Sowjanya case -BJP leaders: ಸೌಜನ್ಯ ಪ್ರಕರಣದಲ್ಲಿ ರಾತ್ರೋ ರಾತ್ರಿ ಕಳಚಿತು BJP ಹಿಂದೂ ನಾಯಕರ ಮುಖವಾಡ ! ನಿನ್ನೆ ಸೌಜನ್ಯಳ ಮನೆ ಹೊಕ್ಕ ಆ ಭೂಪರು ಮಾಡಿದ್ದೇನು ?- Part-1

Dharmastala Sowjanya rape and murder case Bjp Hindu leaders in Sowjanya house

Sowjanya case -BJP leaders : ಸೌಜನ್ಯ ಪ್ರಕರಣದಲ್ಲಿ ಮತ್ತೊಂದು ಬಾರಿ ಬಿಜೆಪಿ, ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನ ಕೆಲವು ಸ್ಥಳೀಯ ನಾಯಕರುಗಳು(Sowjanya case -BJP leaders) ನಡು ಬೀದಿಯಲ್ಲಿ ಬೆತ್ತಲಾಗಿದ್ದಾರೆ. ಇನ್ಮುಂದೆ ಅವರು ಯಾವ ಮುಖ ಇಟ್ಟುಕೊಂಡು ತಮ್ಮ ನಿಯತ್ತಿನ ಮತ್ತು ಅಮಾಯಕ ಹಿಂದೂ ಕಾರ್ಯಕರ್ತರನ್ನು ಎದುರಿಸುತ್ತಾರೋ, ಮಂಜುನಾಥನೇ ಬಲ್ಲ. ಅಷ್ಟರ ಮಟ್ಟಿಗೆ ಈ ನಾಯಕರ ಮಾನ ಕಳೆದುಹೋಗಿದೆ. ಅಂಥದ್ದು ಏನಾಯಿತು ಎಂದು ನೀವು ಕೇಳಬಹುದು, ಇದರ ಬಗ್ಗೆ ಸವಿಸ್ತಾರ ವರದಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

ನಿನ್ನೆ ಸಂಜೆ ಸೌಜನ್ಯಳ ಮನೆಗೆ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕೆಲವು ಮುಖಂಡರುಗಳು ತಮ್ಮ ಕೆಲ ಪಟಾಲಂ ಜತೆ ತರಾತುರಿಯಲ್ಲಿ ಬಂದಿದ್ದರು. ಅವರಲ್ಲಿ ಬಜರಂಗದಳ ವಿಶ್ವ ಹಿಂದು ಪರಿಷತ್ ಪ್ರಮುಖ ಶರಣ್ ಪಂಪ್ ವೆಲ್, ಮುರಳಿಕೃಷ್ಣ ಹಸಂತಡ್ಕ ನವೀನ್ ಕುಮಾರ್ ನೆರಿಯ ಮತ್ತಿತರರು ಇದ್ದರು. ಮತ್ತೆ ಜತೆಯಲ್ಲಿ ಇದ್ದವರು ಕೆಲವರು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಅವರ ಚೇಲಾಗಳು.
”ನೋಡಿ, ಅರ್ಜೆಂಟ್ ಆಗಿ ನೀವು ಮರು ಮನವಿ ಸಲ್ಲಿಸಬೇಕು. ಇನ್ನು ಕೇವಲ ನಾಲ್ಕೇ ದಿನ ಇರೋದು, ಅಷ್ಟರೊಳಗೆ ಮೇಲ್ಮನವಿ ಹಾಕದೆ ಹೋದರೆ ಮುಂದೆ ಹಾಕಲಿಕ್ಕೆ ಆಗುವುದಿಲ್ಲ. ನಾವು ಈಗಾಗಲೇ ಒಂದು ಬಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದೇವೆ. ಆದರೆ ಮೂಲ ದೂರುದಾರರು ಅಥವಾ ಸೌಜನ್ಯಳ ಕುಟುಂಬ ಮಾತ್ರ ಮೇಲ್ಮನವಿ ಸಲ್ಲಿಸಬಹುದು ಎಂದು ಕೋರ್ಟ್ ಹೇಳಿದೆ. ಬೇರೆಯವರಿಗೆ ಅಪೀಲು ಹಾಕಲು ಅವಕಾಶ ಇಲ್ಲ ಎಂದಿದೆ ಕೋರ್ಟು. ಹಾಗಾಗಿ ನೀವು ತಕ್ಷಣ ಮೇಲ್ಮನವಿ ಸಲ್ಲಿಸಿ. ಅದಕ್ಕೆ ಬೇಕಾದ ಎಲ್ಲಾ ಕಾನೂನು ನೆರವನ್ನು ನಾವು ನೀಡುತ್ತೇವೆ.” ಎಂದು ವಿಹಿಪ, ಭಜರಂಗದಳ ಮತ್ತು ಬಿಜೆಪಿ ಮುಖಂಡರುಗಳು ನಿನ್ನೆ ಸಂಜೆ ಸೌಜನ್ಯಳ ಮನೆಗೆ ಬಂದು ಸೌಜನ್ಯ ಕುಟುಂಬಸ್ಥರನ್ನು ಒತ್ತಾಯಿಸಿದ್ದಾರೆ. ಏಕಾಏಕಿ ಸೌಜನ್ಯಾ ಕುಟುಂಬದ ಮೇಲೆ ಅವರಿಗೆ ಮಣ್ಣ ಸಂಕ ಮುಳುಗಿ ಹೋಗುವಷ್ಟು ಕಕ್ಕುಲತಿ ಉಕ್ಕಿ ಹರಿದಿದೆ.
ಅಲ್ಲಿಗೆ ಬಂದ ವ್ಯಕ್ತಿಗಳು, ಅವರ ನಡೆ ನುಡಿ ಮತ್ತು ಕಳೆದ ಕೆಲ ವಾರಗಳಿಂದ ಅವರುಗಳು ವೇದಿಕೆಯಲ್ಲಿ ಮತ್ತು ಹೊರಗೆ ಆಡುತ್ತಿರುವ ಆಟಗಳು ನಿನ್ನೆ ಸಂಪೂರ್ಣ ಬಯಲಾಗಿದೆ.

