprsad: ಸಿ ಎಂ ಸಿದ್ದರಾಮಯ್ಯರನ್ನು ಟೀಕಿಸುತ್ತಿರೋ ಬಿ. ಕೆ ಹರಿಪ್ರಸಾದ್’ಗೆ ಕಾಂಗ್ರೆಸ್ ನಿಂದ ಬಿಗ್ ಶಾಕ್ !!

Leave A Reply

Your email address will not be published.