ಯಾಕೆ ಸೌಜನ್ಯಾ ಕುಟುಂಬದ ಮೇಲೆ ಇಷ್ಟು ಕಾಳಜಿ ಗೊತ್ತೇ ?
ಸೌಜನ್ಯಾ ಹೋರಾಟ ಪಡೆದುಕೊಳ್ಳುತ್ತಿರುವ ವೇಗ ಮತ್ತು ಅದರ ಒಳಕ್ಕೆ ಸೇರಿಕೊಳ್ಳುತ್ತಿರುವ ಬುದ್ಧಿವಂತ ಮತ್ತು ನಿಜಕ್ಕೂ ಸೌಜನ್ಯಳಿಗೆ ನ್ಯಾಯ ಕೊಡಿಸಬೇಕು ಎಂದುಕೊಂಡಿರುವ ತಂಡ ಕಂಡು ಅಪರಾಧಿಗಳು ಮತ್ತು ಅವರನ್ನು ರಕ್ಷಿಸುತ್ತಾ ಬಂದ ಭೂಪತಿಗಳು ಥoಡಾ ಹೊಡೆದು ಹೋಗಿದ್ದಾರೆ. ಹೇಗಾದ್ರೂ ಮಾಡಿ ಸೌಜನ್ಯ ಕುಟುಂಬವನ್ನು ಒಪ್ಪಿಸಿ ಒಂದು ಬಾರಿ ಮೇಲ್ಮನವಿ ಸಲ್ಲಿಸೋಣ ಎನ್ನುವುದು ಅವರ ಪ್ಲಾನ್. ಒಂದು ವೇಳೆ ಮೊನ್ನೆ ಕೊಟ್ಟ ಸಿಬಿಐ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದರೆ ಅಲ್ಲಿಗೆ ಕಥೆ ಮುಗಿಯಿತು: ಮತ್ತೆ ನಿರಪರಾಧಿಯಾಗಿ, ಈಗ ಬಿಡುಗಡೆಯಾಗಿ ಅಯ್ಯಪ್ಪ ದೇವಸ್ಥಾನದಲ್ಲಿ ದೇವರ ಸೇವಾ ಕಾರ್ಯ ನಡೆಸಿಕೊಂಡು ತನ್ನ ಪಾಡಿಗೆ ತಾನು ಬದುಕುತ್ತಿರುವ ಸಂತೋಷ ರಾವ್ ಮತ್ತೆ ಆರೋಪಿಯಾಗುತ್ತಾನೆ, ಜೈಲು ಸೇರುತ್ತಾನೆ. ಮತ್ತೆ ಸಂತೋಷ್ ರಾವ್ ಜೈಲು ಸೇರಿ, ತನಿಖೆಯ ನೆಪದಲ್ಲಿ ಕಳೆದ ಬಾರಿ ಕಾಲ ತಳ್ಳಿದ ಹಾಗೆ ಮತ್ತೆ ಒಂದು ದಶಕ ಮತ್ತೆರಡು ವರ್ಷ ಮುಂದಕ್ಕೆ ತಳ್ಳಿದರೆ, ಆಗ ಒಟ್ಟಾರೆ ಸೌಜನ್ಯಾ ಕೇಸಿಗೆ ಭರ್ತಿ ಸಿಲ್ವರ್ ಜ್ಯುಬಿಲಿ ಆಚರಿಸಿಕೊಳ್ಳುವ ವಯಸ್ಸಾಗುತ್ತದೆ. ಆಗ ಆರೋಪಿಗಳಿಗೆ, ಸೌಜನ್ಯ ಕುಟುಂಬಕ್ಕೆ, ಹೋರಾಟಗಾರರಿಗೆ ಮತ್ತು ಇವರೆಲ್ಲರನ್ನು ರಕ್ಷಿಸುತ್ತಾ ಬಂದಿರುವ ಭೂಪತಿಗಳಿಗೆ ಕೂಡಾ ವಯಸ್ಸಾಗುತ್ತದೆ. ಸೌಜನ್ಯಾ ಹೋರಾಟ ಅಲ್ಲಿಗೆ ಅಂತ್ಯವಾದಂತೆ. ಅದಕ್ಕಾಗೇ ‘ನಾಲ್ಕು ದಿನಗಳ ಎಕ್ಸ್ ಪೈರಿ ‘ ಪ್ಲಾನ್ ಹಿಡಿದುಕೊಂಡು ಸೌಜನ್ಯಾ ಕುಟುಂಬವನ್ನು ನಾಚಿಕೆಗೆಟ್ಟ, ಮಾನಗೆಟ್ಟ ತಂಡ ನಿನ್ನೆ ಭೇಟಿ ಆಗಿದೆ.

ಆದರೆ ಬಿಜೆಪಿಯನ್ನಾಗಲಿ, ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತು ನಾಯಕರನ್ನಾಗಲಿ ನಂಬಲು ಸೌಜನ್ಯ ಕುಟುಂಬದವರ ತಲೆ ಮೇಲೆ ‘ಬನ್ಪಿನ ‘ ಮರದ ಪಕ್ಕಾಸ್ ಬಿದ್ದಿಲ್ಲ. ಹಾಗಾಗಿ ಅವರು, ”ನಾವು ನಿಮ್ಮ ಸಲಹೆ ಮತ್ತು ಸಹಕಾರವನ್ನು ಸ್ವೀಕರಿಸುತ್ತೇವೆ. ಕಾನೂನು ರೀತಿಯ ಸಹಾಯ ಮಾಡಬಲ್ಲ ಎಲ್ಲಾ ತಂಡ ಇದೀಗ ನಮ್ಮಲ್ಲಿದೆ. ಕಳೆದ 11 ವರ್ಷಗಳಿಂದ ನಾವು ನ್ಯಾಯಕ್ಕಾಗಿ ಕಣ್ಣೀರು ಹಾಕಿ ನ್ಯಾಯ ಬೇಡುತ್ತಿದ್ದೇವೆ. ಇವತ್ತಿಗೂ ನ್ಯಾಯ ನಮಗೆ ಮರೀಚಿಕೆಯಾಗಿದೆ. ಕಾನೂನು ಪ್ರಕ್ರಿಯೆಗಳನ್ನು ನಾವು ನೋಡಿಕೊಳ್ಳುತ್ತೇವೆ, ಉಳಿದ ವಿಚಾರಕ್ಕೆ ನಿಮ್ಮ ಬೆಂಬಲವಿರಲಿ ”ಎಂದು ನಯವಾಗಿಯೇ ಹೇಳಿದ್ದಾರೆ. ಆದರೆ, ಸೌಜನ್ಯಾ ತಾತ ಚಂದಪ್ಪ ಗೌಡ ಮಾತ್ರ ಪಾದಯಾತ್ರೆಯ ಸಂದರ್ಭ ನಡೆದ ಡ್ರಾಮ ಬಗ್ಗೆ ನೇರವಾಗಿ ಪ್ರಶ್ನಿಸಿ ಪ್ರತಿಭಟಿಸಿದ್ದಾರೆ. ಇದು ನೋಡಿ, ಕಡು ಭ್ರಷ್ಟರ, ಅತ್ಯಾಚಾರ ಆರೋಪಿಗಳ ಪರ ನಿಂತ ಬಿಜೆಪಿ ಮತ್ತು ಪರಿವಾರದ ನಾಯಕರ ಊಸರವಲ್ಲಿಯ ನಡೆ.(ಮುಂದುವರೆಯುವುದು…..)

Part-2: ಪಾದಯಾತ್ರೆಯ ಸಂದರ್ಭ ಆಗಿತ್ತು ಸೌಜನ್ಯ ಕುಟುಂಬಕ್ಕೆ ಮಾರಾ ಮೋಸ. ಸಂಪೂರ್ಣ ವಿವರವನ್ನು ಪಾರ್ಟ್ – 2 ರಲ್ಲಿ ಪಬ್ಲಿಷ್ ಮಾಡಲಿದ್ದೇವೆ. ನಿರೀಕ್ಷಿಸಿ…!!

ಇದನ್ನೂ ಓದಿ: Gruha Lakshmi Scheme: ʼಗೃಹಲಕ್ಷ್ಮಿʼ ಯೋಜನೆಯ ಹಣ ಯಜಮಾನಿಯರಿಗೆ ಇನ್ನೂ ದೊರಕಿಲ್ಲವೇ? ಹಾಗಾದರೆ ತುರ್ತಾಗಿ ಈ ಒಂದು ಕೆಲಸ ಮಾಡಿ!! ಇಲ್ಲದಿದ್ದರೆ ಖಾತೆಗೆ ಸೇರಲ್ಲ ಹಣ!!!

Leave A Reply

Your email address will not be published.